ಲಕ್ಷ್ಮೇಶ್ವರ: ಕಸಾಪ ರಾಜ್ಯಾಧ್ಯಕ್ಷ ನಾಡೋಜ ಡಾ.ಮನು ಬಳಿಗಾರ ಅವರು ಶನಿವಾರ ಪಟ್ಟಣದಲ್ಲಿ ನಿರ್ಮಣ ಹಂತದಲ್ಲಿರುವ ಕನ್ನಡ ಸಾಹಿತ್ಯ ಭವನ ನಿರ್ಮಾಣ ಕಾಮಗಾರಿ ಪರಿಶೀಲಿಸಿದರು.

ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ರಾಜ್ಯದ ಎಲ್ಲ ತಾಲೂಕು ಕೇಂದ್ರಗಳಲ್ಲಿ ಕನ್ನಡ ಸಾಹಿತ್ಯ ಭವನ ನಿರ್ಮಾಣಗೊಳ್ಳಬೇಕೆಂಬ ಉದ್ದೇಶದಿಂದ ಅನೇಕ ತಾಲೂಕುಗಳಿಗೆ ಪ್ರಾರಂಭಿಕ ಹಂತದ 10 ಲಕ್ಷ ರೂ ಅನುದಾನ ನೀಡಲಾಗಿದೆ. ಅವುಗಳಲ್ಲಿ ಕೆಲವು ಪೂರ್ಣಗೊಂಡಿದ್ದು ಇನ್ನು ಕೆಲವು ಕರೊನಾ ಹಾವಳಿ, ಅನುದಾಣ ಕೊರತೆ ಇನ್ನು ಕೆಲ ಕಾರಣಗಳಿಂದ ಅರ್ಧಕ್ಕೆ ನಿಂತಿವೆ. ಜಿಲ್ಲಾ ಕಸಾಪ ಅಧ್ಯಕ್ಷರುಗಳು, ತಮ್ಮ ವ್ಯಾಪ್ತಿಯ ಜನಪ್ರತಿನಿಧಿಗಳು, ದಾನಿಗಳ ಸಹಕಾರದಿಂದ ಕಟ್ಟಡ ಪೂರ್ಣಗೊಳಿಸುವ ಭರವಸೆ ನೀಡಿದ್ದಾರೆ. ಅರ್ಧಕ್ಕೆ ನಿಂತಿರುವ ಭವನ ನಿರ್ಮಾಣ ಕಾರ್ಯ ಪೂರ್ಣಗೊಳ್ಳಲು ಬೇಕಾದ ಹೆಚ್ಚುವರಿ ಅನುದಾನದ ಕೊರತೆ ನೀಗಿಸುವ ನಿಟ್ಟಿನಲ್ಲಿ ಸರ್ಕಾರದ ಗಮನ ಸೆಳೆಯುವ ಪ್ರಾಮಾಣಿಕ ಪ್ರಯತ್ನ ಮಾಡುವ ಭರವಸೆ ನೀಡಿದರು.

