ಬೆಂಗಳೂರು: ಹೊಸದಾಗಿ ನೇಮಕಗೊಂಡಿರುವ 715 ಹಿರಿಯ ತಜ್ಞರು ಮತ್ತು 1,048 ಸಾಮಾನ್ಯ ಕರ್ತವ್ಯ ವೈದ್ಯಾಧಿಕಾರಿಗಳನ್ನು ಬುಧವಾರ ಆರೋಗ್ಯ ಸಚಿವ ಕೆ.ಸುಧಾಕರ್ ಸ್ವಾಗತ ಕೋರಿದ್ದಾರೆ. ರಾಜ್ಯಾದ್ಯಂತ ಖಾಲಿ ಇರುವ ಹುದ್ದೆಗಳಿಗೆ ನೇಮಕಗೊಳ್ಳುತ್ತಿರುವ ತಜ್ಞರು, ವೈದ್ಯರಲ್ಲದೆ ಇಲಾಖೆಯ ಹಿರಿಯ ಅಧಿಕಾರಿಗಳು, ಎಲ್ಲಾ ಜಿಲ್ಲೆಗಳ ಡಿಎಚ್ ಒ, ಟಿಎಚ್ ಒಗಳು ವರ್ಚುವಲ್ ವೇದಿಕೆ ಮೂಲಕ ಈ ವಿಶೇಷ ಕಾರ್ಯಕ್ರಮಕ್ಕೆ ಸಾಕ್ಷಿಯಾಗಿದ್ದಾರೆ. ಭಾಷಣದಲ್ಲಿ ಹೊಸದಾಗಿ ನೇಮಕಗೊಂಡ ಎಲ್ಲರಿಗೂ ವೃತ್ತಿ ಘನತೆ ಎತ್ತಿ ಹಿಡಿಯುವಂತೆ ಮಾನವೀಯ ನೆಲೆಯಲ್ಲಿ ಕಾರ್ಯ ನಿರ್ವಹಿಸಲು ಸಚಿವ ಸುಧಾಕರ್ ಕರೆ ನೀಡಿದ್ದಾರೆ.

Leave a Reply

Your email address will not be published. Required fields are marked *

You May Also Like

ಬಿಎಂಟಿಸಿ ಪಾಸ್ ದರ ಇಳಿಕೆ: ಇನ್ಮುಂದೆ ಟಿಕೇಟ್ ಬದಲಾಗಿ ಪಾಸ್, ಯಾವುದಕ್ಕೆ ಎಷ್ಟು?

ಕೊನೆಗೂ ಪ್ರಯಾಣಿಕರ ಮನವಿಗೆ ಸ್ಪಂದಿಸಿದ ಬಿಎಂಟಿಸಿ ಪಾಸ್ ದರವನ್ನು ಇಳಿಕೆಗೆ ಮುಂದಾಗಿದೆ. ನಾಳೆಯಿಂದಲೇ ಹೊಸ ದರ ಅನ್ವಯವಾಗಲಿದೆ. ಹೀಗಾಗಿ ನಿತ್ಯ ಸಿಲಿಕಾನ್ ಸಿಟಿಯಲ್ಲಿ ಬಿಎಂಟಿಸಿ ಬಸ್ ಗಳನ್ನೆ ನೆಚ್ಚಿಕೊಂಡಿದ್ದ ಲಕ್ಷಾಂತರ ಜನರಿಗೆ ಇಂದು ಬಿಎಂಟಿಸಿ ಸಿಹಿ ಸುದ್ದಿ ನಿಡಿದೆ.

ಕೊರೋನಾ ಕಾವ್ಯ-1

ಕೊರೋನಾ ಕಾವ್ಯ ಸರಣಿಗೆ ಕವನ ಬರೆದವರು ಮುತ್ತು.ಹೆಚ್.ಬಿ(ಶಿಕ್ಷಕರು), ಪ್ರಸ್ತುತ ಕೊಪ್ಪಳ ಜಿಲ್ಲೆಯಲ್ಲಿ ಸರ್ಕಾರಿ ಪ್ರಾಥಮಿಕ ಶಾಲೆಯ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಮುತ್ತು, ಭವಿಷ್ಯದ ಭರವಸೆಯ ಶಿಕ್ಷಕ ಮತ್ತು ಬರಹಗಾರ. ಅವರಲ್ಲಿನ ಜನಪರ ಮತ್ತು ಜೀವಪರ ಕಾಳಜಿಯೇ ಈ ಕಾವ್ಯದಲ್ಲಿ ಅಕ್ಷರ ರೂಪದಲ್ಲಿ ಹೊರಹೊಮ್ಮಿದೆ.

ವೇಶ್ಯಾವಾಟಿಕೆ ಸಂತ್ರಸ್ತೆಯರನ್ನು ಪಾಲಕರಿಗೆ ಹಸ್ತಾಂತರಿಸಿ ಪೊಲೀಸರು!

ಹೈಟೆಕ್ ವೇಶ್ಯಾವಾಟಿಕೆ ಮೇಲೆ ದಾಳಿ ಮಾಡಿದ್ದ ಸಂದರ್ಭದಲ್ಲಿ ರಕ್ಷಣೆಗೆ ಒಳಗಾಗಿದ್ದ ಇಬ್ಬರು ಯುವತಿಯರನ್ನು ಪೊಲೀಸರು ಕುಟುಂಬದ ಸದಸ್ಯರಿಗೆ ಹಸ್ತಾಂತರ ಮಾಡುವ ಮೂಲಕ ಕರ್ತವ್ಯ ನಿಷ್ಠೆ ಮೆರೆದಿದ್ದಾರೆ.

ಕ್ವಾರಂಟೈನ್ ನಲ್ಲಿ ಕೋಳಿಗಾಗಿ ಆಶಾ ಕಾರ್ಯಕರ್ತೆಯ ಮೇಲೆ ಹಲ್ಲೆ

ಕ್ವಾರಂಟೈನ್ ಕೇಂದ್ರದಲ್ಲಿ ತಮಗೆ ಚಿಕನ್ ಕೊಡಲಿಲ್ಲ ಎಂದು ಆರೋಪಿಸಿ ಆಶಾ ಕಾರ್ಯಕರ್ತೆಯ ಮೇಲೆ ಹಲ್ಲೆ ನಡೆಸಿದ ಘಟನೆ ನಡೆದಿದೆ.