ಇತ್ತೀಚೆಗೆ ಕ್ರಿಪ್ಟೋ ಕರೆನ್ಸಿ ಅನ್ನೋದು ಭಾರೀ ಸುದ್ದಿಯಲ್ಲಿದೆ. ಅದರಲ್ಲೂ ಬಿಟ್ ಕಾಯಿನ್ ತುಂಬಾನೇ ಜನಪ್ರಿಯವಾಗಿದೆ. ಹಾಗಾದ್ರೆ ಏನಿದು ಕ್ರಿಪ್ಟೋ ಕರೆನ್ಸಿ? ಸಾಮಾನ್ಯ ಹಣಕ್ಕೂ ಇದಕ್ಕೂ ಏನು ವ್ಯತ್ಯಾಸ..? ಸಾಮಾನ್ಯ ನೋಟಿನ ಬದಲು ಕ್ರಿಪ್ಟೋ ಕರೆನ್ಸಿ ಬಳಕೆ ಮಾಡಿದರೆ ಲಾಭ ಏನು..? ಈ ಹಣಕಾಸು ವಹಿವಾಟು ಸುರಕ್ಷಿತವೇ..? ಸಾಮಾನ್ಯ ಹಣಕಾಸು ವ್ಯವಹಾರ, ಬ್ಯಾಂಕಿoಗ್ ವ್ಯವಹಾರಕ್ಕಿಂತಾ ಇದು ಎಷ್ಟರ ಮಟ್ಟಿಗೆ ಪರಿಣಾಮಕಾರಿ..? ಇದರ ಸಂಕ್ಷೀಪ್ತ ಮಾಹಿತಿ ನಿಮಗಾಗಿ

ಕ್ರಿಪ್ಟೋಕರೆನ್ಸಿ ಎಂದರೇನು..?

ಕ್ರಿಪ್ಟೋಕರೆನ್ಸಿ ಎಂದರೆ ಅದು ಡಿಜಿಟಲ್ ಆಸ್ತಿ. ಕೈನಲ್ಲಿ ಹಿಡಿಯುವ ನೋಟಿನ ರೂಪದಲ್ಲಿ ಅದು ಇರೋದಿಲ್ಲ. ಡಿಜಿಟಲ್ ಹಣದ ರೂಪದಲ್ಲಿ ನಿಮ್ಮ ಖಾತೆಯಲ್ಲಿ ಇರುತ್ತದೆ. ಈ ಕ್ರಿಪ್ಟೋಕರೆನ್ಸಿಯನ್ನು ಕದಿಯಲು ಸಾಧ್ಯವಾಗದ ರೀತಿಯಲ್ಲಿ ಸುರಕ್ಷತೆ ಒದಗಿಸಲಾಗಿರುತ್ತದೆ. ಆದರೂ ಹ್ಯಾರ‍್ಸ್ ಕದಿಯುತ್ತಾರೆ ಅವರು ಹ್ಯಾಕಿಂಗನಲ್ಲಿ ಪರಿಣಿತಿಯನ್ನು ಹೊಂದಿರುತ್ತಾರೆ ಇದೊಂದು ಮಾಯಾಜಾಲದ ರೂಪದಲ್ಲಿ ಬಳಸಲಾಗುತ್ತದೆ. ಪಿಯರ್ ಟು ಪಿಯರ್ ಅಂದರೆ ಮದ್ಯವರ್ತಿ ಇಲ್ಲದೆ ವ್ಯವಹಾರ ನಡೆಯುತ್ತದೆ. ಇತ್ತೀಚಿನ ದಿನಗಳಲ್ಲಿ ಸಾಮಾನ್ಯವಾಗಿ ಹೂಡಿಕೆಯನ್ನು ಬ್ಯಾಂಕಿನಲ್ಲಿ ಎಪ್ ಡಿ ,ಮ್ಯುಚುಯಲ್ ಪಂಡ್ ಹೀಗೆ ಹಲವಾರು ರೀತಿಯಲ್ಲಿ ಹೂಡಿಕೆ ಮಾಡುತ್ತಾರೆ ಅದು ಸುರಕ್ಷಿತ ವ್ಯವಹಾರವಾಗಿರುತ್ತದೆ.

