ಬೆಂಗಳೂರು: ಸಹಕಾರ ಬ್ಯಾಂಕ್ ಗಳ ಮೂಲಕ ಈ ವರ್ಷ20,810 ಕೋಟಿ ರೂ. ಬೆಳೆ ಸಾಲ ನೀಡುವ ಗುರಿ ನೀಡಲಾಗಿದೆ ಎಂದು ಸಹಕಾರ ಸಚಿವ ಎಸ್ ಟಿ ಸೋಮಶೇಖರ್ ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಗುರಿ ತಲುಪಲು ರಾಜ್ಯದ 212 ಡಿಸಿಸಿ ಬ್ಯಾಂಕ್ ಗಳಿಗೆ ತಿಳಿಸಲಾಗಿದೆ. 303 ಲಕ್ಷ ರೈತರನ್ನು ತಲುಪಲು ಹೇಳಿದ್ದೇವೆ ಎಂದರು.
2020-21 ನೇ ಸಾಲಿನಲ್ಲಿ 15400ಕೋಟಿ ರೂ. ಗುರಿ ನೀಡಲಾಗಿತ್ತು.17901 ಕೋಟಿ ರೂ. ತಲುಪಲಾಗಿದೆ. ಇದರಲ್ಲಿ ಅಲ್ಪವಾಧಿ, ಮಧ್ಯಮಾವಧಿ, ದೀರ್ಘಾವಧಿ ಸಾಲಗಳು ಸೇರಿವೆ ಎಂದು ಹೇಳಿದರು.ನಾವು ಕೊಟ್ಟಿದ್ದ ಟಾರ್ಗೆಟ್ ಹೆಚ್ಚಿನ ಮಟ್ಟದಲ್ಲೇ ರೀಚ್ ಆಗಿದ್ದಾರೆ. ಲಾಕ್‌ಡೌನ್ ಮುಗಿದ ಬಳಿಕ ಎಲ್ಲಾ ಡಿಸಿಸಿ ಬ್ಯಾಂಕ್‌ಗಳಿಗೆ ಭೇಟಿ ಕೊಡುವುದಾಗಿ ಅವರು ಹೇಳಿದರು.
ಕಳೆದ ವರ್ಷ ಐದಾರು ಡಿಸಿಸಿ ಬ್ಯಾಂಕ್‌ಗಳು ಸ್ವಲ್ಪ ಗುರಿ ತಲುಪಿಲ್ಲ. ಅವರಿಗೆ ಈ ವರ್ಷ ಗುರಿ ತಲುಪಲೇಬೇಕು ಎಂದು ನಿರ್ದೇಶನ ನೀಡಲಾಗಿದೆ ಎಂದು ಅವರು ಹೇಳಿದರು. ಮೈಸೂರು ಜಿಲ್ಲೆಯಲ್ಲಿ ಸಾವಿನ ವಿಚಾರ ಮುಚ್ಚಿಟ್ಟಿದ್ದಾರೆ ಎಂಬ ಶಾಸಕ ಸಾ.ರಾ. ಮಹೇಶ್ ಆರೋಪ ಬಗ್ಗೆ ಪ್ರತಿಕ್ರಿಯಿಸಿದ ಸಚಿವರು, ಆ ಬಗ್ಗೆ ನಂಗೆ ಗೊತ್ತಿಲ್ಲ. ಮಾಹಿತಿ ತೆಗೆದುಕೊಳ್ಳುತ್ತೇನೆ ಎಂದು ತಿಳಿಸಿದರು. ನಮ್ಮ ಟಾರ್ಗೆಟ್ ಕೋರೊನಾ ಮುಕ್ತ ಮಾಡೋದು. ಆ ಬಗ್ಗೆ ಎಲ್ಲರನ್ನೂ ಕೂರಿಸಿಕೊಂಡು ತಿಳಿಸಿದ್ದೇನೆ.

