ನವದೆಹಲಿ: ಲೋಕಸಭೆ, ವಿಧಾನಸಭೆ ಚುನಾವಣೆಗಳಲ್ಲಿ ಸ್ಪರ್ಧಿಸುವ ಅಭ್ಯರ್ಥಿಗಳ ಖರ್ಚು ಮಿತಿಯನ್ನು ಶೇ. 10ರಷ್ಟು ಹೆಚ್ಚಿಸಲಾಗಿದೆ.  

ಅಧಿಸೂಚನೆಯ ಪ್ರಕಾರ ಲೋಕಸಭೆಗೆ ಸ್ಪರ್ಧಿಸುವ ಅಭ್ಯರ್ಥಿಗಳ ಖರ್ಚಿನ ಮಿತಿಯನ್ನು ರೂ. 70 ಲಕ್ಷಗಳಿಂದ ರೂ. 77 ಲಕ್ಷಕ್ಕೆ ಏರಿಕೆ ಮಾಡಲಾಗಿದೆ. ಅಷ್ಟೆ ಅಲ್ಲದೇ, ಸಣ್ಣ ರಾಜ್ಯಗಳಲ್ಲಿ ಈ ಮೊತ್ತವನ್ನು ರೂ. 54 ಲಕ್ಷದಿಂದ ರೂ. 59 ಲಕ್ಷಕ್ಕೆ ಏರಿಕೆ ಮಾಡಲಾಗಿದೆ. 

ವಿಧಾನಸಭಾ ಚುನಾವಣೆಗೆ ಸ್ಪರ್ಧಿಸುವ ಅಭ್ಯರ್ಥಿಗಳ ಖರ್ಚಿನ ಮಿತಿಯನ್ನು ರೂ. 28 ಲಕ್ಷಗಳಿಂದ ರೂ. 30.8 ಲಕ್ಷಗಳಿಗೆ ಏರಿಕೆ ಮಾಡಲಾಗಿದೆ. ಈ ಹಿಂದೆ ರೂ. 20 ಲಕ್ಷ ಮಿತಿ ಇದ್ದ ಕಡೆ ರೂ. 22 ಲಕ್ಷಗಳಿಗೆ ಮಿತಿಯನ್ನು ಏರಿಕೆ ಮಾಡಲಾಗಿದೆ.

ಕೊರೊನಾ ಅಟ್ಟಹಾಸದ ಪರಿಸ್ಥಿತಿಯಲ್ಲಿ ಅಭ್ಯರ್ಥಿಗಳಿಗೆ ಎದುರಾಗಬಹುದಾದ ತೊಂದರೆಗಳನ್ನು ಪರಿಗಣಿಸಿ ಆಯೋಗ ಖರ್ಚು – ವೆಚ್ಚಗಳ ಮಿತಿ ಹೆಚ್ಚಳಕ್ಕೆ ಶಿಫಾರಸು ಮಾಡಿತ್ತು. ಹೀಗಾಗಿ ತಕ್ಷಣದಿಂದಲೇ ಜಾರಿಗೆ ಬರುವ ಈ ಆದೇಶದಿಂದ ಬಿಹಾರ ವಿಧಾನಸಭೆ, ಲೋಕಸಭೆಯ ಚುನಾವಣೆ, ಉಪಚುನಾವಣೆಗಳಲ್ಲಿ ಸ್ಪರ್ಧಿಸಿರುವ ಅಭ್ಯರ್ಥಿಗಳಿಗೆ ಅನುಕೂಲವಾಗಲಿದೆ. 

Leave a Reply

Your email address will not be published. Required fields are marked *

You May Also Like

ದಕ್ಷಿಣ ಆಫ್ರಿಕಾ ಕ್ರಿಕೇಟ್ ಆಟಗಾರನಿಗೆ ಕೊರೋನಾ ಪಾಸಿಟಿವ್..!

ದಕ್ಷಿಣ ಆಫ್ರಿಕಾದ ಕ್ರಿಕೆಟ್ ಆಟಗಾರನಲ್ಲಿ ಕೊರೊನಾ ಪಾಸಿಟಿವ್ ಕಂಡು ಬಂದಿದೆ. ಈ ಮೂಲಕ ಕೊರೊನಾ ಪಾಸಿಟಿವ್ ಬಂದ ಮೂರನೇ ಕ್ರಿಕೆಟ್ ಆಟಗಾರ ಸೋಲೋ ಆಗಿದ್ದಾರೆ.

ಹಾವು ಬಿಟ್ಟು ಪತ್ನಿ ಕೊಲೆ ಮಾಡಿದ ಪತಿ!

ಕೊಲ್ಲಂ: ವ್ಯಕ್ತಿಯೊಬ್ಬ ತನ್ನ ಪತ್ನಿ ಮಲಗಿದ್ದಾಗ ನಾಗರಹಾವು ಬಿಟ್ಟು ಹತ್ಯೆ ಮಾಡಿದ ಭಯಾನಕ ಘಟನೆ ಕೇರಳದಲ್ಲಿ…

ನೇಪಾಳದೊಂದಿಗೆ ನಮ್ಮದು ಗಟ್ಟಿ ಸಂಬಂಧ: ಹೈರಾಣಾಗಿರುವ ಭಾರತಕ್ಕೆ ಇದು ಇನ್ನಷ್ಟು ಮುಜುಗರ

ದೆಹಲಿ: ನೇಪಾಳದೊಂದಿಗೆ ನಮ್ಮ ಸಂಬಂಧ ಬಲಿಷ್ಠವಾಗಿದೆ ಎಂದು ಭಾರತೀಯ ಸೇನಾ ಮುಖಸ್ಥ ಎಂ.ಎಂ.ನರವಣೆ ಹೇಳಿದ್ದಾರೆ. ನಾವು…

ಸುಪ್ರೀಂಕೋರ್ಟ್ ಆದೇಶ: ಅನಂತ ಪದ್ಮನಾಭ ದೇವಸ್ಥಾನ ಆಡಳಿತ ರಾಜಮನೆತನದ ಹಕ್ಕು

ಈ ಐತಿಹಾಸಿಕ ದೇವಸ್ಥಾನದ ಆಡಳಿತದ ಮೇಲೆ ಹಿಡಿತ ಸಾಧಿಸಲು ಟ್ರಸ್ಟ್ ಒಂದನ್ನು ಸ್ಥಾಪಿಸುವಂತೆ ಕೇರಳ ಹೈಕೋರ್ಟ್ ಕೇರಳ ಸರ್ಕಾರಕ್ಕೆ ನೀಡಿದ್ದ ಆದೇಶ ರದ್ದು.