ಉತ್ತರಪ್ರಭ ಸುದ್ದಿ

ಗದಗ: ಕನ್ನಡ ಸಾಹಿತ್ಯ ಪರಿಷತ್ ಗದಗ ಜಿಲ್ಲಾಧ್ಯಕ್ಷ ಸ್ಥಾನಕ್ಕೆ ನೆನ್ನೆ (ಭಾನುವಾರ ದಿನಾಂಕ 21-11-2021) ರಂದು ನಡೆದ ಮತದಾನ, ಜಿಲ್ಲೆಯ 10 ಮತಗಟ್ಟೆಗಳಲ್ಲಿ 4052 ಮತದಾರರು ತಮ್ಮ ಮತ ಚಲಾಯಿಸಿದ್ದು, ಅದರಲ್ಲಿ 28 ಮತಗಳು ತಿರಸ್ಕೃತಗೊಂಡಿವೆ. ಶೇ.67ರಷ್ಟು ಮತದಾನ ನಡೆದಿದೆ ಎಂದು ಚುನಾವಣಾಧಿಕಾರಿ ಕಿಶನ್ ಕಲಾಲ್ ಅವರು ಘೋಷಿಸಿದ್ದಾರೆ.

ಈ ಚುಣಾವಣಾ ಸ್ಪರ್ಧೆಯಲ್ಲಿ ಇದೆ ಮೊದಲ ಬಾರಿಗೆ ಒಟ್ಟು 2231 ಮತಗಳನ್ನು ಪಡೆಯುವದರ ಮುಲಕ ಗದಗ ಜಿಲ್ಲೆಯ ನರಗುಂದ, ನರೇಗಲ್ , ಲಕ್ಷ್ಮೇಶ್ವರ, ರೋಣ, ಗಜೇಂದ್ರಗಡ, ಮುಂಡರಗಿಯಲ್ಲಿ ಕೊನೆಯ ಹಂತದವರೆಗೂ ಮುನ್ನಡೆ ಕಾಯ್ದುಕೊಂಡಿದ್ದ  ವಿವೇಕಾನಂದಗೌಡ  ಪಾಟೀಲರು, ಹೊಳೆಆಲೂರ, ಶಿರಹಟ್ಟಿಯಲ್ಲಿ ಅಲ್ಪ ಹಿನ್ನಡೆ ಅನುಭವಿಸಿ, ಕ ಸಾ ಪ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.

ಒಟ್ಟು ಮತ ಪಡೆದವರ ವಿವರ:

  • ವಿವೇಕಾನಂದಗೌಡ ಪಾಟೀಲ್ – 2231
  • ಡಾ.ಶರಣು ಗೋಗೇರಿ – 1666
  • ಡಾ.ಸಂಗಮೇಶ ತಮ್ಮನಗೌಡರ – 67
  • ಐ.ಕೆ.ಕಮ್ಮಾರ  – 60
ವಿವೇಕಾನಂದಗೌಡ ಪಾಟೀಲ
ನೂತನ ಅಧ್ಯಕ್ಷ, ಗದಗ ಜಿಲ್ಲಾ ಕಸಾಪ
ಇಡೀ ಜಿಲ್ಲೆಯ ಸಾಂಸ್ಕೃತಿಕ ಲೋಕದ ಗೆಲುವು ಇದಾಗಿದೆ. ಜಿಲ್ಲೆಯ ಎಲ್ಲಾ ಸಾಹಿತಿಗಳು, ಗುರು, ಹಿರಿಯರು ಬಹಿರಂಗವಾಗಿ ಮತ ಯಾಚಿಸಿದ್ದು ನನ್ನ ಗೆಲುವಿಗೆ ಪ್ರಮುಖ ಕಾರಣ. ಜಾತ್ಯತೀತ, ಪಕ್ಷಾತೀತ, ಧರ್ಮಾತೀತ ವಿಜಯ ಇದಾಗಿದೆ. ಕಳೆದ ವರ್ಷದಿಂದ ಅನೇಕ ಹಿರಿಯ ಮನಸುಗಳ ಹಗಲಿರುಳು ಹೋರಾಟಕ್ಕೆ ಸಂದ ಜಯ ಇದಾಗಿದೆ. ಗೆಲುವಿಗೆ ಕಾರಣರಾದ ಎಲ್ಲ ಮತದಾರರಿಗೆ, ಸಾಹಿತಿಗಳಿಗೆ, ಕಲಾವಿದರಿಗೆ ಮತ್ತು ಮಾಧ್ಯಮ ಸ್ನೇಹಿತರಿಗೆ ಋಣಿಯಾಗಿದ್ದೆನೆ, ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಕಾರ್ಯಕ್ರಮ ರೂಪಿಸಲಾಗುವುದು.

