ಉತ್ತರಪ್ರಭ ಸುದ್ದಿ

ಮುಳಗುಂದ: ಇಲ್ಲಿನ ಪಟ್ಟಣ ಪಂಚಾಯ್ತಿ ಕಾರ್ಯಾಲಯದಲ್ಲಿ ಸ್ಥಾಪಿಸಿದ ಧಾರವಾಡ ವಿಧಾನ ಪರಿಷತ್ ಚುನಾವಣೆಯ ಮತಗಟ್ಟೆ ಸಂಖ್ಯೆ 116 ರಲ್ಲಿ ಗದಗ ವಿಧಾನಸಭೆ ಕ್ಷೇತ್ರದ ಶಾಸಕ ಎಚ್.ಕೆ.ಪಾಟೀಲ ಅವರು ಶುಕ್ರವಾರ ಮುಂಜಾನೆ ಪಟ್ಟಣ ಪಂಚಾಯ್ತಿ ಸದಸ್ಯರೊಂದಿಗೆ ಮತಗಟ್ಟೆಗೆ ಆಗಮಿಸಿ ಮತ ಚಲಾಯಿಸಿದರು.
ನಂತರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು ಧಾರವಾಡ ಒಳಗೊಂಡಂತೆ ಹಾವೇರಿ ಮತ್ತು ಗದಗ ಜಿಲ್ಲೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಸಲೀಂ ಅಹ್ಮದ ಅವರಿಗೆ ಪ್ರಥಮ ಪ್ರಾಶಸ್ತ್ಯದ ನಿರೀಕ್ಷೆಮೀರಿ ಹೆಚ್ಚಿನ ಮತಗಳು ಬರಲಿದ್ದು, ರಾಜ್ಯದ ವಿಧಾನ ಪರಿಷತ್ತಿನ 20 ಸ್ಥಾನಗಳಲ್ಲಿ 12 ಕ್ಕೂ ಹೆಚ್ಚು ಸ್ಥಾನಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳು ಗೆಲವು ಸಾಧಿಸಲಿದ್ದಾರೆ. ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಸೇನಾ ಹೆಲಿಕಾಪ್ಟರ್ ಪತನ ಉನ್ನತ ತನಿಖೆಯಾಗಲಿ:
ಸೇನಾ ಹೆಲಿಕಾಪ್ಟರ್ ಪತನ ದುರಂತದಲ್ಲಿ ಮೃತಪಟ್ಟ ಸೇನಾ ಪಡೆಗಳ ಮುಖ್ಯಸ್ಥ ಬಿಪಿನ್ ರಾವತ್ ಹಾಗೂ ಸೇನೆಯ ಅಧಿಕಾರಿಗಳ ಸಾವು ದೇಶಕ್ಕೆ ತುಂಬಲಾರದ ಹಾನಿ, ದೇಶ ಸೇವೆಗಾಗಿ ತಮ್ಮನ್ನು ಅರ್ಪಣೆಗೆ ಸಿದ್ದರಾಗಿ ದೇಶ ಸೇವೆ ಮಾಡಿದವರು. ರಾವತ್ ಅವರು ದೇಶದ ಅತ್ಯತ್ತಮ ಅಧಿಕಾರಿಯಾಗಿದ್ದರು. ಎಂದು ಸಂತಾಪ ವ್ಯಕ್ತಪಡಿಸಿದರು.
ಈ ದುರ್ಘಟನೆ ನಡೆದಿದ್ದರ ಬಗ್ಗೆ ಉನ್ನತ ತನಿಖೆ ಆಗಬೇಕು, ಭದ್ರತಾ ನಿರ್ವಹಣೆ ಕನಿಷ್ಟ ಇವೆ, ಯಾವರೀತಿ ನಿಷ್ಕ್ರಿಯೆ ನಡೆದಿದೆ ಎನ್ನುವುದಕ್ಕೆ ಇದು ಕನ್ನಡಿ ಇದ್ದಂತೆ, ಇದಕ್ಕೆ ಸಂಬಂಧಿಸಿದವರು ಎಚ್ಚೆತ್ತುಕೊಳ್ಳಬೇಕು. ಬಿಜೆಪಿ ಸರ್ಕಾರ ಇದನ್ನು ಲಘುವಾಗಿ ಪರಿಗಣಿಸದೇ ಗಂಬೀರವಾಗಿ ತನಿಖೆ ಮತ್ತು ಘಟನೆಗಳು ಮರುಕಳಿಸದಂತೆ ಕ್ರಮಗಳನ್ನ ಕೈಗೊಳ್ಳಬೇಕು. ಕೇಂದ್ರ ಸರ್ಕಾರ ಮಹತ್ವದ ವ್ಯಕ್ತಿಗಳ ಭದ್ರತೆ ಮತ್ತು ದೇಶ ಸೇವೆಯಲ್ಲಿರುವವರನ್ನ ಸರ್ಕಾರ ಲಘುವಾಗಿ ಪರಿಗಣೆಗಣಿಸುತ್ತಿದೆ. ಮುಂದೆ ಇಂತಹ ದುರ್ಘಟನೆ ನಡೆಯದಂತೆ ಎಚ್ಚರ ವಹಿಸಬೇಕು. ಎಂದು ಆಗ್ರಹಿಸಿದರು.
ಈ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಬಿ.ವಿ.ಸುಂಕಾಪೂರ,ಮುಖಂಡರಾದ ಎಸ್.ಎಂ.ನೀಲಗುಂದ, ಎಂ.ಡಿ.ಬಟ್ಟೂರ, ಬಿ.ಎಂ.ವಾಲಿ, ಅಶೋಕ ಸೋನಗೋಜಿ, ಅಶೋಕ ಹುಣಸಿಮರದ, ಸಿದ್ದು ಪಾಟೀಲ, ಜಿಲ್ಲಾ ಯುವ ಕಾಂಗ್ರಸ್ ಸಮಿತಿ ಅಧ್ಯಕ್ಷ ಅಶೋಕ ಮಂದಾಲಿ ಹಾಗೂ ಪಪಂ ಸದಸ್ಯರು ಇದ್ದರು.

