ಉತ್ತರಪ್ರಭ

ಗದಗ: ಗದಗ ಬೆಟಗೇರಿ ನಗರಸಭೆ ಸಾರ್ವತ್ರಿಕ ಚುನಾವಣೆ–2021,  ಚುನಾವಣೆ ದಿನದಿಂದ ದಿನಕ್ಕೆ ರಂಗೇರುತ್ತಿದೆ. ಮತದಾನಕ್ಕೆ ಬರಿ ಎರಡು ದಿನ ಬಾಕಿ ಇರುವ ಬೆನ್ನಲ್ಲಿ, ಅದರಲ್ಲೂ  25ನೇ ವಾರ್ಡ ಅಂತು ತುಂಬಾ ಕೂತೂಹಲ ಮೂಡಿಸಿದೆ, ಅಂದ ಹಾಗೆ ಶಹರದ 25ನೇ ವಾರ್ಡಿನಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿರುವ ಮಾನ್ವಿಗೆ  ಹೆಚ್ಚಿನ ಪ್ರಮಾಣದಲ್ಲಿ ಜನರ ಬೆಂಬಲವನ್ನು ಕಂಡರೇ  ಈ  ಬಾರಿ ಅವರ ಗೆಲುವು ನಿಶ್ಚಿತ ಎಂದು ಮತದಾರರು  ಮಾತನಾಡುತ್ತಿರುವುದು ಭಾರಿ ಕೂತೂಹಲ ಕೆರಳಿಸಿದೆ. ಅದೇ ವಾರ್ಡಿನಿಂದ ಯುಥ್ ಕಾಂಗ್ರೆಸ್ನ ಜಿಲ್ಲಾಧ್ಯಕ್ಷ ಅಶೋಕ ಮಂದಾಲಿಯು  ಗೆಲುವಿಗಾಗಿ ಪಕ್ಷದ ಮುಖಂಡರ ದಂಡು ಬಂದು ಅವರಪರ ಮತಯಾಚನೆ ಮಾಡುತ್ತಿದ್ದಾರೆ. ಯಾಕೋ ಈ  ಬಾರಿ ಮತದಾರರು ಅವರತ್ತ ಒಲವು ತೋರದಿರುವುದು ನೋಡಿದರೆ ಈ ಬಾರಿ ಬಿಜೆಪಿಯ ಮಾನ್ವಿಗೆ ಅದರ ಲಾಭ ವಾಗಬಹುದೆಂಬುದು ಮತ ದಾರರ ಲೇಕ್ಕಾಚಾರ ಮತ್ತು ಈ ಬಾರಿ ಅಶೋಕ ಮಂದಾಲಿ ಮಂದಾಗೋ ಸಾಧ್ಯತೆ ಹೆಚ್ಚು ಎಂಬ ಅಭಿಪ್ರಾಯ ಕೆಳಿಬರುತ್ತಿದೆ. ಅದರೊಂದಿಗೆ ಬದಲಾವಣೆ ಬಯಸಿದ್ದಾರೆ ಇದರಿಂದ ವಾರ್ಡ ಅಭಿವೃದ್ಧಿ ಆಗಬಹುದೆಂದು ಜನರು ಆಶಯ ವ್ಯಕ್ತಪಡಿಸುತ್ತಿದ್ದಾರೆ.

ಇಲ್ಲಿಯ ಕಾಗದಗೇರಿ, ಹಾಳದಿಬ್ಬಾ, ಮುಲ್ಲಾಓಣಿ, ಕರಿದೇವರ ಗುಡಿ ಸೇರಿದಂತೆ ವಾರ್ಡಿನ  ಎಲ್ಲರ ಬೆಂಬಲವು ಮಾನ್ವಿ ಪರ ಇದೇ ಅದರಲ್ಲೂ ವಿಶೇಷವಾಗಿ ಹೆಚ್ಚಿನ ಮತವನ್ನು ಹೊಂದಿರುವ ಲಿಂಗಾಯತ ಸಮುದಾಯ, ಎಸ್ ಎಸ್ ಕೆ ಸಮಾಜದ ಮತದಾರರು ಸೇರಿದಂತೆ ಎಲ್ಲರ ಒಲವು ಅವರ ಪರವಾಗಿ ಇರುವುದನ್ನು ನೋಡಿದರೆ  ಕಾಂಗ್ರೆಸ್ ಅಭ್ಯರ್ಥಿಯ ಗೆಲುವು ಕಷ್ಟ ಎಂದು ಮತದಾರರ ಮನದಾಳದ ಮಾತಾಗಿದೆ.

ಅದಲ್ಲದೆ ಚುನಾವಣೆಯು ಒಂತರಾ ಮ್ಯಾಜಿಕ್ ಇದ್ದಹಾಗೆ ಚುನಾವಣೆ ಮುಗಿದು ಫಲಿತಾಂಶ ಬರುವರೆಗು ಯಾರು ಗೆಲ್ಲುತ್ತಾರೆಂದು ಕಾದುನೋಡೊಣ.

