ಉತ್ತರ ಪ್ರದೇಶ: ಪ್ರತಿಯೊಬ್ಬರಿಗೂ ಮದುವೆ ಬಗ್ಗೆ ಅವರದ್ದೆ ಕನಸಿರುತ್ತೆ. ಆಸೆ-ಆಕಾಂಕ್ಷೆಗಳಿರುತ್ತೆ. ಆದರೆ ಇಲ್ಲೊಬ್ಬ ಯುವತಿ ಮದುಮಗ ತನ್ನ ಕೊರಳಿಗೆ ಹಾರ ಹಾಕಿದ ತಕ್ಷಣ ತನ್ನ ಪ್ರತಿಕ್ರಿಯೇ ಹೇಗಿರಬೇಕೆಂದು ವಿಭಿನ್ನ ಕಲ್ಪನೆಯೊಂದನ್ನು ಕಟ್ಟಿಕೊಂಡಿದ್ದಳು. ಈ ಕಾರಣಕ್ಕಾಗಿ ಏನೋ ಮಾಡಲು ಹೋಗಿ ಯಡವಟ್ಟು ಮಾಡಿಕೊಂಡ ಘಟನೆ ಉತ್ತರಪ್ರದೇಶದಲ್ಲಿ ನಡೆದಿದೆ.
ಮದುಮಗಳ ಕೊರಳಿಗೆ ಮದುಮಗ ಹಾರ ಹಾಕುತ್ತಿದ್ದಂತೆಯೇ ಮದುಮಗಳು ಖುಷಿಯಿಂದ ಕೈಯನ್ನು ಮೇಲಕ್ಕೆತ್ತಿ ಗುಂಡು ಹಾರಿಸುವ ಮೂಲಕ ಪೇಚಿಗೆ ಸಿಲುಕಿದ್ದಾಳೆ. ಇಂಥದ್ದೊಂದು ವಿಚಿತ್ರ ಘಟನೆ ನಡೆದಿರುವುದು ಉತ್ತರ ಪ್ರದೇಶದ ಪ್ರತಾಪಗಢದಲ್ಲಿ. ರೂಪಾ ಎಂಬಾಕೆ ಯ ಮದುವೆ ನಡೆಯುತ್ತಿತ್ತು. ಅವಳು ಮೊದಲೇ ಈ ರೀತಿ ಮಾಡಲು ಪ್ಲ್ಯಾನ್ ಮಾಡಿಕೊಂಡಿದ್ದಳು. ತನ್ನ ಮದುವೆಯನ್ನು ಭಿನ್ನವಾಗಿ ಆಚರಿಸಬೇಕು ಎಂದುಕೊಂಡಿದ್ದ ಇವಳು ಮದುವೆಯ ವೇಳೆ ಗುಂಡು ಹಾರಿಸಿದ್ದಾಳೆ. ಈ ವಿಡಿಯೋ ಜಾಲತಾಣದಲ್ಲಿ ವೈರಲ್‌ ಆಗಿದ್ದು, ಸಾರ್ವಜನಿಕರಿಂದ ವ್ಯಾಪಕ ವಿರೋಧ ವ್ಯಕ್ತವಾಗಿದೆ. ಮದುಮಗಳ ವಿರುದ್ಧ ದೂರು ದಾಖಲಾಗಿದೆ. ಮದುವೆಯಾಗಿ ಗಂನ ಮನೆಗೆ ಹೋಗಬೇಕಿದ್ದ ಮದುಮಗಳು ಸ್ವಯಂಕೃತ ಅಪರಾಧದಿಂದ ಪೊಲೀಸ್ ಠಾಣೆ ಮೆಟ್ಟಿಲೇರುವಂತಾಗಿದೆ.

Leave a Reply

Your email address will not be published. Required fields are marked *

You May Also Like

ಬಿಹಾರದಲ್ಲಿ ಕ್ವಾರಂಟೈನ್ ಆದವರಿಗೆ ಕಾಂಡೋಮ್ ಉಚಿತ..!

ಕ್ವಾರಂಟೈನ್ ಪೂರ್ಣಗೊಳಿಸಿ ಮನೆಗಳಿಗೆ ಹಿಂದಿರುಗುತ್ತಿರುವ ಕಾರ್ಮಿಕರಿಗೆ ಬಿಹಾರ ಸರ್ಕಾರ ಕಾಂಡೋಮ್, ಗರ್ಭನಿರೋಧಕ, ಪ್ರೆಗ್ರನ್ಸಿ ಕಿಟ್ ಳನ್ನು ಉಚಿತವಾಗಿ ನೀಡಿದೆ.

ಒಂದೆ ಬೀದಿಯಲ್ಲಿ 42 ಕೊರೋನಾ ಪಾಸಿಟಿವ್

ಇಲ್ಲಿಯ ಬೀದಿಯೊಂದರಲ್ಲಿಯೇ ದಾಖಲೆಯ 42 ಕೊರೊನಾ ಪ್ರಕರಣಗಳು ಪತ್ತೆಯಾಗಿವೆ.ಟಿ, ಕಾಫಿ ಮತ್ತಿತರ ಸ್ನ್ಯಾಕ್ಸ್ ವಿತರಿಸುತ್ತಿದ್ದ ಇಬ್ಬರಲ್ಲಿ ಕೊರೊನಾ ದೃಢಪಟ್ಟಿತ್ತು. ಆನಂತರ ಇಡೀ ಬೀದಿಗೆ ಅಂಟಿಕೊಂಡಿದೆ.

ರಾಜ್ಯದಲ್ಲಿ ಕೊರೋನಾ ಸೋಂಕಿತರ ಸಂಖ್ಯೆ 512ಕ್ಕೆ ಏರಿಕೆ

ಕೊರೋನಾ ಸೊಂಕಿಗೆ ಸಾಕಷ್ಟು ಸಾವು ನೋವುಗಳು ಸಂಭವಿಸುತ್ತಿದ್ದು, ರಾಜ್ಯ-ದೇಶ-ರಾಷ್ಟ್ರದಲ್ಲಿ ಕೊರೋನಾ ಸೋಂಕಿತರ ಅಪ್ಡೇಟ್ ಮಾಹಿತಿ..

ಪ್ರೀತಿಸಿ ಓಡಿ ಹೋದವರು ಕ್ವಾರಂಟೈನ್ ನಲ್ಲಿಯೇ ಮದುವೆಯಾದರು

ಕೊರೊನಾ ಮಹಾರಮಾರಿಯ ಆಟ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಇದು ಸದ್ಯ ಜನರ ಪ್ರತಿಯೊಂದು ಕಾರ್ಯಕ್ಕೂ ಅಡ್ಡಿಯಾಗಿದೆ.