ಲಕ್ಷ್ಮೇಶ್ವರ: ಕರೋನಾ ಮಹಾಮಾರಿಯ ನಿಯಂತ್ರಣಕ್ಕಾಗಿ ಜಿಲ್ಲೆಯಾದ್ಯಂತ ವಿಧಿಸಲಾಗಿರುವ ಕಠಿಣ ಲಾಕ್ಡೌನ್ ಗೆ ಲಕ್ಷ್ಮೇಶ್ವರ ತಾಲೂಕಿನಾದ್ಯಂತ ಹಾಗೂ ಪಟ್ಟಣದಲ್ಲಿ ಉತ್ತಮ ಸ್ಪಂದನೆ ವ್ಯಕ್ತವಾಗಿದೆ.
ಐದು ದಿನದ ಕಾಲ ನಗರದಲ್ಲಿ ಕಠಿಣ ಲಾಕ್ಡೌನ್ ವಿಧಿಸಲಾಗಿದ್ದ ಹಿನ್ನೆಲೆಯಲ್ಲಿ ಶುಕ್ರವಾರ ಪಟ್ಟಣದಲ್ಲಿ ಲಾಕ್ಡೌನ್ ಸ್ಥಿತಿಗತಿಯನ್ನು ಪರಿಶೀಲನೆ ಮಾಡಲು ಜಿಲ್ಲಾ ಪರೀಕ್ಷಾರ್ಥ ಅಸಿಸ್ಟೆಂಟ್ ಕಮಿಷನರ್ ಮಹಮ್ಮದ್ ಗೌಸ್ ಕೈಸರ್ ಭೇಟಿ ನೀಡಿದ್ದರು.
ನಗರದ ಪ್ರಮುಖ ಸ್ಥಳಗಳನ್ನು ಪರಿಶೀಲನೆ ಮಾಡಿ, ಸವಣೂರ ರಸ್ತೆಯ ನಾಕಾಬಂದಿ, ಹುಬ್ಬಳ್ಳಿ ರಸ್ತೆಯ ನಾಕಾಬಂದಿಯು ಮೂಲಕ ಅನಗತ್ಯವಾಗಿ ಸಂಚರಿಸುತ್ತಿದ್ದ ವಾಹನ ಸವಾರರಿಗೆ ಹಾಗೂ ಕಾರ್ ಡ್ರೈವರ್ ಗಳಿಗೆ ಖಡಕ್ ಎಚ್ಚರಿಕೆ ನೀಡಿದರು. ಕೆಲವೊಂದಿಷ್ಟು ವಾಹನಗಳಿಗೆ ದಂಡ ವಿಧಿಸಲು ಹಾಗೂ ಸೀಜ್ ಮಾಡಲು ಸೂಚಿಸಿದರು.
ಲಕ್ಷ್ಮೇಶ್ವರ ಹೊರವಲಯದ ಹುಬ್ಬಳ್ಳಿ ರಸ್ತೆಯ ಲಿಟಲ್ ಹಾರ್ಟ್ ಶಾಲೆ ಹತ್ತಿರ ಪೊಲೀಸ್ ಇಲಾಖೆಯಿಂದ ಬ್ಯಾರಿಕೇಡ್ ಹಾಕಿ ಪಟ್ಟಣದ ಕಡೆಗೆ ಬರುವ ವಾಹನಗಳನ್ನ ಪರಿಶೀಲಿಸಿದರು.
ಈ ವೇಳೆ ಮಾತನಾಡಿ ಅವರು, ವಿನಾಕಾರಣ ಬೇಕಾಬಿಟ್ಟಿಯಾಗಿ ಓಡಾಡುವಂತಹ ವಾಹನಗಳಿಗೆ ದಂಡ ವಿಧಿಸಿ ಹಾಗೂ ಅನಗತ್ಯ ಸಂಚರಿಸುವ ವಾಹನಗಳನ್ನು ಸೀಜ್ ಮಾಡಲು ತಿಳಿಸಿದರು. ಜಿಲ್ಲೆಯಾದ್ಯಂತ ಸಂಪೂರ್ಣ ಲಾಕ್ ಡೌನ್ ಜಾರಿಗೊಳಿಸಿದ್ದರಿಂದಾಗಿ ತಾಲೂಕಿನ ಗ್ರಾಮೀಣ ಭಾಗದ ಜನರ ಸಂಚಾರ ಸ್ತಬ್ಧವಾಗಿತ್ತು. ಆದರೆ ನೆರೆಯ ಜಿಲ್ಲೆಯ ಜನರ ಸಂಚಾರವೇ ಹೆಚ್ಚಾಗಿ ಕಂಡು ಬಂದಿತು.
ಇದೇ ವೇಳೆ ಪುರಸಭೆ ಮುಖ್ಯಾಧಿಕಾರಿ ಶಂಕರ ಹುಲ್ಲಮ್ಮನವರ, ತಹಸಿಲ್ದಾರ್ ಎಸ್.ಆರ್. ಶಿದ್ದನಗೌಡರ ಅನಗತ್ಯವಾಗಿ ಸಂಚರಿಸುತ್ತಿದ್ದ ವಾಹನಗಳಿಗೆ ದಂಡ ವಿಧಿಸಿ ಬಿಸಿಮುಟ್ಟಿಸಿದರು.

