ಮುಳಗುಂದ: ಸಮೀಪದ ನೀಲಗುಂದ ಹಾಗೂ ಅಂತೂರ ಬೆಂತೂರ ಗ್ರಾಮಗಳ ಮಧ್ಯೆ ಮಳೆಯಿಂದಾಗಿ ರಸ್ತೆ ಕುಸಿತವಾಗಿದ್ದು ಸುಗಮ ಸಂಚಾರಕ್ಕೆ ಅಡಿಯಾಗಿದೆ.
ಕಳೆದ ಎರಡು ದಿನಗಳ ಹಿಂದೆ ಸುರಿದ ಭಾರಿ ಮಳೆಗೆ ರಸ್ತೆಯ ಒಂದು ಬದಿ ಸಂಪೂರ್ಣ ಕುಸಿತವಾಗಿದೆ. ಇದರಿಂದ ವಾಹನಗಳ ಸಂಚಾರಕ್ಕೆ ಅಡಚಣೆಯಾಗುತ್ತಿದೆ. ಲಾಕ್ಡೌ ನ್ ಇರುವುದರಿಂದ ಬಸ್ ಹಾಗೂ ವಾಹನ ದಟ್ಟನೆ ಕಡಿಮೆ ಇರುವುದರಿಂದ ಅನಾವುತ ತಪ್ಪಿದೆ. ರಸ್ತೆ ಪಕ್ಕದಲ್ಲಿ ದೊಡ್ಡ ಕಾಲುವೆ ಇದ್ದು ಕಲ್ಲಿನ ಪರಸಿ ನಿರ್ಮಿಸಲಾಗಿತ್ತು. ಮಳೆ ನೀರಿಗೆ ಮಣ್ಣು ಕುಸಿದಿದೆ ಪರಿಣಾಮ ಮೂಕ್ಕಾಲು ಭಾಗದಷ್ಟು ರಸ್ತೆ ಕುಸಿದಿದ್ದು ವಾಹನಗಳ ಸಂಚಾರ ಅಪಾಯಮಟ್ಟದಲ್ಲಿದೆ.
ಇನ್ನೂ ಪಟ್ಟಣದ ಬೈಪಾಸ್ ರಸ್ತೆಯನ್ನ ಇಚೆಗೆ ಸಿಸಿ ರಸ್ತೆಯಾಗಿ ಅಭಿವೃದ್ದಿಪಡಿಸಲಾಗಿದ್ದು ರಸ್ತೆ ಇಕ್ಕೆಲುಗಳಲ್ಲಿ ಹಾಕಿದ್ದ ಮಣ್ಣು ಮಳೆ ನೀರಿಗೆ ಕೊಚ್ಚಿಕೊಂಡು ಹೋಗಿದೆ. ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ವಾಹನ ಸಂಚಾರ ಆರಂಭಕ್ಕೂ ಮುನ್ನ ದುರಸ್ತೆ ಕಾಮಗಾರಿ ಕೈಗೊಳ್ಳಬೇಕು. ಎಂದು ಪ.ಪಂ ಮಾಜಿ ಸದಸ್ಯ ಮಹಾಂತೇಶ ಕಣವಿ ಆಗ್ರಹಿಸದ್ದಾರೆ.

Leave a Reply

Your email address will not be published. Required fields are marked *

You May Also Like

ಲಾಕ್ ಡೌನ್ ಅವಧಿ ವಿಸ್ತರಣೆ: ಜೂ.7ರವರೆಗೆ ಗದಗ ಜಿಲ್ಲೆಯಲ್ಲಿ ಲಾಕ್ ಡೌನ್ ಮುಂದುವರಿಕೆ

ಜೂನ್ ಒಂದರವರೆಗೂ ಇದ್ದ ಲಾಕ್ ಡೌನ್ 7 ನೇ ತಾರೀಖಿನವರೆಗೂ ಮುಂದುವರಿಸಲಾಗುವುದು. ಕೆಲ ಸಡಿಲಿಕೆಯೊಂದಿಗೆ ಗದಗ ಜಿಲ್ಲೆಯಲ್ಲಿ ಲಾಕ್ ಡೌನ್ ಮುಂದುವರಿಕೆಯಾಗಲಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಸಿ.ಸಿ.ಪಾಟೀಲ್ ಹೇಳಿದರು.

ಹಕ್ಕಿ ಜ್ವರದ ಆತಂಕದ ನಡುವೆಯೇ ಗದಗ ಜಿಲ್ಲೆಯಲ್ಲಿ ಹಕ್ಕಿಗಳ ಸಾವು

ಇದೀಗ ಹಕ್ಕಿ ಜ್ವರದ ಸುದ್ದಿಯೇ ಸದ್ದು ಮಾಡುತ್ತಿದೆ. ಜನರು ಈ ಆತಂಕದಲ್ಲಿರುವಾಗಲೇ ಗದಗ ಜಿಲ್ಲೆ ಡಂಬಳ ಗ್ರಾಮದಲ್ಲಿ ಹಕ್ಕಿಗಳು ಏಕಾಏಕಿ ಸಾವನ್ನಪ್ಪಿರುವುದು ಇಲ್ಲಿನ ಜನರನ್ನು ಗಾಬರಿಗೊಳಿಸಿದೆ.

ಮರಗಳಿಗೆ ಕತ್ತರಿ: ಅರಣ್ಯಾಧಿಕಾರಿಗಳ ಅಮಾನತು

ಬಾಳೂರು ಮೀಸಲು ಅರಣ್ಯ ಪ್ರದೇಶದಲ್ಲಿ ಮಾಫಿ ಪಾಸ್ ಹೆಸರಲ್ಲಿ ಕಾಡುಗಳ ಮರಗಳನ್ನು ಕತ್ತರಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಏಳು ಮಂದಿ ಅರಣ್ಯ ಇಲಾಖೆ ನೌಕರರನ್ನು ಅಮಾನತುಗೊಳಿಸಲಾಗಿದೆ. ಚಿಕ್ಕಮಗಳೂರು ವೃತ್ತ ಅರಣ್ಯ ಸಂರಕ್ಷಣಾಧಿಕಾರಿ ಸುನೀಲ್ ಪವಾರ್ ಅಮಾನತುಗೊಳಿಸಿ ಆದೇಶ ಹೊರಡಿಸಿದ್ದಾರೆ.

ಪಂಚಾಯತಿ ಚುನಾವಣೆ: ಸರ್ಕಾರ ಎಲ್ಲವನ್ನು ಎಲ್ಲರನ್ನು ಕೇಳಿ ತೀರ್ಮಾನ ಕೈಗೊಳ್ಳಲು ಆಗಲ್ಲ

ಪಂಚಾಯತಿ ಚುನಾವಣೆಗೆ ಸಂಬಂಧಿಸಿದಂತೆ ಸರ್ಕಾರ ಎಲ್ಲವನ್ನು ಎಲ್ಲರನ್ನು ಕೇಳಿ ತೀರ್ಮಾನ ಕೈಗೊಳ್ಳಲು ಆಗಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಹೇಳಿದರು.