ರೋಣ : ತಾಲೂಕಿನ ಡಿ ಪೌಲ್ ಅಕ್ಯಾಡಮಿ ಶಾಲೆಯ ಶಿಕ್ಷಕನನ್ನು ಕೆಲಸದಿಂದ ವಜಾಗೊಳಿಸಿದ ಕಾರಣ ಮನನೊಂದು ಆತ್ಮ ಹತ್ಯೆಕ್ಕೆ ಯತ್ನಿಸಿದ ಘಟನೆ ನಡೆದಿದೆ.ಪಟ್ಟಣದ ಹೊರವಲಯದಲ್ಲಿ ಇರುವ ಡಿ ಪೌಲ್ ಅಕ್ಯಾಡಮಿ ಶಾಲೆಯಲ್ಲಿ ಬಹುದಿನಗಳಿಂದ ಒಂದಲ್ಲ ಒಂದು ದರ‍್ಘಟನೆಗಳು ನಡೆಯುತ್ತಲೇ ಇರುತ್ತವೆ. ಗುರುವಾರ ಸಹ ಶಿಕ್ಷಕನಾಗಿ ಸೇವೆ ಯಲ್ಲಿದ್ದ ಪಿ ನಾಗರಾಜ ಎಂಬ ವ್ಯಕ್ತಿಯನ್ನು ಸೇವೆಯಿಂದ ವಜಾಗೊಳಿಸಿ ಬೇರೆ ಶಿಕ್ಷಕರನ್ನು ನೇಮಕ ಮಾಡಿಕೊಂಡಿರುತ್ತಾರೆ.


ಮನನೊಂದ ನಾಗಾರಾಜನು ಸರ್ ಹೀಗೆ ಮಧ್ಯದಲ್ಲಿ ನನ್ನನ್ನು ವಜಾಮಾಡಿದರೆ ಮುಂದೆ ನನ್ನ ಭವಿಷ್ಯಕ್ಕೆ ತುಂಬಾ ತೊಂದರೆಯಾಗುವದು ಎಂದು ಫಾದರಗೆ ಮನವಿ ಮಾಡಿಕೊಂಡ . ಫಾದರ್ ನೀನು ಈ ಸಧ್ಯ ಬಿಡು ನಿನಗೆ ಏಪ್ರಿಲ್ ವರೆಗೂ ವೇತನ ನೀಡುವುದಾಗಿ ಹೇಳಿ ಮೋಸ ಮಾಡಿದ್ದಾರೆ. ಅಷ್ಟೇ ಅಲ್ಲಾ ನನ್ನ ಪಿ ಎಫ್ ದುಡ್ಡು ಕೇಳಿದರೆ ನಾಲ್ಕು ಸಾವಿರ ದುಡ್ಡು ಕೇಳುವರು, ಹಾಗೂ ನನ್ನ ನಾಲ್ಕು ಚೆಕ್ ಪಡೆದು ಅದರಲ್ಲಿ ನನ್ನ ಖಾತೆಯಿಂದ 8000 ಸಾವಿರ ಹಣ ಪಡೆದಿದ್ದಾರೆ ಇದನ್ನೆಲ್ಲಾ ವಿಚಾರಿಸಲು ಹೋದರೆ ನನಗೆ ಅವಾಜ್ ಹಾಕಿ ಏನ್ ಮಾಡ್ತಿಯಾ ನೀನು ಮಾಡ್ಕೋ ಹೋಗು ಎಂದು ಗದರಿಸುವರು ಆದಕಾರಣ ನಾನು ಅಸಹಾಯಕನಾಗಿ ಅಲ್ಲಿಯೇ ವಿಷ ಸೇವಿಸಿ ಬಿದ್ದರೂ ಕೂಡಾ ಖ್ಯಾರೇ ಎನ್ನದ ಆಡಳಿತ ಮಂಡಳಿಯವರು ನನ್ನನ್ನು ನೋಡಿಯೂ ಸ್ವಲ್ಪವು ಮಾನವೀಯತೆ ತೋರದೆ ಹಾಗೇ ಹೋದರು ಎಂದು ನೇರವಾಗಿ ಆರೋಪ ಮಾಡಿದ ನಾಗರಾಜ.
ಅಲ್ಲಿಂದ ಹೇಗೂ ಮಾಡಿ ತಾಲೂಕ ಸರಕಾರಿ ಆಸ್ಪತ್ರೆ ಹೋಗಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿರುವ ಶಿಕ್ಷಕ ರೋಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಳಿಸಿ ತನಿಖೆ ನಡೆಸಿದ್ದಾರೆ.