‘ಬ್ಲಾಕ್ ಚೈನ್’

‘ಬ್ಲಾಕ್ ಚೈನ್’ ಎಂಬ ತಂತ್ರಜ್ಞಾನ ಬಳಸಿ ಕ್ರಿಪ್ಟೋಕರೆನ್ಸಿಗೆ ಡಿಜಿಟಲ್ ರಕ್ಷಣೆ ನೀಡಲಾಗಿರುತ್ತದೆ. ಕಂಪ್ಯೂಟರ್ ನೆಟ್‌ವರ್ಕ್ ಕೂಡಾ ವಿಕೇಂದ್ರೀಕೃತ ವ್ಯವಸ್ಥೆಯಲ್ಲಿ ಕಾರ್ಯನಿರ್ವಹಿಸುತ್ತದೆ. ಈ ಕರೆನ್ಸಿಯನ್ನು ವಿತರಿಸುವ ಹಲವು ಖಾಸಗಿ ಸಂಸ್ಥೆಗಳಿವೆ. ಆದ್ರೆ, ಸರ್ಕಾರವಾಗಲಿ, ಸರ್ಕಾರಿ ಸಂಸ್ಥೆಯಾಗಲಿ ಈ ವ್ಯವಹಾರ ನಡೆಸೋದಿಲ್ಲ ಹಾಗೂ ಭಾಗಿಯಾಗುವುದಿಲ್ಲ.

ಕ್ರಿಪ್ಟೋಕರೆನ್ಸಿಯಲ್ಲಿ ಹಲವು ವಿಧ..!

ಕ್ರಿಪ್ಟೋಕರೆನ್ಸಿಗಳ ಪೈಕಿ ಮೊದಲನೆಯದು ಬಿಟ್ ಕಾಯಿನ್. ಇದು ಇಂದಿಗೂ ಅತ್ಯಂತ ಜನಪ್ರಿಯವಾದ ಕ್ರಿಪ್ಟೋ ಕರೆನ್ಸಿ. ಜೊತೆಯಲ್ಲೇ ಸಾವಿರಾರು ಬಗೆಯ ಕ್ರಿಪ್ಟೋಕರೆನ್ಸಿಗಳು ಇದೀಗ ಮಾರುಕಟ್ಟೆಯಲ್ಲಿ ಲಭ್ಯ ಇವೆ. ಕೆಲವು ಬಿಟ್ ಕಾಯಿನ್‌ಗಳ ರೂಪಾಂತರದoತೆಯೂ ಇವೆ.

2009ರಲ್ಲಿ ಸಂತೋಷಿ ನಕಮೋಟೋ ಎಂಬ ಕಾವ್ಯನಾಮದ ಸಂಸ್ಥೆಯೊoದು ಬಿಟ್ ಕಾಯಿನ್ ವ್ಯವಸ್ಥೆಯನ್ನು ಪರಿಚಯಿಸಿತು. ಇದೀಗ ಮಾರ್ಚ್ 2021ರ ಅಂಕಿ ಅಂಶವನ್ನು ನೋಡಿದರೆ ಇಡೀ ವಿಶ್ವದಲ್ಲಿ ಒಟ್ಟು 18.6 ದಶ ಲಕ್ಷ ಬಿಟ್ ಕಾಯಿನ್‌ಗಳು ಬಳಕೆಯಲ್ಲಿವೆ. ಇದರ ಒಟ್ಟು ಮಾರುಕಟ್ಟೆ ಮೌಲ್ಯ 927 ಬಿಲಿಯನ್ ಅಮೆರಿಕನ್ ಡಾಲರ್.

ಬಿಟ್ ಕಾಯಿನ್ ಮಾತ್ರವಲ್ಲ ಇನ್ನೂ ಹಲವು ಕ್ರಿಪ್ಟೋ ಕರೆನ್ಸಿ ವಿತರಣಾ ಕಂಪನಿಗಳು ಜನಪ್ರಿಯವಾಗಿವೆ. ಆಲ್ಟ್ ಕಾಯಿನ್, ಲೈಟ್ ಕಾಯಿನ್, ಪೀರ್ ಕಾಯಿನ್, ನೇಮ್ ಕಾಯಿನ್ ಹೀಗೆ ಹಲವು ಕಂಪನಿಗಳಿವೆ. ವಿಶ್ವದಲ್ಲಿ ಒಟ್ಟು 1.5 ಟ್ರಿಲಿಯನ್ ಅಮೆರಿಕನ್ ಡಾಲರ್ ಮೌಲ್ಯದ ಕ್ರಿಪ್ಟೋ ಕರೆನ್ಸಿಗಳು ಇದ್ದು, ಈ ಪೈಕಿ ಶೇ. 60ರಷ್ಟು ಬಿಟ್ ಕಾಯಿನ್‌ಗಳೇ ಇವೆ.