Leave a Reply

Your email address will not be published. Required fields are marked *

You May Also Like

ಕೊರೊನಾ ವಾರಿಯರ್ಸ್ ನಿಜವಾದ ಹಿರೋಗಳು: ಜನಜಾಗೃತಿಯ ಸಂದೇಶ ನೀಡುವ ಚಿತ್ರರಂಗದ ದಿಗ್ಗಜರ ದೃಶ್ಯರೂಪಕ

ಕೊರೊನಾ ಜಾಗೃತಿಗಾಗಿ ಕನ್ನಡ ಚಿತ್ರರಂಗದ ದಿಗ್ಗಜರು ಸಂದೇಶ ನೀಡಿದ ದೃಶ್ಯ ರೂಪಕವನ್ನು ನೀವು ನೋಡಬಹುದು.

ರಾಜ್ಯದಲ್ಲಿ 18 ಭ್ರಷ್ಟರ ಬೇಟೆಯಾಡಿದ ಎಸಿಬಿ: ಗದುಗಿನ ಬಸವಕುಮಾರ್ ಅಣ್ಣಿಗೇರಿಗೆ ಬಿಗ್ ಶಾಕ್

ಉತ್ತರಪ್ರಭರಾಜ್ಯ: ಇಂದು ರಾಜ್ಯಾದ್ಯಂತ ಭ್ರಷ್ಟರ ವಿರುದ್ಧ ಎಸಿಬಿ ದಾಳಿ ನಡೆಸಿದ್ದು, ಹಲವು ಇಲಾಖೆಗಳ 18 ಅಧಿಕಾರಿಗಳ…

ಮೊಮ್ಮಗನಿಗೆ ಕೊರೊನಾ ಬಂದಿದ್ದಕ್ಕೆ ಆತ್ಮಹತ್ಯೆ ಮಾಡಿಕೊಂಡ ಅಜ್ಜಿ!

ಕಾರವಾರ: ಕೊರೊನಾ ಸೋಂಕಿತನ ಸಂಪರ್ಕ ಹೊಂದುವ ಮೂಲಕ ಕ್ವಾರಂಟೈನ್ ಆಗಿದ್ದ ವೃದ್ಧೆಯೊಬ್ಬರು ತಮಗೂ ಕೊರೊನಾ ಬಂದಿದೆ…

ಪಿಯುಸಿ: ಅನುತ್ತೀರ್ಣ ವಿದ್ಯಾರ್ಥಿಗಳಿಗೆ ಅವಕಾಶ

ಪಿಯುಸಿ ಅನುತ್ತೀರ್ಣ ವಿದ್ಯಾರ್ಥಿಗಳು ಓ.ಎಂ.ಆರ್ ಅರ್ಜಿಗಾಗಿ ಕಾಯದೆ ಫಲಿತಾಂಶ ಪಟ್ಟಿ ಆಧಾರದ ಮೇಲೆ ಅನುತ್ತೀರ್ಣ ವಿಷಯಗಳಿಗೆ ಪರೀಕ್ಷೆ ಬರೆಯಲು ಅವಕಾಶ ನೀಡಲಾಗಿದ್ದು, ಈ ಕೆಳಗಿನಂತೆ ಶುಲ್ಕ ಭರಣಾ ಮಾಡಲು ತಿಳಿಸಲಾಗಿದೆ.