Leave a Reply

Your email address will not be published. Required fields are marked *

You May Also Like

ಬ್ಯಾಂಕಿನಲ್ಲಿಟ್ಟ ಠೇವಣಿಯ ಬಡ್ಡಿದರ ಇಳಿಕೆ..!

ತಾವು ಇಟ್ಟ ಹಣಕ್ಕೆ ಬಡ್ಡಿಯಾದರೂ ಸಿಗುತ್ತೆ ಎನ್ನುವ ಕಾರಣಕ್ಕೆ ಬಹುತೇಕರು ಬ್ಯಾಂಕಿನಲ್ಲಿ ಹಣ ಠೇವಣಿ ಇಡುವುದು ಸಹಜ. ಆದರೆ ಸ್ಟೇಟ್ ಬ್ಯಾಂಕ್ ಆಪ್ ಇಂಡಿಯಾ ಡೆಪಾಸಿಟ್ ಮೇಲಿನ ಬಡ್ಡಿ ಹಣವನ್ನೇ ಇಳಿಕೆ ಮಾಡಿದೆ.

ಪ್ರಧಾನಿಗೆ ರೈತರ ಸಂಕಷ್ಟಕ್ಕೆ ಸ್ಪಂದಿಸುವು ಕರುಣೆ ಇಲ್ಲ: ಜಿ.ಎಸ್.ಪಾಟೀಲ್ ಆರೋಪ

ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಮೂರು ಕೃಷಿ ಕಾಯ್ದೆಯನ್ನು ವಿರೋಧಿಸಿ ದೇಶದಲ್ಲಿ 3 ತಿಂಗಳಿಂದ ಹೋರಾಟ ನಡೆಸಿ ಕಾಯ್ದೆಯನ್ನು ಹಿಂಪಡೆಯಬೇಕು ಎಂದು ಒತ್ತಾಯಿಸಿದರೂ ಸರ್ಕಾರ ಹಿಂಪಡೆಯುವ ಚಿಂತನೆ ನಡೆಸುತ್ತಿಲ್ಲ. ಆದ್ದರಿಂದ ಫೆ.20 ರಂದು ಜಿಲ್ಲೆಯಲ್ಲಿ ಟ್ರ್ಯಾಕ್ಟರ್, ಬೈಕ್ ರ‍್ಯಾಲಿ ಹಾಗೂ ಪಾದಯಾತ್ರೆ ಹಮ್ಮಿಕೊಳ್ಳಲಾಗಿದೆ ಎಂದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಜಿ.ಎಸ್.ಪಾಟೀಲ ಹೇಳಿದರು.

ಅರಣ್ಯ ಒತ್ತುವರಿ ತೆರವಿನಲ್ಲಿ ಮಾನವೀಯತೆ ಅನುಸರಿಸಲು:ಸಚಿವ ಸಿ.ಸಿ.ಪಾಟೀಲರ ತಾಕೀತು

ರೂ. 5 ಲಕ್ಷ ಪರಿಹಾರ ಗದಗ ಜಿಲ್ಲೆಯ ಮುಂಡರಗಿ ತಾಲ್ಲೂಕಿನ ಕೇಲೂರು ಗ್ರಾಮದಲ್ಲಿ ನಿನ್ನೆ ಅರಣ್ಯ…

ಸಿಎಂ ರಾಜೀನಾಮೆ ಕೊಡಿಸುವ ಪ್ರಶ್ನೆ ಪಕ್ಷದ ಮುಂದಿಲ್ಲ ಎಂದ ಜೋಶಿ…!

ಹುಬ್ಬಳ್ಳಿ: ಮುಖ್ಯಮಂತ್ರಿ ಬದಲಾವಣೆ ಮಾಡುವ ಪ್ರಶ್ನೆಯೇ ಇಲ್ಲ. ಸಿಎಂ ರಾಜೀನಾಮೆ ಕೊಡಿಸುವ ಯಾವ ಪ್ರಶ್ನೆ ಪಕ್ಷದ ಮುಂದಿಲ್ಲ‌ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಹೇಳಿದರು.