ಉತ್ತರಪ್ರಭ ಸುದ್ದಿ
ಗದಗ:
ತಾಲೂಕಿನ ಅಸುಂಡಿ ಗ್ರಾಮದಲ್ಲಿ 9ನೇ ತರಗತಿಯ ವಿದ್ಯಾರ್ಥಿಯು ಕಾಣೆಯಾಗಿದ್ದಾಳೆ ಎಂದು 2ದಿನಗಳ ಹಿಂದೆ ವಿದ್ಯಾರ್ಥಿನಿಯ ಪೋಷಕರು ಗದಗ ಗ್ರಾಮಿಣ ಪೋಲಿಸ್ ಠಾಣೆಯಲ್ಲಿ ದೂರು ದಾಖಲು ಮಾಡಿದ್ದರು ಎನ್ನಲಾಗಿದೆ. ಆದರೆ ಬುಧವಾರ ಸಂಜೆ ವಿದ್ಯಾರ್ಥಿನಿಯ ಶವ ಕೊಳೆತ ಸ್ಥಿತಿಯಲ್ಲಿ ಪತ್ತೆ ಯಾಗಿದ್ದು. ಶವ ಕೊಳೆತು ವಾಸನೆ ಬಂದದ್ದನ್ನು ಸಮೀಪದಲ್ಲಿಯೇ ಇದ್ದ ಚಿಕನ್ ಅಂಗಡಿಯವರು ಪೊಲೀಸರಿಗೆ ತಿಳಿಸಿದ ನಂತರ ಈ ಪ್ರಕರಣ ಬೆಳಕಿಗೆ ಬಂದಿದೆ. ಸ್ಥಳಕ್ಕೆ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ, ಡಿವೈಎಸ್ಪಿ, ಸಿಪಿಐ ಗದಗ ಗ್ರಾಮೀಣ ಪೊಲೀಸರು ಬೇಟಿ ನೀಡಿ ಶವವನ್ನು ಪರಿಶೀಲಿಸಿದಾಗ ವಿದ್ಯಾರ್ಥಿನಿಯನ್ನು ಕಿಡ್ನ್ಯಾಪ್ ಮಾಡಿ ಕೊಲೆ ಮಾಡಿ ಬಿಸಾಡಿರುವ ಶಂಕೆಯ ಮೇರೆಗೆ ಗದಗ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಕಿಡ್ನ್ಯಾಪ್ ಮತ್ತು ಕೊಲೆ ಪ್ರಕರಣ ದಾಖಲಿಸಿ ಕೊಂಡು ಆರೋಪಿಗಳ ಪತ್ತೆಗೆ ಬಲೆ ಬಿಸಿದ್ದಾರೆ. 5ರಿಂದ6 ಯುವಕರು ಕೃತ್ಯ ದಲ್ಲಿ ಭಾಗಿಯಾಗಿರುವ ಶಂಕೆಯನ್ನು ಸಾರ್ವಜನಿಕರು ವ್ಯಕ್ತಪಡಿಸಿದ್ದಾರೆ.

Leave a Reply

Your email address will not be published. Required fields are marked *

You May Also Like

ಗದಗ ಜಿಲ್ಲೆಯಲ್ಲಿ ಪಾಪುಗಳನ್ನು ಬಿಡದ ಪಾಪಿ ಕೊರೊನಾ..!: ಗದಗ, ನರಗುಂದ, ರೋಣ ತಾಲೂಕಿನಲ್ಲಿ ಸೋಂಕು ದೃಢ

ಗದಗ: ಜಿಲ್ಲೆಯ ನರಗುಂದ ಗಾಡಿ ಓಣಿ ನಿವಾಸಿ 39 ವರ್ಷದ ಪುರುಷ (ಪಿ-15320) ಸೋಂಕಿತರ ಸಂಪರ್ಕದಿಂದಾಗಿ…

ಗದಗ ಜಿಲ್ಲೆಯಲ್ಲಿಂದು 4 ಕೊರೊನಾ ಪಾಸಿಟಿವ್! : 200 ಗಡಿ ಸಮೀಪಿಸುತ್ತಿದೆ ಸೋಂಕಿತರ ಸಂಖ್ಯೆ

ಇಂದು ಮತ್ತೆ ಗದಗ ಜಿಲ್ಲೆಯಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗಿದ್ದು, ದಿನದಿಂದ ದಿನಕ್ಕೆ ಜಿಲ್ಲೆಯ ಜನರಲ್ಲಿ ಆತಂಕ ಶುರುವಾಗಿದೆ.

ಸರ್ಕಾರದ ರೈತ ವಿರೋಧಿ ನೀತಿ ಕುರಿತು ರೈತ ಸಂಘದಿಂದ ಜಾಗೃತಿ

ಜನಪರ, ರೈತಪರ ಹಾಗೂ ಕನ್ನಡಪರ ಸಂಘಟನೆಗಳ ಪ್ರತಿಭಟನೆ ಹಿನ್ನೆಲೆ ಇಂದು ರೈತ ಸಂಘ ಕರಪತ್ರ ಹಂಚುವ ಮೂಲಕ ಜಾಗೃತಿ ಮೂಡಿಸಿತು.

ವೆಂಟಿಲೇಟರ್ ಸಮಸ್ಯೆಗೆ ಶಾಸಕ ಎಚ್.ಕೆ.ಪಾಟೀಲ್ ಸ್ಪಂದನೆ, ಕೊಲ್ಹಾಪುರದಿಂದ ಗದಗ ಜಿಲ್ಲೆಗೆ 25 ವೆಂಟಿಲೇಟರ್

ಗದಗ: ನಮ್ಮ ಜನ ನಮ್ಮ ಕಣ್ಣೆದುರಿಗೆಯೇ ವೆಂಟಿಲೇಟರ್ ಸಮಸ್ಯೆಯಿಂದ ಜೀವ ಕಳೆದುಕೊಳ್ಳವ ಸ್ಥಿತಿ ಬಂದಿರುವುದನ್ನು ಗಮನಿಸಿ ಸಾಲದ ಆಧಾರದ ಮೇಲೆ ಕೊಲ್ಹಾಪುರದ ಡಿ.ವೈ.ಪಾಟೀಲ್ ಟ್ರಸ್ಟ್ 25 ವೆಂಟಿಲೇಟರ್ ಕೊಡಮಾಡುತ್ತಿರುವುದು ಸಂತಸದ ಸಂಗತಿ ಎಂದು ಕಾಂಗ್ರೆಸ್ ಮುಖಂಡ ಹಾಗೂ ಶಾಸಕ ಎಚ್.ಕೆ.ಪಾಟೀಲ್ ಹೇಳಿದರು.