ಲಕ್ಷ್ಮೇಶ್ವರ: ಪಟ್ಟಣದಲ್ಲಿ ಮಾಜಿ ಶಾಸಕ ಗಂಗಣ್ಣ ಮಹಾಂತಶೆಟ್ಟರ್ ಅವರು ಡಾ.ಚಂದ್ರು ಲಮಾಣಿ ಅಭಿಮಾನಿ ಬಳಗದಿಂದ ನಿತ್ಯ ಮದ್ಯಾಹ್ನದ ಲಘು ಉಪಹಾರ ವ್ಯವಸ್ಥೆಗೆ ಚಾಲನೆ ನೀಡಿದರು.
ಈ ವೇಳೆ ಚಾಲನೆ ನೀಡಿ ಮಾತನಾಡಿದ ಮಾಜಿ ಶಾಸಕ ಗಂಗಣ್ಣ ಮಹಾಂತಶೆಟ್ಟರ, ಡಾ.ಚಂದ್ರು ಲಮಾಣಿ ಅಭಿಮಾನಿ ಬಳಗದ ಈ ಕಾರ್ಯ ಸಂಕಷ್ಟದಲ್ಲಿರುವ ನಿರ್ಗತಿಕರಿಗೆ ಸಹಾಯವಾಗಲಿದೆ ಎಂದರು.
ಕೊರೋನದ ಈ ಸಂಕಷ್ಟದಲ್ಲಿ ಲಕ್ಷ್ಮೇಶ್ವರ ಮತ್ತು ಶಿರಹಟ್ಟಿ ತಾಲೂಕಿನಲ್ಲಿ ಸಂಕಷ್ಟದಲ್ಲಿರುವ ಕೊರೋನ ವಾರಿಯರ್ಸಗೆ ಹಾಗೂ ನಿರ್ಗತಿಕರಿಗೆ ಅಭಿಮಾನಿ ಬಳಗದವರು ಲಾಕ್ಡೌನ ಮುಗಿವವರೆಗೂ ಉಪಹಾರ ಮುಟ್ಟಿಸುವ ಕಾರ್ಯಕ್ಕೆ ಅಭಿಮಾನಿ ಬಳಗವು ಪಣತೊಟ್ಟು ನಿಂತಿದೆ. ಎಲ್ಲೇ ನಿರ್ಗತಿಕರನ್ನು ಹುಡುಕಿಕೊಂಡು ಹೋಗಿ ಉಪಹಾರ ಮುಟ್ಟಿಸಲಾಗುತ್ತದೆ. ಉಪವಾಸದಿಂದ ಯಾರು ಇರಬಾರದು ಎನ್ನುವ ಕಾರಣಕ್ಕೆ ಅಭಿಮಾನಿ ಬಳಗದ ಒಂದು ಅಳಿಲು ಸೇವೆ ಇದಾಗಿದೆ. ಈ ಸಂಕಷ್ಟದ ಸಮಯದಲ್ಲಿ ಡಾ.ಚಂದ್ರು ಲಮಾಣಿ ಅವರ ಅಭಿಲಾಷೆ ಯಂತೆ ಬಳಗದವರು ಈ ಕಾರ್ಯಕ್ಕೆ ಕೈ ಜೋಡಿಸಿದ್ದಾರೆ ಎಂದು ಅಭಿಮಾನಿಗಳು ಹೇಳಿದರು.
ಈ ಸಂದರ್ಭದಲ್ಲಿ ಸುನಿಲ್ ಮಹಾಂತಶೆಟ್ಟರ, ವಿಜಯಣ್ಣ ಹತ್ತಿಕಾಳ, ಎಮ್.ಆರ್.ಪಾಟೀಲ್, ವಿಜಯ್ ಬೂದಿಹಾಳ್. ಗುರು ಮೆಡ್ಲೆರಿ, ಸೋಮೇಶ್ ಉಪನಾಳ, ಬಸವರಾಜ ಚಕ್ರಸಾಲಿ, ಭೀಮಪ್ಪ ಯಂಗಾಡಿ, ರಮೇಶ ದನದಮನಿ, ಅಭಯ್ ಜೈನ, ಶ್ರೀಧರ ಹುಬ್ಬಳ್ಳಿ, ರುದ್ರಪ್ಪ ಉಮಚಗಿ ಹಾಗೂ ಅಭಿಮಾನಿಗಳು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