ಹಾವೇರಿಯಲ್ಲಿ ಕಸಾಪ ಸಮ್ಮೇಳನಕ್ಕೆ ಸಿದ್ಧತೆ

ಕಸಾಪ ಎಲ್ಲ ಸಮ್ಮೇಳನ ಮತ್ತು ಕನ್ನಡ ಕಾರ್ಯಕ್ರಮಗಳಿಗೆ ಎಲ್ಲ ಸರಕಾರಗಳು ಅತ್ಯುತ್ತಮ ರೀತಿಯಲ್ಲಿ ಸ್ಫಂದಿಸಿವೆ. ಹಾವೇರಿ ಜಿಲ್ಲೆಯಲ್ಲಿ ನಡೆಯಬೇಕಾಗಿರುವ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಮಾಡಲು ಈಗಾಗಲೇ ಪೂರ್ವಭಾವಿ ಸಭೆ ಮಾಡಿ ಸಮ್ಮೇಳನದ ಯಶಸ್ಸಿಗೆ ಕೈಗೊಳ್ಳಬೇಕಾದ ಕ್ರಮಗಳ ಕುರಿತು ಚರ್ಚಿಸಲಾಗಿದೆ. ಜಿಲ್ಲೆಯ ಸಮಸ್ತ ಜನತೆ ಸಮ್ಮೇಳನ ಮಾಡುವ ನಿಟ್ಟಿನಲ್ಲಿ ಉತ್ಸುಕರಾಗಿದ್ದು ಗೃಹ ಸಚಿವರ ಬಸವರಾಜ ಬೊಮ್ಮಾಯಿಯವರೂ ಬೇಕಾದ ಅನಕೂಲತೆ ಕಲ್ಪಿಸಿಕೊಡುವ ಭರವಸೆ ನೀಡಿದ್ದಾರೆ. ಕಸಾಪಕ್ಕೆ ಸಮ್ಮೇಳನ ಮಾಡಲಾರದ ನಿಷ್ಕಿçÃಯತೆಯೂ ಇಲ್ಲ ಮತ್ತು ಕರೋನಾ ಹಿನ್ನೆಲೆಯಲ್ಲಿ ಮಾಡುವ ಅವಸರವು ಇಲ್ಲ. ಈಗಾಗಲೇ ಸಮ್ಮೇಳದ ವಿವಿಧ ಸಮಿತಿಗಳ ರಚನೆ, ಗೋಷ್ಠಿಗಳ ಆಯೋಜನೆ, ಸಮ್ಮೇಳನ ಸರ್ವಾಧ್ಯಕ್ಷರ ಆಯ್ಕೆ ಇನ್ನೂ ಅನೇಕ ವಿಷಯಗಳ ಕುರಿತು ಚರ್ಚಿಸಲಾಗಿದೆ. ಕರೊನಾ ವೈರಸ್‌ನ ಪ್ರಭಾವ ಕಡಿಮೆಯಾಗುತ್ತಿದ್ದಂತೆಯೇ ಸಮ್ಮೇಳನ ದಿನ ನಿಗದಿಪಡಿಸಲಾಗುವುದು ಎಂದರು.

ಕಸಾಪ ರಾಜ್ಯಾಧ್ಯಕ್ಷ ಸ್ಥಾನದ ಆಕಾಂಕ್ಷಿಯಲ್ಲ

ಪ್ರತಿ 3 ವರ್ಷಕ್ಕೊಮ್ಮೆ ಕಸಾಪ ಚುನಾವಣೆ ನಡೆಸುವುದರಿಂದ ಸಾಕಷ್ಟು ಹಣ ವ್ಯಯವಾಗುತ್ತದೆ. ಹಣ, ಸಮಯ, ಶ್ರಮ ಮತ್ತು ಕನ್ನಡ ಕೆಲಸಕ್ಕೆ ಹೆಚ್ಚು ಸಮಯಾವಕಾಶ ಕಲ್ಪಿಸುವ ಸದುದ್ದೇಶದಿಂದ ಕಸಾದ ಅಧಿಕಾರವಧಿ 5 ವರ್ಷಕ್ಕೆ ವಿಸ್ತರಿಸಲಾಗಿದೆ. ಅವಕಾಶ ವಂಚಿತರಾದ ಮಹಿಳೆಯರಿಗೆ, ಎಸ್‌ಸಿ/ಎಸ್‌ಟಿಯವರಿಗೆ ಹೆಚ್ಚು ಸ್ಥಾನಗಳ ಅವಕಾಶ ಕಲ್ಪಿಸು ಕಾರ್ಯ ಮಾಡಿದ್ದೇನೆ. ಇದರಲ್ಲಿ ತಮ್ಮ ಯಾವುದೇ ಸ್ವಾರ್ಥವಿಲ್ಲ ಮತ್ತು ತಾವು ಮುಂದಿನ ಕಸಾಪ ರಾಜ್ಯಾಧ್ಯಕ್ಷ ಚುನಾವಣೆಗೆ ಸ್ಫರ್ಧಿಸುವುದಿಲ್ಲ ಎಂಬುದನ್ನು ಸ್ಫಷ್ಟ ಪಡಿಸಿದರು.

ಇದೇ ವೇಳೆ ಕಸಾಪ ರಾಜ್ಯಾಧ್ಯಕ್ಷ ಮನು ಬಳಿಗಾರ ಅವರು ಲಕ್ಷ್ಮೆಶ್ವರದಲ್ಲಿ ನಿರ್ಮಾಣಗೊಳ್ಳುತ್ತಿರುವ ಕನ್ನಡ ಸಾಹಿತ್ಯ ಭವನದ ಕಾಮಗಾರಿ ವೀಕ್ಷಿಸಲು ಆಗಮಿಸಿದ ವೇಳೆ ಕಸಾಪ ತಾಲೂಕು ಅಧ್ಯಕ್ಷೆ ಡಾ.ಜಯಶ್ರೀ ಹೊಸಮನಿ ಅವರ ನಿವಾಸದಲ್ಲಿ ಸನ್ಮಾನಿಸಲಾಯಿತು.