ಕ್ರಿಪ್ಟೋ ಕರೆನ್ಸಿಯ ಮಾರುಕಟ್ಟೆ ದರವು ಬೇಡಿಕೆ ಹಾಗೂ ಲಭ್ಯತೆ ಆಧಾರದ ಮೇಲೆ ಏರಿಳಿಕೆಯಾಗುತ್ತೆ. ಅಂದರೆ, ಬೇಡಿಕೆ ಹೆಚ್ಚಾದಂತೆ ಬೆಲೆಯೂ ಹೆಚ್ಚಾಗುತ್ತೆ. ಒಂದು ಕಂಪನಿಯ ಕ್ರಿಪ್ಟೋ ಕರೆನ್ಸಿಗೂ ಮತ್ತೊಂದು ಕಂಪನಿಯ ಕರೆನ್ಸಿಗೂ ಮೌಲ್ಯ ಹೆಚ್ಚು ಕಮ್ಮಿ ಆಗುತ್ತಿರುತ್ತೆ.

ಬಿಟ್ ಕಾಯಿನ್ ಅನ್ನೇ ಉದಾಹರಣೆಗೆ ತೆಗೆದುಕೊಂಡರೆ, ಡಿಸೆಂಬರ್ 2017ರಲ್ಲಿ ಪ್ರತಿ ಬಿಟ್ ಕಾಯಿನ್ ಮೌಲ್ಯ 19 ಸಾವಿರ ಅಮೆರಿಕನ್ ಡಾಲರ್ ಇತ್ತು. ನಂತರದ ಕೆಲ ತಿಂಗಳುಗಳಲ್ಲೇ ಇಳಿಕೆಯಾಗುತ್ತಾ ಬಂದು ಪ್ರತಿ ಬಿಟ್ ಕಾಯಿನ್ ಮೌಲ್ಯ 7 ಸಾವಿರ ಅಮೆರಿಕನ್ ಡಾಲರ್‌ಗೆ ಕುಸಿಯಿತು..! ಹೀಗಾಗಿ, ಹಣಕಾಸು ತಜ್ಞರು ಇದನ್ನು ನೀರ ಮೇಲಿನ ಗುಳ್ಳೆಗೆ ಹೋಲಿಸುತ್ತಾರೆ..!

ಕ್ರಿಪ್ಟೋ ಕರೆನ್ಸಿ ಬ್ಲಾಕ್‌ಚೈನ್ ವಿಧಾನವು ಅತ್ಯಂತ ಸುರಕ್ಷಿತ ಎಂದು ಹೇಳುತ್ತಾರೆ. ಆದ್ರೆ, ಅವು ಯಾವುದೇ ಕಾರಣಕ್ಕೂ ಹ್ಯಾಕ್ ಆಗೋದಿಲ್ಲ ಎಂದು ಹೇಳಲು ಸಾಧ್ಯವಿಲ್ಲ. ಕಳೆದ 10 ವರ್ಷಗಳ ಇತಿಹಾಸದಲ್ಲಿ ಬಿಟ್ ಕಾಯಿನ್ ವಹಿವಾಟಿನ ವೇಳೆ ಹಲವಾರು ಹ್ಯಾಕ್‌ಗಳು, ಕಳ್ಳನತ ಪ್ರಕರಣಗಳು ವರದಿಯಾಗಿವೆ. ಕೋಟ್ಯಂತರ ರೂ. ಮೌಲ್ಯದ ಕಾಯಿನ್‌ಗಳ ಕಳ್ಳತನವಾಗಿದೆ. ಇಂದು ಅದರ ಮೌಲ್ಯ ಉಹಿಸಲು ಸಾಧ್ಯವಿಲ್ಲ ಉದಾಹರಣೆಗೆ ಒಂದು ಬಿಟ್ ಕಾಯಿನ್ ಬೆಲೆ -30 ಲಕ್ಷದಿಂದ 40 ಇದೆ. ಇಡಿ ಭಾರತದಲ್ಲಿ ಇವತ್ತು ಸದ್ದು ಮಾಡುತ್ತಿದ್ದು, ರಾಜಕೀಯ ವಲಯದಲ್ಲಿ ಸಂಚಲನ ಮೂಡಿಸಿದೆ ಅದಕ್ಕೂ ಮೀರಿ ಪ್ರಧಾನಿ ಈ ಕುರಿತು ಮಹತ್ವದ ಸಭೆ ನಡೆಸಿ ಮಾಹಿತಿ ಕಲೆ ಹಾಕಿದ್ದು ವಿಶೇಷ
ಬಿಟ್ ಕಾಯಿನ್ ಹೂಡಿಕೆ ಹೇಗೆ