You May Also Like

ಗದಗ ಜಿಲ್ಲೆಯ 15 ಕಂಟೇನ್ಮೆಂಟ್ ಪ್ರದೇಶಗಳ ನಿರ್ಬಂಧ ತೆರವು

ಗದಗ: ಜಿಲ್ಲೆಯ ಕೊವಿಡ್-19 ಸೋಂಕು ನಿಯಂತ್ರಣಕ್ಕಾಗಿ ಸೋಂಕಿನ ಸಕಾರಾತ್ಮಕ ಪ್ರಕರಣಗಳು ವರದಿಯಾದ ಕೆಳಕಂಡ 15 ಪ್ರದೇಶಗಳನ್ನು ನಿರ್ಬಂಧಿತ ಪ್ರದೇಶಗಳೆಂದು ಘೋಷಿಸಲಾಗಿತ್ತು.

ನರೇಗಲ್: ಮತದಾನ ಎಂಬುದು ಪ್ರತಿಯೊಬ್ಬರ ಹಕ್ಕು- ಪಾಟೀಲ

ಮತದಾನ ಎಂಬುದು ಸಂವಿಧಾನ ನೀಡಿರುವ ಅತ್ಯಮೂಲ್ಯವಾದ ಹಕ್ಕು ಅದನ್ನು ಸಮರ್ಥವಾಗಿ ಬಳಸಿಕೊಂಡು ಎಲ್ಲರೂ ತಪ್ಪದೆ ಮತದಾನ ಮಾಡುವ ಅಗತ್ಯವಿದೆ ಎಂದು ಪ್ರಾಚಾರ್ಯ ವೈ.ಸಿ.ಪಾಟೀಲ ಹೇಳಿದರು.

ಶಾರ್ಟ್ ಸರ್ಕ್ಯೂಟ್ ನಿಂದ ಜನರಲ್ ಸ್ಟೋರ್ ಗೆ ಬೆಂಕಿ!

ಗದಗ: ಶಾರ್ಟ್ ಸರ್ಕ್ಯೂಟ್ ನಿಂದ ಹೊತ್ತಿ ಜನರಲ್ ಸ್ಟೋರ್ ಒಂದು ಹೊತ್ತಿ ಉರಿದ ಘಟನೆ ಗದಗ ನಗರದ ಕೆ.ಸಿ.ರಾಣಿ ರಸ್ತೆಯಲ್ಲಿರುವ ಚೇತನ ಕ್ಯಾಂಟಿನ್ ಸರ್ಕಲ್ ಬಳಿ ನಡೆದಿದೆ. ಬಸವರಾಜ್ ನಾಡಗೌಡ್ರ ಎಂಬವವರಿಗೆ ಸೇರಿದ ಜನರಲ್ ಸ್ಟೋರ್ ಇದಾಗಿದೆ ಎಂದು ಹೇಳಲಾಗ್ತಿದ್ದು, ಜನರಲ್ ಸ್ಟೋರ್ ಬೆಂಕಿಗೆ ಆಹುತಿಯಾಗಿದೆ. ಸ್ಟೋರ್ ನಲ್ಲಿದ್ದ ಲಕ್ಷಾಂತರ ಮೌಲ್ಯದ ವಸ್ತುಗಳು ಸುಟ್ಟು ಹಾನಿಯಾಗಿವೆ.

ಮುಳಗುಂದ ಅರ್ಬನ್ ಬ್ಯಾಂಕ್ ಅಧ್ಯಕ್ಷರಾಗಿ ಶಿವಣ್ಣ ನೀಲಗುಂದ ಆಯ್ಕೆ

ಮುಳಗುಂದ : ಇಲ್ಲಿನ ದಿ.ಮುಳಗುಂದ ಅರ್ಬನ್ ಸೌಹಾರ್ದ ಕೋ-ಆಪ್ ಬ್ಯಾಂಕ್ ಆಡಳಿತ ಮಂಡಳಿಯ ಅಧ್ಯಕ್ಷ, ಉಪಾಧ್ಯಕ್ಷ…