ಈ ವೇಳೆ ತಹಸೀಲ್ದಾರ ಬ್ರಮರಾಂಬಾ ಗುಬ್ಬಿಶೆಟ್ಟಿ, ಜಿಲ್ಲಾ ಕಸಾಪ ಅಧ್ಯಕ್ಷ ಶರಣು ಗೋಗೇರಿ, ತಾಲೂಕಾಧ್ಯಕ್ಷೆ ಡಾ.ಜಯಶ್ರೀ ಹೊಸಮನಿ, ಸೋಮು ಕೆರಿಮನಿ, ಜೆ.ಆರ್.ರಾಮಶೆಟ್ಟರ, ಮಹಾದೇವಪ್ಪ ಕೊತ್ತಲ, ಎಸ್.ವ್ಹಿ.ಕಮ್ಮಾರ, ಸಿ.ಜಿ.ಹಿರೇಮಠ, ಪುರಸಭೆ ಸದಸ್ಯೆ ಅಶ್ವಿನಿ ಅಂಕಲಕೋಟಿ, ಮೈತ್ರಾದೇವಿ ಹಿರೇಮಠ, ನಾಗರಾಜ ಕಳಸಾಪೂರ, ಎ.ಎಂ.ಗುತ್ತಲ್, ಬಿ.ಎಂ.ಆಲೂರ, ರಾಘವೇಂದ್ರ ಬಳ್ಳಾರಿ, ಎಂ.ಬಿ.ಹೊಸಮನಿ, ಮಹಾಂತೇಶ ಹಳ್ಳೂರ, ಆನಂದ ಮುಳಗುಂದ, ಸಂತೋಷ ಬಿರಾದಾರ, ಬಸವರಾಜ ಹುಲ್ಲತ್ತಿ ಹಲವರಿದ್ದರು.

Leave a Reply

Your email address will not be published. Required fields are marked *

You May Also Like

ಮಹಿಳೆಯರ ಬಟ್ಟೆ ಕದಿಯುತ್ತಿದ್ದ ಕಳ್ಳನಿಗೆ ಥಳಿತ..!

ಹುಬ್ಬಳ್ಳಿ: ಚಿನ್ನಾಭರಣ ಕದ್ದಿರೋ ಕಳ್ಳರನ್ನು ನೋಡಿದ್ದೇವೆ. ಮನೆ ದರೋಡೆ ಮಾಡಿರೋದನ್ನು ನೋಡಿದ್ದೇವೆ. ಆದ್ರೆ ಮಹಿಳೆಯರ ಬಟ್ಟೆ…

ಗಣರಾಜ್ಯೋತ್ಸವ ಪರೇಡ್ ನಲ್ಲಿ ನಾರಾಯಣ ಗುರುಗಳ ಸ್ತಬ್ಧ ಚಿತ್ರ ತಿರಸ್ಕಾರ: ಖಂಡನೆ

ಉತ್ತರಪ್ರಭ ಸುದ್ದಿಶಿರಹಟ್ಟಿ: ಜನೆವರಿ 26 ರಂದು ಗಣರಾಜ್ಯೋತ್ಸವ ಪರೇಡ್ ಕಾರ್ಯಕ್ರಮದಲ್ಲಿ ನಾರಾಯಣ ಗುರುಗಳ ಸ್ತಬ್ಧ ಚಿತ್ರವನ್ನು…

ಹಾಲಕೆರೆ ಅಭಿನವ ಅನ್ನದಾನ ಶ್ರೀ ಗಳು ಲಿಂಗೈಕ್ಯ

ಲಿಂಗೈಕ್ಯ ಶ್ರೀ ಗಳ ಅಗಲಿಕೆ ರೋಣ ಕ್ಷೇತ್ರದ ಶಾಸಕ ಕಳಕಪ್ಪ ಜಿ,ಬಂಡಿ ಹಾಗೂ ಮಾಜಿ ಶಾಸಕ ಜಿ,ಎಸ್,ಪಾಟೀಲ ಸೇರಿದಂತೆ ಅನೇಕ ಗಣ್ಯರು ಸಂತಾಪ ಸೂಚಿಸಿದರು.