Leave a Reply

Your email address will not be published. Required fields are marked *

You May Also Like

ಮಹಾದೇವಪ್ಪ ಬಸಪ್ಪ ಹೆಬ್ಬಾಳ ನಿಧನ

ಆಲಮಟ್ಟಿ:ಬಸವನಬಾಗೇವಾಡಿ ತಾಲ್ಲೂಕಿನ ಮಣ್ಣೂರ ಗ್ರಾಮದ ಲಿಂಗಾಯತ ಸಮಾಜದ ಮುಖಂಡ ಮಹಾದೇವಪ್ಪ ಬಸಪ್ಪ ಹೆಬ್ಬಾಳ (69) ಶುಕ್ರವಾರ…

ಗದಗನಲ್ಲಿ ಮತ್ತೊಂದು ಕೊರೋನಾ ಪಾಸಿಟಿವ್ : ಸೋಂಕಿತರ ಸಂಖ್ಯೆ 18ಕ್ಕೇ ಏರಿಕೆ!

ಜಿಲ್ಲೆಯಲ್ಲಿ ಮತ್ತೊಂದು ಕೊರೋನಾ ಪಾಸಿಟಿವ್ ದೃಢವಾಗಿದೆ. ಪಿ-1307 ಕೇಸ್ ಪತ್ತೆಯಾಗಿದ್ದು 49 ವರ್ಷದ ಮಹಿಳೆ ಮುಂಬೈನಿಂದ ಇತ್ತಿಚೆಗಷ್ಟೆ ಬಂದಿದ್ದಳು ಎನ್ನಲಾಗಿದ್ದು

ಕೆಪಿಎಸ್ಇ ಪರೀಕ್ಷೆ ಬರೆಯುವವರಿಗೆ ಇಲ್ಲಿದೆ ಮುಖ್ಯ ಮಾಹಿತಿ

ಈಗಾಗಲೇ ಜನೇವರಿ ತಿಂಗಳಲ್ಲೆ ನಡೆಯಬೇಕಿದ್ದ ಪ್ರಥಮ ದರ್ಜೆ ಸಹಾಯ (ಕೆಪಿಎಸ್ಇ) ಪರೀಕ್ಷೆಯನ್ನು ಫೆ.28ಕ್ಕೆ ನಿಗಧಿ ಪಡಿಸಲಾಗಿದೆ.

ಕೋಳಿಗೆ ಡಿಸೆಂಟ್ರಿಯಂತೆ..! ಕಾರಣ ಹೇಳಿ ಹೊರಬಂದ ವ್ಯಕ್ತಿಯ ಮಾತು ಕೇಳಿ..!

ಗದಗ: ಕೋಳಿಗೆ ಭೇದಿ, ಆಸ್ಪತ್ರೆಗೆ ಕರೆದುಕೊಂಡು ಹೋಗ್ತಿದ್ದೇನೆ. ಹೀಗಂತ ಕಾರಣ ನೀಡಿದ ವ್ಯಕ್ತಿ ಮಾತಿಗೆ ಪೊಲೀಸರೆ ಸುಸ್ತಾದರು. ಲಾಕ್ ಡೌನ್ ಹಿನ್ನೆಲೆ ಅನಾವಶ್ಯಕ ಓಡಾಟಕ್ಕೆ ಬ್ರೇಕ್ ಬಿದ್ದಿದೆ.