Leave a Reply

Your email address will not be published. Required fields are marked *

You May Also Like

ಆಧುನಿಕ ಭಾರತದಲ್ಲಿ ಲಿಂಗ ತಾರತಮ್ಯ ಕುರಿತು ರಾಷ್ಟ್ರ ಮಟ್ಟದ ವೆಬಿನಾರ

ನಗರದ ಜನತಾ ಶಿಕ್ಷಣ ಸಮಿತಿಯ ಬನಶಂಕರಿ ಆರ್ಟ್ಸ್, ಕಾಮರ್ಸ್ ಮತ್ತು ಎಸ್.ಕೆ.ಗುಬ್ಬಿ ವಿಜ್ಞಾನ ಮಹಾವಿದ್ಯಾಲಯ ಹಾಗೂ ಅರ್ಥಶಾಸ್ತ್ರ ವಿಭಾಗದ ವತಿಯಿಂದ ಒಂದು ದಿನದ ಆಧುನಿಕ ಭಾರತದಲ್ಲಿ ಲಿಂಗ ತಾರತಮ್ಯ ಕುರಿತು ರಾಷ್ಟ್ರ ಮಟ್ಟದ ವೆಬಿನಾರ ಆಯೋಜಿಸಲಾಗಿದೆ.

ಗದಗ ಜಿಲ್ಲೆಯಲ್ಲಿ ಕೊರೊನಾ ಕಾರ್ಮೋಡ: ಇಂದು 31 ಪಾಸಿಟಿವ್!

ಜಿಲ್ಲೆಯಲ್ಲಿಂದು 31 ಕೊರೊನಾ ಪಾಸಿಟಿವ್ ಪತ್ತೆಯಾಗಿದ್ದು ಈ ಮೂಲಕ ಸೋಂಕಿತರ ಸಂಖ್ಯೆ 616 ಕ್ಕೆ ಏರಿಕೆಯಾಗಿದೆ. ಒಟ್ಟು ಗುಣಮುಖ ಹೊಂದಿ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದವರ ಸಂಖ್ಯೆ 226. 376

ಕಸಾಪ ರಾಜ್ಯಾಧ್ಯಕ್ಷ ಮನು ಬಳಿಗಾರ ಹೇಳಿಕೆ: ಭವನ ನಿರ್ಮಾಣಕ್ಕೆ ಅಗತ್ಯ ಅನುದಾನಕ್ಕಾಗಿ ಸರ್ಕಾರದ ಗಮನ ಸೆಳೆಯಲಾಗುವುದು

ಕಸಾಪ ರಾಜ್ಯಾಧ್ಯಕ್ಷ ನಾಡೋಜ ಡಾ.ಮನು ಬಳಿಗಾರ ಅವರು ಶನಿವಾರ ಪಟ್ಟಣದಲ್ಲಿ ನಿರ್ಮಣ ಹಂತದಲ್ಲಿರುವ ಕನ್ನಡ ಸಾಹಿತ್ಯ ಭವನ ನಿರ್ಮಾಣ ಕಾಮಗಾರಿ ಪರಿಶೀಲಿಸಿದರು.

ಗದಗ ಜಿಲ್ಲೆಯಲ್ಲಿಂದು ಪತ್ತೆಯಾದ ಸೋಂಕಿತರ ವಿವರ

ಗದಗ ಜಿಲ್ಲೆಯ ಗದಗ, ಮುಂಡರಗಿ, ರೋಣ, ನರಗುಂದ, ಶಿರಹಟ್ಟಿ ತಾಲೂಕುಗಳಲ್ಲಿ ಕೊರೊನಾ ಸೋಂಕಿತರು ಇಂದು ದೃಢಪಟ್ಟಿದ್ದಾರೆ. ಒಬ್ಬರು ಸೋಂಕಿನಿಂದ ಮೃತಪಟ್ಟಿದ್ದಾರೆ.