ಬೆಂಗಳೂರು: ಕೊರೋನಾ ಸಂಕಷ್ಟದಲ್ಲಿ ಪೊಲೀಸರ ಪಾತ್ರ ಮಹತ್ವದ್ದು ಆದರೆ ಇದೀಗ ಪೊಲೀಸರಿಗೂ ಕೊರೋನಾ ಕಾಟ ಶುರುವಾಗುವ ಆತಂಕ ಎದುರಾಗಿದೆ. 26 ಜನ ಪೊಲೀಸರಿಗೆ ಕೊರೋನಾ ಸೋಂಕಿನ ಶಂಕೆ ಇದೆ.
ಬೆಂಗಳೂರಿನ ಹೆಬ್ಬಗೋಡಿ ಠಾಣೆಯ ಸುಮಾರು 26 ಪೊಲೀಸರಿಗೆ ಇದೀಗ ಕೊರೊನಾ ಶಂಕೆ ಕಾಡುತ್ತಿದೆ. ಎಲ್ಲರನ್ನೂ ಹೋಮ್ ಕ್ವಾರಂಟೈನ್ ಗೆ ಸೂಚಿಸಲಾಗಿದೆ. ಠಾಣೆಯ ಬಂಧಿತ ಕಳ್ಳರಿಗೆ ಕೊರೊನಾ ದೃಢಪಟ್ಟಿದ್ದು, ಆತನ ಸಂಪರ್ಕಕ್ಕೆ ಬಂದ ಹೆಬ್ಬಗೋಡಿ ಪೊಲೀಸರನ್ನು ಇದೀಗ ಕ್ವಾರಂಟೈನ್ ನಲ್ಲಿ ಇಡಲಾಗಿದೆ. ಇದರಲ್ಲಿ ಪಿಎಸ್ ಐ, ಎಎಸ್‍ ಐ, ಹೆಡ್ ಕಾನ್ಸೆಟೆಬಲ್‍ ಹಾಗೂ ಪೊಲೀಸ್ ವಾಹನದ ಡ್ರೈವರ್ ಕೂಡ ಸೇರಿದ್ದಾರೆ.
ಇತ್ತಿಚೀಗೆ ಜೆ.ಜೆ. ನಗರದಲ್ಲಿ ಇಬ್ಬರು ಕಳ್ಳರನ್ನು ಬಂಧಿಸಲಾಗಿತ್ತು. ಈ ವೇಳೆ ಇಬ್ಬರಿಗೂ ಕೊರೊನಾ ಪರೀಕ್ಷೆ ನಡೆಸಲಾಗಿತ್ತು. ದುರ್ದೈವಕ್ಕೆ ಇಬ್ಬರಿಗೂ ಕೊರೊನಾ ಪಾಸಿಟಿವ್ ದೃಢಪಟ್ಟಿದೆ. ಇದು ಪೊಲೀಸರಲ್ಲೂ ಆತಂಕ ಸೃಷ್ಟಿಸಿದೆ. ಹೀಗಾಗಿ ಕಳ್ಳರ ಸಂಪರ್ಕಕ್ಕೆ ಬಂದ ಎಲ್ಲ ಪೊಲೀಸರನ್ನು ಪರೀಕ್ಷೆಗೆ ಒಳಪಡಿಸಲಾಗಿದೆ. ಹೆಚ್ಚು ಕಡಿಮೆ ಹೆಬ್ಬಗೋಡಿ ಠಾಣೆಯ ಬಹುತೇಕ ಸಿಬ್ಬಂದಿಗೆ ಹೋಮ್ ಕ್ವಾರಂಟೈನ್ ಗೆ ಸೂಚಿಸಿದ್ದರಿಂದ ಠಾಣೆ ಬೀಕೋ ಎನ್ನುತ್ತಿದೆ.

Leave a Reply

Your email address will not be published. Required fields are marked *

You May Also Like

ಜು.30 ರಿಂದ ಸಿಇಟಿ ಪರೀಕ್ಷೆ

ಜುಲೈ 30 ಮತ್ತು 31 ರಂದು ಸಿಇಟಿ ಪರೀಕ್ಷೆ ನಡೆಸಲಾಗುತ್ತಿದ್ದು, ಎಂದಿನಂತೆ ಆಫ್ ಲೈನ್ ನಲ್ಲಿ ಈ ಬಾರಿಯೂ ಪರೀಕ್ಷೆ ನಡೆಯಲಿದೆ ಎಂದಿದ್ದಾರೆ.

ಮತಗಟ್ಟೆ ವಿಭಜನೆಯಲ್ಲಿ ಜಿಲ್ಲಾಡಳಿತ ವಿಫಲ: ಸಾಗದ ಸರದಿ ಸಾಲು

ಉತ್ತರಪ್ರಭ ಸುದ್ದಿ ಮುಂಡರಗಿ: ತಾಲೂಕಿನ ಮುರುಡಿತಾಂಡಾ ಮತಗಟ್ಟೆ ಸಂಖ್ಯೆ 265, ರೋಣ ಕ್ಷೇತ್ರದ ವ್ಯಾಪ್ತಿಯಲ್ಲಿದ್ದು ಇಲ್ಲಿ…

ಕಪ್ಪತ್ತಗುಡ್ಡದ ಸಭೆ ಕಗ್ಗಂಟು: ಪ್ರಶ್ನೆಗಳು ನೂರೆಂಟು..!

ನಿನ್ನೆಯಷ್ಟೆ ನಿಮ್ಮ ಉತ್ತರಪ್ರಭ ಕಪ್ಪತ್ತಗುಡ್ಡದ ಬಗ್ಗೆ ಸದ್ಯದ ಬೆಳವಣಿಗೆ ಹಾಗೂ ಒಳಗೊಳಗೆ ಹುನ್ನಾರ ನಡೆಯುತ್ತಿದೆಯಾ? ಎನ್ನುವ ಕುರಿತು ವಿಶೇಷ ವರದಿಯನ್ನು ನೀಡಿತ್ತು. ಇದರ ಬೆನ್ನಲ್ಲೆ ನಿನ್ನೆ ವಿಧಾನಸೌಧದಲ್ಲಿ ಕಪ್ಪತ್ತಗುಡ್ಡ ವನ್ಯಧಾಮಕ್ಕೆ ಸಂಬಂಧ ಪಟ್ಟಂತೆ ಸಭೆ ಕೂಡ ನಡೆದಿದೆ ಎನ್ನುವ ಮಾಹಿತಿ ಲಭ್ಯವಾಗಿದೆ.

ಗದಗನಲ್ಲಿ ‌ಮತ್ತೊಂದು ಕೊರೊನಾ ಪಾಸಿಟಿವ್..!

ಜಿಲ್ಲೆಯ ವ್ಯಕ್ತಿಯೊಬ್ಬರಿಗೆ ಕೊರೊನಾ ಸೋಂಕು ದೃಢಪಟ್ಟಿದ್ದು ಬೆಂಗಳೂರಿನಲ್ಲಿ ಪತ್ತೆಯಾಗಿದೆ. P-4079 ರೋಗಿ ಗದಗನ ನಗರದ ನಿವಾಸಿಯಾಗಿದ್ದು ಇತ್ತಿಚೆಗೆ ಬೆಂಗಳೂರಿಗೆ ಪ್ರಯಾಣ ಬೆಳೆಸಿದ್ದು ಅವರಿಗೆ ಸೋಂಕು ತಗುಲಿರುವುದು ದೃಢಪಟ್ಟಿದೆ.