ಬಿಟ್ ಕಾಯನ್ ಹೂಡಿಕೆ ಬಹಳ ಸುಲಭ , ಹೂಡಿಕೆ ಮಾಡಲು ಸುಮಾರು ಯ್ಯಾಪಗಳನ್ನು ಉಪಯೋಗಿಸಲಾಗುತ್ತದೆ ಅದರಲ್ಲೂ ಕ್ವಾಯಿನ್ ಸ್ವಿಚ್, ವಾಜೀರ್ ಎಕ್ಷ್,ಯೂನೋ ಕಾಯಿನ್, ಕಾಯಿನಡಿಸಿಎಕ್ಷ್, ಜೆಬ್ ಪೇ,ಬಿಟ್ ಬಿಎನ್ ಎಸ್ ಹೀಗೆ ಹಲವು ಯ್ಯಾಪಗಳು ಸಿಗುತ್ತವೆ. ಒಬ್ಬ ವ್ಯಕ್ತಿ ಕನಿಷ್ಟ 100 ರೂಪಾಯಿ ಹೂಡಿಕೆಯಿಂದ ಅವರ ಯೋಗ್ಯತೆಗೆ ತಕ್ಕಂತೆ ಹೂಡಿಕೆ ಮಾಡಬಹುದು. ಹೂಡಿಕೆ ಸಂಬoದಿಸಿದ ಸಹಾಯವನ್ನು ಕೆಲವು ಮಧ್ಯವರ್ತಿಗಳು ಮಾಡುತ್ತಾರೆ. ಹೂಡಿಕೆ ಮಾಡುವ ಮೊದಲು ಯೋಚಿಸು ಮಾಡುವುದು ಒಳಿತು.

Leave a Reply

Your email address will not be published. Required fields are marked *

You May Also Like

ಇಂದು ಕೂಡ ಶತಕ ದಾಟಿದ ಸೋಂಕಿತರ ಸಂಖ್ಯೆ!

ಬೆಂಗಳೂರು: ರಾಜ್ಯದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಏರಿಕೆಯಾಗುತ್ತಲೇ ಇದೆ. ಇಂದು ಕೂಡ ಸೋಂಕಿತರ…

ಕರಿನಾ-ಸೈಫ್ ಅಲಿ ಖಾನ್ ದಂಪತಿಗೆ ಮತ್ತೊಂದು ಮಗು

ಬಾಲಿವುಡ್ ನಟ ಸೈಫ್ ಅಲಿ ಖಾನ್ ಹಾಗೂ ಕರೀನಾ ಕಪೂರ್ ದಂಪತಿಗೆ ಮತ್ತೊಂದು ಮಗು ಜನಿಸಿದ್ದು ಕುಟುಂಬದಲ್ಲಿ ಸಂಭ್ರಮ ಮನೆಮಾಡಿದೆ.

ಶಿಕ್ಷಣ ಸಂಸ್ಥೆಗಳ ಶೈಕ್ಷಣಿಕ ಸಭೆ ಸಮಾರಂಭಗಳನ್ನು ಮುಂದೂಡಲು ರಾಜ್ಯ ಸರ್ಕಾರ ಆದೇಶ

ಬೆಂಗಳೂರು: ಒಂದು ವಾರದ ಹಿಂದೆ ಧಾರವಾಡ ಎಸ್ ಡಿ ಎಮ್ ಮೆಡಿಕಲ್ ಕಾಲೇಜಿನ ವಿದ್ಯಾರ್ಥಿಗಳಲ್ಲಿ ಕೊರೋನಾ…

ಕ ಸಾ ಪ ಜಿಲ್ಲಾಧ್ಯಕ್ಷರಾಗಿ ಶ್ರೀ ವಿವೇಕಾನಂದಗೌಡ ಆಯ್ಕೆ

ಗದಗ: ಇಂದು ನಡೆದ ಕನ್ನಡ ಸಾಹಿತ್ಯ ಪರಿಷತ್ತಿನ ಚುನಾವಣೆಯಲ್ಲಿ ಬಹುನೀರಿಕ್ಷಿತ ಅಭ್ಯರ್ಥಿಯಾದ ಶ್ರೀ ವಿವೇಕಾನಂದಗೌಡ ಪಾಟೀಲ ಆಯ್ಕೆಯಾಗಿದ್ದಾರೆ. ಕಣದಲ್ಲಿದ್ದ ಅಭ್ಯರ್ಥಿಗಳಲ್ಲಿ ಮಾಜಿ ಅಧ್ಯಕ್ಷರಾಗಿದ್ದ ಡಾ. ಶರಣು ಗೋಗೆರಿಯವರನ್ನು ಸೋಲಿಸಿ ಗೆದ್ದಿರುವುದು ಸಾಹಿತ್ಯ ಆಸಕ್ತರಲ್ಲಿ ಸಂತಸವನ್ನುಂಟು ಮಾಡಿದೆ.