ಧಾರವಾಡ: ನಗರದ ಜನತಾ ಶಿಕ್ಷಣ ಸಮಿತಿಯ ಬನಶಂಕರಿ ಆರ್ಟ್ಸ್, ಕಾಮರ್ಸ್ ಮತ್ತು ಎಸ್.ಕೆ.ಗುಬ್ಬಿ ವಿಜ್ಞಾನ ಮಹಾವಿದ್ಯಾಲಯ ಹಾಗೂ ಅರ್ಥಶಾಸ್ತ್ರ ವಿಭಾಗದ ವತಿಯಿಂದ ಒಂದು ದಿನದ  ಆಧುನಿಕ ಭಾರತದಲ್ಲಿ ಲಿಂಗ ತಾರತಮ್ಯ ಕುರಿತು ರಾಷ್ಟ್ರ ಮಟ್ಟದ ವೆಬಿನಾರ ಆಯೋಜಿಸಲಾಗಿದೆ.

ಜ.9 ರಂದು ಬೆಳಿಗ್ಗೆ 10 ಗಂಟೆಗೆ ವೆಬಿನಾರ್ ಆರಂಭವಾಗಲಿದೆ. ಧಾರವಾಡ ಕವಿವಿ ಸಮಾಜ ಶಾಸ್ತ್ರ ವಿಭಾಗದ ಪ್ರಾದ್ಯಾಪಕಿ ಮತ್ತು ಮಹಿಳಾ ಅದ್ಯಯನ ಸಂಶೋಧನ ಕೇಂದ್ರದ ನಿರ್ದೇಶಕಿ ಡಾ.ಶಕುಂತಲಾ ಸಿದ್ರಾಮಶೆಟ್ಟರ್ ಅವರು ಸಂಪನ್ಮೂಲ ವ್ಯಕ್ತಿಗಳಾಗಿ ಪಾಲ್ಗೊಳ್ಳಲಿದ್ದಾರೆ. ಉಚಿತ ನೋಂದಣಿಗೆ ಅವಕಾಶವಿದ್ದು, ಗೂಗಲ್ ಮೀಟ್ https://cutt.ly/hjaL1CK ಲಿಂಕನ್ನು ಒತ್ತಿ ವೆಬಿನಾರ್ ನಲ್ಲಿ ಭಾಗಿಯಾಗಲು ನೋಂದಣಿ ಮಾಡಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ. ಅಭಿವೃದ್ಧಿ ಅಧಿಕಾರಿ ಡಾ.ಸುರಜ್ ಜೈನ್, ಹಣಕಾಸು ಅಧಿಕಾರಿ ಡಾ.ಅಜಿತ್ ಪ್ರಸಾದ್, ಕಾರ್ಯದರ್ಶಿ ಡಾ.ಎನ್.ವಜ್ರಕುಮಾರ್, ರಸಾಯನ ಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ.ವೆಂಕಟೇಶ್ ಮುತಾಲಿಕ್, ಪ್ರಾಚಾರ್ಯ ಡಾ.ಜಿ.ಕೃಷ್ಣಮೂರ್ತಿ, ಅರ್ಥಶಾಸ್ತ್ರ ವಿಭಾಗದ ಮುಖ್ಯಸ್ಥ ಹಾಗೂ ಸಂಯೋಜಕ ಡಾ.ಶೌಕತ್ ಅಲಿ ಮೇಗಲಮನಿ ವೆಬಿನಾರ್ ನಲ್ಲಿ ಭಾಗವಹಿಸುವವರನ್ನು ಸ್ವಾಗತಿಸಲಿದ್ದಾರೆ.

ಹೆಚ್ಚಿನ ಮಾಹಿತಿಗಾಗಿ ತನುಜಾ ರೋಖಡೆ ಮೊ. 8792740060 ಹಾಗೂ ಪ್ರಶಾಂತ ಯಡ್ರಾಮಿಮಠ 89513 33220 ಅವರನ್ನು ಸಂಪರ್ಕಿಸಲು ಕೋರಲಾಗಿದೆ.

Leave a Reply

Your email address will not be published. Required fields are marked *

You May Also Like

ಕ್ರಿಕೆಟ್ ದಿಗ್ಗಜ ಶೇನ್ ವಾರ್ನ್  ನಿಧನ

ಬ್ರಿಸ್ಬೇನ್: ಆಸ್ಟ್ರೇಲಿಯಾದ ಕ್ರಿಕೆಟ್ ದಿಗ್ಗಜ ಶೇನ್ ವಾರ್ನ್(52) ಶುಕ್ರವಾರದಂದು ನಿಧನರಾಗಿದ್ದಾರೆ.ಅವರು  ಹೃದಯಾಘಾತದಿಂದ ಮೃತಪಟ್ಟಿದ್ದಾರೆ ಎಂದು ತಿಳಿದು…

Как скачать приложение Мостбет в Казахстане на Android и iOS Информация от компаний Астаны

Мостбет КЗ официальный сайт Mostbet KZ, регистрация и бонусы Content Финансовые транзакции:…

ಮತ ಎಣಿಕೆ ಕೇಂದ್ರದಲ್ಲಿ ಅಭ್ಯರ್ಥಿ ಅಸ್ವಸ್ಥ

ಗ್ರಾಮ ಪಂಚಾಯತ್ ಚುನಾವಣೆಯ‌ ಮತ ಎಣಿಕೆ ಹಿನ್ನೆಲೆ ಇಂದು ಮತ ಎಣಿಕೆ ಕೇಂದ್ರಕ್ಕೆ ಆಗಮಿಸಿದ್ದ ಅಭ್ಯರ್ಥಿ ಅಸ್ವಸ್ಥಗೊಮಡ ಘಟನೆ ಹಾವೇರಿಯಲ್ಲಿ ನಡೆದಿದೆ.

ಪಿಜಿ ಬಾಡಿಗೆ ಹಣ ಕೊಡದಿದ್ದಕ್ಕೆ ಮಾಲಿಕ ಮಾಡಿದ್ದೇನು?

ಪಿಜಿ ಬಾಡಿಗೆ ನೀಡಿಲ್ಲವೆಂಬ ಕಾರಣಕ್ಕೆ ಯುವತಿಯರನ್ನು ಪಿಜಿ ಮಾಲೀಕ ಕೂಡಿ ಹಾಕಿದ ಘಟನೆ ನಗರದ ಕುವೆಂಪುನಗರ ಬಡಾವಣೆಯಲ್ಲಿ ನಡೆದಿದೆ.