ಉತ್ತರಪ್ರಭ ಸುದ್ದಿ
ಲಕ್ಷ್ಮೇಶ್ವರ: ಪಟ್ಟಣದ ಲಕ್ಷ್ಮೇಶ್ವರ ದಿಂದ ಗದಗ ಕಡೆ ಹೋಗುವ ರಸ್ತೆಯಲ್ಲಿ ಗೊಜನೂರ ಸಮೀಪ ಬೈಕ್ ಸ್ಕಿಡ ಆಗಿ ಬಿದ್ದು ಬಹಳ ಗಂಭೀರವಾಗಿ ಗಾಯಗೊಂಡಿದ್ದ ಶೀತಾಲಹರಿ ಗ್ರಾಮದ ಗಣೇಶ ವಡ್ಡರ ಎಂಬ ವ್ಯಕ್ತಿಯನ್ನು ಸರಿಯಾದ ವೇಳೆಗೆ ಆಂಬುಲೆನ್ಸ್ ಕರೆಸಿ ಹಾಸ್ಪಿಟಲ್ ಗೆ ಸೇರಿಸಿ ಒಂದು ಜೀವವನ್ನು ಉಳಿಸಿದ ಸಿಪಿಐ ವಿಕಾಸ ಲಮಾಣಿ ಕಾರ್ಯಕ್ಕೆ ಜನರು ಮೆಚ್ಚುಗೆ ವ್ಯಕ್ತ ಪಡಿಸಿದ್ದಾರೆ ಸಂಜೆ ರಸ್ತೆಯಲ್ಲಿ ಬೈಕನಲ್ಲಿ ಬಿದ್ದು ಒದ್ದಾಡುತ್ತಿದ್ದಾಗ ಅದೆ ರಸ್ತೆಯಿಂದ ಡ್ಯೂಟಿ ಮುಗಿಸಿ ಶಿರಹಟ್ಟಿ ಯಿಂದ ಲಕ್ಷ್ಮೇಶ್ವರ ಕಡೆ ಬರುತ್ತಿದ್ದ ಸಿಪಿಐ ವಿಕಾಸ ಲಮಾಣಿ ತಮ್ಮ ವಾಹನ ನಿಲ್ಲಿಸಿ ತಕ್ಷಣ ಆಂಬುಲೆನ್ಸ್ ಗೆ ಕಾಲ್ ಮಾಡಿ ಗಾಯಗೊಂಡಿದ್ದ ವ್ಯಕ್ತಿಯನ್ನು ಆಸ್ಪತ್ರೆಗೆ ಸೇರಿಸಿ ಮಾನವೀಯತೆ ಮೆರೆದಿದ್ದಾರೆ ಅವರ ಈ ಕಾರ್ಯಕ್ಕೆ ಜಿಲ್ಲೆಯ ಜನರಿಂದ ಮೆಚ್ಚುಗೆ ವ್ಯಕ್ತವಾಗಿದೆ ಸಿಪಿಐ ಅವರ ಇಂತಹ ಉತ್ತಮ ಮಾನವೀಯತೆ ಕಾರ್ಯಗಳು ಹೀಗೆ ನಡೆಯಲಿ ಎಂದು ಜನರು ಮಾತನಾಡುತ್ತಿದ್ದಾರೆ.