Leave a Reply

Your email address will not be published. Required fields are marked *

You May Also Like

ಕಡಕೋಳದಲ್ಲಿ ಸಿಡಿಲು: ಮೂವರು ಸಾವು: ನಾಲ್ವರಿಗೆ ಗಂಭೀರ ಗಾಯ

ತಾಲೂಕಿನ ಕಡಕೋಳ ಗ್ರಾಮದಲ್ಲಿ ಶನಿವಾರ ಸುರಿದ ಭಾರಿ ಮಳೆಗೆ ಸಿಡಿಲು ಬಡಿದು ಮೂವರು ಸಾವನ್ನಪ್ಪಿದ ಧಾರುಣ ಘಟನೆ ಜರುಗಿದೆ. ಘಟನೆಯ ವಿವರ: ಕಡಕೋಳ ಗ್ರಾಮದ ನಿವಾಸಿಗಳಾದ ಕುಮಾರ(24), ಶರಣಪ್ಪ ಮಾಲಿಂಗಪ್ಪ(38) ಮಾರುತಿ(50) ಹೊಲ ನೋಡಿ ಬರಲು ಹೋಗಿದ್ದು, ಮಳೆ, ಗಾಳಿ ಪ್ರಾರಂಭವಾಗಿದ್ದರಿಂದ ಅಲ್ಲಿಯೇ ಗಿಡದ ಮರೆಯಲ್ಲಿ ನಿಂತುಕೊಂಡಿದ್ದಾರೆ. ದುರಾದೃಷ್ಟವಶಾತ್ ಸಿಡಿಲು ಬಡಿದು ಈ ಮೂವರು ಸಾವನ್ನಪ್ಪಿದ್ದಾರೆ.

ಮೋದಿ ಸರ್ಕಾರ ಜನರಿಗೆ ಬೆಲೆ ಏರಿಕೆ ಬರೆ ನೀಡುತ್ತಿದೆ: ತಾಹೀರ್ ಹುಸೇನ್

ಕೇಂದ್ರ ಸರ್ಕಾರ ಅಗತ್ಯ ವಸ್ತುಗಳಾದ ಅಡುಗೆ ಅನಿಲ, ಪೆಟ್ರೋಲ್, ಡೀಸೆಲ್ ಬೆಲೆ ಹೆಚ್ಚಳ ಮಾಡಿದ್ದನ್ನು ತೀರ್ವವಾಗಿ ಖಂಡಿಸುತ್ತದೆ ಎಂದು ವೆಲ್ವೇರ್ ಪಾರ್ಟಿ ಆಫ್ ಇಂಡಿಯಾ ರಾಜ್ಯಾಧ್ಯಕ್ಷ ತಾಹೀರ್ ಹುಸೇನ್ ಹೇಳಿದರು.

ಜೂನ್ 7 ರವರೆಗೆ ಕೊಪ್ಪಳ ಜಿಲ್ಲೆ ಸಂಪೂರ್ಣ ಲಾಕ್ ಡೌನ್- ಡಿಸಿ

ಕೊಪ್ಪಳ: ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಳವಾಗುತ್ತಿರುವ ಹಿನ್ನೆಲೆ ಕೊಪ್ಪಳ ಜಿಲ್ಲೆಯನ್ನು ಮೇ.31 ಬೆಳಿಗ್ಗೆ 6 ಗಂಟೆಯಿಂದ ಜೂ.7 ರಾತ್ರಿ 12 ಗಂಟೆಯ ವರೆಗೆ ಸಂಪೂರ್ಣ ಲಾಕಡೌನ್ ಮುಂದುವರೆಸಲಾಗುವುದು ಎಂದು ಜಿಲ್ಲಾಧಿಕಾರಿ ಎಸ್.ವಿಕಾಸ್ ಕಿಶೋರ್ ಆದೇಶ ಹೊರಡಿಸಿದ್ದಾರೆ.

ರಾಜ್ಯದಲ್ಲಿ 18 ಭ್ರಷ್ಟರ ಬೇಟೆಯಾಡಿದ ಎಸಿಬಿ: ಗದುಗಿನ ಬಸವಕುಮಾರ್ ಅಣ್ಣಿಗೇರಿಗೆ ಬಿಗ್ ಶಾಕ್

ಉತ್ತರಪ್ರಭರಾಜ್ಯ: ಇಂದು ರಾಜ್ಯಾದ್ಯಂತ ಭ್ರಷ್ಟರ ವಿರುದ್ಧ ಎಸಿಬಿ ದಾಳಿ ನಡೆಸಿದ್ದು, ಹಲವು ಇಲಾಖೆಗಳ 18 ಅಧಿಕಾರಿಗಳ…