ಉತ್ತರ ಪ್ರದೇಶ : ಭಾಡೋಧಿ ಜಿಲ್ಲೆಯ ವ್ಯಕ್ತಿಯೊಬ್ಬ ತನ್ನ ಹುಡುಗಿ ಬೇರೆಯವನೊಂದಿಗೆ ವಿವಾಹವಾಗುತ್ತಿದ್ದ ಸಂದರ್ಭದಲ್ಲಿ ಈತ ಸ್ತ್ರೀ ಅವತಾರದಲ್ಲಿ ತಯಾರಾಗಿ ಗರ್ಲ್ ಫ್ರೆಂಡ್​ ಮನೆಗೆ ಎಂಟ್ರಿ ಕೊಟ್ಟಿದ್ದಾನೆ.

ಇಷ್ಟೆಲ್ಲ ಪ್ಲಾನ್​ ಮಾಡಿದ್ರೂ ಸಹ ಆತ ಸಿಕ್ಕಿಬಿದ್ದಿದ್ದು ಸ್ನೇಹಿತರ ಸಹಾಯದಿಂದ ಸ್ಥಳದಿಂದ ಕಾಲ್ಕಿಳೋದ್ರಲ್ಲಿ ಯಶಸ್ವಿಯಾಗಿದ್ದಾನೆ. ಆದರೆ ಆತ ಮದುವೆಗೆ ಈ ರೀತಿ ಬಂದಿದ್ದರ ಹಿಂದೆ ಉದ್ದೇಶ ಏನಿತ್ತು ಅನ್ನೋದು ತಿಳಿದುಬಂದಿಲ್ಲ.

ಕೆಂಪು ಬಣ್ಣದ ಸೀರೆ ಧರಿಸಿದ್ದ ಈತ ವಧುವಿನಂತೆ ತಯಾರಾಗಿದ್ದ. ಕೈಯಲ್ಲಿ ಸಣ್ಣ ಪರ್ಸ್ ಹಾಗೂ ಮಹಿಳೆಯರ ಚಪ್ಪಲಿಯನ್ನೇ ಧರಿಸಿದ್ದ. ಆದರೂ ಸಹ ಈತ ಅನುಮಾನಾಸ್ಪದವಾಗಿ ತಿರುಗಾಡುತ್ತಾ ಇದ್ದದ್ದು ನೆರೆದವರ ಅನುಮಾನಕ್ಕೆ ಕಾರಣವಾಗಿದೆ. ಈತ ಮದುವೆ ಮನೆಗೆ ಹೋಗಿ ಎಲ್ಲರ ಬಳಿ ನಾನು ವಧುವನ್ನ ಭೇಟಿಯಾಗಬೇಕು ಎಂದು ಹೇಳಿದ್ದನಂತೆ. ಇನ್ನು ಈ ಸಂಬಂಧ ಯಾರೂ ಪೊಲೀಸ್​ ಠಾಣೆಯಲ್ಲಿ ದೂರನ್ನ ದಾಖಲಿಸಿಲ್ಲ.

Leave a Reply

Your email address will not be published. Required fields are marked *

You May Also Like

ಭಾಷಣ ನಿಲ್ಲಿಸಿ, ಕೆಲಸ ಮಾಡಿ: ಸಿದ್ದರಾಮಯ್ಯ

ಬೆಂಗಳೂರು: ಬಾಯಿ ಬಿಟ್ಟರೆ ಬಣ್ಣಗೇಡು ಎಂಬಂತಾಗಿದೆ @PMOIndia ಭಾಷಣಗಳು. ನಿಯಂತ್ರಣ ಮೀರಿ ಹರಡುತ್ತಿರುವ ಕೊರೊನಾ ಸೋಂಕಿನಿಂದ…

ಲಾರಿ, ಮಿನಿ ಬಸ್ ಡಿಕ್ಕಿ: 14 ಜನ ದುರ್ಮರಣ

ಲಾರಿ ಮತ್ತು ಮಿನಿ ಬಸ್ ಮಧ್ಯೆ ಡಿಕ್ಕಿ ಸಂಭವಿಸಿ 14 ಜನ ಮೃತಪಟ್ಟಿರುವ ಭೀಕರ ಅಪಘಾತ ಆಂಧ್ರಪ್ರದೇಶದ ಕರ್ನೂಲ್ ಜಿಲ್ಲೆ ವೆಲ್ದುರ್ತಿ ಬಳಿಯ ಮಾದಾಪುರಂ ಬಳಿ ನಡೆದಿದೆ. ಮೃತರು ಚಿತ್ತೂರು ಜಿಲ್ಲೆಯ ಮದನಪಲ್ಲಿ ನಿವಾಸಿಗಳು. ಅಪಘಾತದಲ್ಲಿ ಒಂದು ಮಗು, 8 ಮಹಿಳೆಯರು ಸೇರಿ 14 ಜನ ಪ್ರಾಣ ಕಳೆದುಕೊಂಡಿದ್ದಾರೆ. ನಾಲ್ವರ ಸ್ಥಿತಿ ಗಂಭೀರವಾಗಿದ್ದು ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ.

ಇಂದು ಐಶ್ವರ್ಯ ರೈ, ಮಗಳು ಆರಾಧ್ಯಳಿಗೂ ಸೋಂಕು ದೃಢ

ಮುಂಬೈ: ಶನಿವಾರ ರಾತ್ರಿ ಹಿರಿಯ ನಟ ಅಮಿತಾಬ್ ಬಚ್ಚನ್ ತಮಗೆ ಸೋಂಕುದೃಢ ಪಟ್ಟ ಕುರಿತು ಟ್ವೀಟ್ ಮಾಡಿದ್ದರು. ಕನ್ನಡತಿ ಐಶ್ವರ್ಯ ರೈ ಮತ್ತು ಪುತ್ರಿ ಆರಾಧ್ಯಳಿಗೂ ಪಾಸಿಟಿವ್

ಚುನಾವಣೆಗೆ ಸ್ಪರ್ಧಿಸುವ ಅಭ್ಯರ್ಥಿಗಳ ಖರ್ಚು ಹೆಚ್ಚಿಸಿದ ಚುನಾವಣಾ ಆಯೋಗ!

ನವದೆಹಲಿ : ಲೋಕಸಭೆ, ವಿಧಾನಸಭೆ ಚುನಾವಣೆಗಳಲ್ಲಿ ಸ್ಪರ್ಧಿಸುವ ಅಭ್ಯರ್ಥಿಗಳ ಖರ್ಚು ಮಿತಿಯನ್ನು ಶೇ. 10ರಷ್ಟು ಹೆಚ್ಚಿಸಲಾಗಿದೆ.