ಮುಳಗುಂದ: ಸ್ಥಳಿಯ ಪಟ್ಟಣ ಪಂಚಾಯ್ತಿ ವತಿಯಿಂದ ಮಳೆ ನೀರು ಹರಿಯುವ ಕಾಲುವೆಗಳ ಹೂಳು ತೆರವು ಕಾರ್ಯ ಶನಿವಾರ ನಡೆಯಿತು.
ವಡ್ಡರಕಣಿ ಹತ್ತಿರದ ಕಾಲುವೆ ಗಿಡಗಂಟಿಗಳು ಬೆಳೆದು ಹೂಳು ತುಂಬಿಕೊಂಡಿತ್ತು. ಇದರಿಂದ ಅಬ್ಬಿಕೆರೆಗೆ ನೀರು ಹರಿದು ಬರಲು ಸಮಸ್ಯೆಯಾಗಿತ್ತು. ಪಂಚಾಯ್ತಿ ಪೌರಕಾರ್ಮಿಕರು ಹಾಗೂ ಜೆಸಿಬಿ ಬಳಸಿ ಹೂಳು ತೆರವುಗೊಳಿಸಿ ಸ್ವಚ್ಛಗೊಳಿಸಿದೆ. ಸಾರ್ವಜನಿಕರು ಮನೆ ಮುಂದಿನ ಚರಂಡಿಗಳಿಗೆ ಕಸ ಹಾಕುವುದರಿಂದ ಹೂಳು ತುಂಬಿ ಮಳೆಗಾಲದಲ್ಲಿ ನೀರು ಸಾಗದೆ ಸಮಸ್ಯೆಯಾಗುತ್ತದೆ. ಮನೆಯಲ್ಲಿ ತ್ಯಾಜ್ಯವನ್ನ ಸಂಗ್ರಹಿಸಿಟ್ಟು ನಿತ್ಯ ಬರುವ ಪಂಚಾಯ್ತಿ ವಾಹನಕ್ಕೆ ಹಾಕಬೇಕು. ಹೀಗೆ ಮಾಡುವುದರಿಂದ ಕೊಳಚೆ ನೀರು ನಿಲ್ಲದಂತೆ ಮಾಡಬಹುದು, ಸಾಂಕ್ರಾಮಿಕ ರೋಗ ಸಂದರ್ಭದಲ್ಲಿ ಜನರು ಸ್ವಚ್ಛತೆಗೆ ಆಧ್ಯತೆ ನೀಡಬೇಕು. ಎಂದು ಪಟ್ಟಣ ಪಂಚಾಯ್ತಿ ಮುಖ್ಯಾಧಿಕಾರಿ ಹೇಳಿದರು.

Leave a Reply

Your email address will not be published. Required fields are marked *

You May Also Like

ನೋಕಿಯಾ ತಯಾರಿಕಾ ಘಟಕದ ಸಿಬ್ಬಂದಿಗೆ ಕೊರೊನಾ ಕಾಟ – ಕಂಪನಿ ಬಂದ್!

ಚೆನ್ನೈ: ತಮಿಳುನಾಡಿನಲ್ಲಿನ ನೋಕಿಯಾ ಫೋನ್ ತಯಾರಿಕಾ ಘಟಕದ 49 ಜನ ಸಿಬ್ಬಂದಿಗೆ ಕೊರೊನಾ ಅಂಟಿಕೊಂಡಿದೆ. ಹೀಗಾಗಿ…

ಕುಡಿದ ಮತ್ತಿನಲ್ಲಿ ಮಹಿಳೆಯ ಜೀವಕ್ಕೆ ಕುತ್ತು ತಂದ ಪೊಲೀಸ್!

ನವದೆಹಲಿ : ಕುಡಿದ ಮತ್ತಿನಲ್ಲಿ ಪೊಲೀಸ್ ಸಬ್ ಇನ್ಸ್ ಪೆಕ್ಟರ್ ಒಬ್ಬರು ವೇಗವಾಗಿ ಕಾರು ಚಲಾಯಿಸಿ…

ಸಿದ್ದರಾಮಯ್ಯ ಸ್ವಾರ್ಥ ರಾಜಕಾರಣವೇ ಪಕ್ಷ ಬಿಡಲು ಕಾರಣ: ಸಚಿವ ಬಿ.ಸಿ ಪಾಟೀಲ್…!

ಕೊಪ್ಪಳ: ಕಾಂಗ್ರೆಸ್ ನವರು ಶಾಸಕರನ್ನು ಸರಿಯಾದ ರೀತಿಯಲ್ಲಿ ನಡೆಸಿಕೊಳ್ಳದೆ ಅವರಿಗೆ ಮೋಸ ಮಾಡಿದರು. ಇದಲ್ಲದೆ ಮುಖ್ಯಮಂತ್ರಿಯಾಗಿ…

ಕಡಿಮೆ ವೆಚ್ಚದಲ್ಲಿ ಚಿಕಿತ್ಸೆ ನೀಡುವ ಆಸ್ಪತ್ರೆ ಗುರುತಿಸುವಂತೆ ಸುಪ್ರೀಂ ಕೋರ್ಟ್ ಸೂಚನೆ

ಸೋಂಕಿತ ರೋಗಿಗಳಿಗೆ ಉಚಿತ ಅಥವಾ ಕಡಿಮೆ ವೆಚ್ಚದಲ್ಲಿ ಚಿಕಿತ್ಸೆ ನೀಡುವ ಖಾಸಗಿ ಆಸ್ಪತ್ರೆಗಳನ್ನು ಗುರುತಿಸಿ ಎಂದು ಸುಪ್ರೀಂ ಕೋರ್ಟ್, ಸರ್ಕಾರಕ್ಕೆ ಸೂಚಿಸಿದೆ.