ಈ ಸಂದರ್ಭದಲ್ಲಿ ಕಂದಾಯ ನಿರೀಕ್ಷಕ ಬಸವರಾಜ ಕಾತ್ರಾಳ, ಪುರಸಭೆ ಕಂದಾಯ ನಿರೀಕ್ಷಕ ಬಸವರಾಜ ಬಳಗಾನೂರ, ಸಿದ್ದಣ್ಣ ಬಾಲೆಹೊಸೂರು, ಗ್ರಾ.ಲೆ ಶಿರೋಳ ಹಾಗೂ ಪೊಲೀಸ್ ಇಲಾಖೆ ಸಿಬ್ಬಂದಿ ವರ್ಗದವರು ಮತ್ತು ಶಿಕ್ಷಕ ಸಿಬ್ಬಂದಿ, ಗ್ರಾಮಸಹಾಯಕರು ಉಪಸ್ಥಿತರಿದ್ದರು.

ಲಕ್ಷ್ಮೇಶ್ವರ ಪಟ್ಟಣದ ಶಿಗ್ಲಿ ಕ್ರಾಸ್, ಸವಣೂರು ರೋಡ್, ಪಾದಗಟ್ಟಿ, ಬಜಾರ್ ರೋಡ್, ಸರಾಫ್ ಬಜಾರ್ ಹಾಗೂ ಹುಬ್ಬಳ್ಳಿ ರಸ್ತೆಯ ಲಿಟಲ್ ಹಾರ್ಟ್ ಸ್ಕೂಲ್ ಹತ್ತಿರ ಸೂಕ್ತ ಬಂದೋಬಸ್ತ್ ಮಾಡಲಾಯಿತು. ಜನರಿಲ್ಲದೆ ರಸ್ತೆಗಳೆಲ್ಲ ಬಿಕೋ ಎನ್ನುತ್ತಿದ್ದವು. ಆಸ್ಪತ್ರೆ ಹಾಗೂ ಔಷಧ ಅಂಗಡಿಗಳ ಹೊರತುಪಡಿಸಿ ಇನ್ನುಳಿದ ಅಂಗಡಿಗಳ ವ್ಯಾಪಾರ-ವಹಿವಾಟು ಬಂದ್ ಮಾಡಲಾಗಿತ್ತು.

Leave a Reply

Your email address will not be published. Required fields are marked *

You May Also Like

ವಾಯವ್ಯ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನೌಕರರ ಗೃಹ ನಿರ್ಮಾಣ ಸಹಕಾರ ಸಂಘ ನಿಯಮಿತ ಗದಗ ಚುನಾವಣೆ-2022 ಜಯಗಳಿಸಿದ ಅಭ್ಯರ್ಥಿಗಳು

ಉತ್ತರಪ್ರಭ ಸುದ್ದಿಗದಗ: ವಾಯವ್ಯ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನೌಕರರ ಗೃಹ ನಿರ್ಮಾಣ ಸಹಕಾರ ಸಂಘ…

ದಿನಕ್ಕೆ ಎಷ್ಟು ಬಾರಿ ಮುಖ ತೊಳೆಯಬೇಕು ಗೊತ್ತಾ..?

ಮುಖವು ಪ್ರತಿಯೊಬ್ಬರ ಸೌಂದರ್ಯದ ಕೈಗನ್ನಡಿ. ಮುಖದ ಲಕ್ಷಣ ಕಂಡೇ ಮನುಷ್ಯನ ಗುಣ ಅಳಿಯಬಹುದು ಎನ್ನುತ್ತಾರೆ. ಜೀವನದಲ್ಲಿ ಕಷ್ಟ ಗಳಿಲ್ಲದೆ, ಯಾವುದೇ ಕೆಟ್ಟ ಆಲೋಚನೆಗಳಿಲ್ಲದೆ ಸಂತೋಷವಾಗಿರುವವರ ಮುಖ ನೋಡಲು ಅರಳಿದ ಮಲ್ಲಿಗೆಯಂತೆ ಇರುತ್ತದೆ.

ಮದ್ಯ ಮಾರಾಟದ ನಿರ್ಧಾರ ಸದ್ಯಕ್ಕೆ ಇಲ್ವಂತೆ

ಬೆಂಗಳೂರು : ಸದ್ಯ ಮದ್ಯ ಮಾರಾಟ ಮಾಡುವುದಿಲ್ಲ ಎಂಬ ಸುಳಿವನ್ನು ಸಚಿವ ಆರ್. ಅಶೋಕ್ ಹೇಳಿದ್ದಾರೆ.…

ವಿಜಯನಗರ ಜಿಲ್ಲೆ: ಇಭ್ಭಾಗವಾಗಲಿದೆ ಮೈಸೂರು ರಾಜ್ಯದ ಗಡಿ …!

ಬಳ್ಳಾರಿ ಜಿಲ್ಲೆಯ ಗರ್ಭಸಂಜಾತ ಶಿಶುವಾಗಿ ಹುಟ್ಟಲು ವಿಜಯನಗರ ಜಿಲ್ಲೆಗೆ ಸರ್ಕಾರದಿಂದ ಅನುಮತಿ ಸಿಕ್ಕಿದೆ. ಇದು ಒಂದೆಡೆ ಸಚಿವ ಆನಂದ ಸಿಂಗ್ ರವರ ಕನಸುಗಳಿಗೆ ರೆಕ್ಕೆ ಬರಿಸಿದ್ದರೆ, ಮತ್ತೊಂದೆಡೆ ರಾಜಕೀಯ ಅಸ್ತಿತ್ವಕ್ಕಾಗಿ ಪರದಾಡುತ್ತಿದ್ದ ಆತ್ಮಗಳ ನಿದ್ದೆಗೆಡಿಸಿದೆ. ಬಳ್ಳಾರಿ ಜಿಲ್ಲೆಯ ವಿಭಜನೆಗೆ ಸಾಂಸ್ಕೃತಿಕ ಚಿಂತಕರ ಮನಸ್ಸು ಕೂಡ ಒಪ್ಪುತ್ತಿಲ್ಲವಾದರೂ, ಜಿಲ್ಲಾ ಕೇಂದ್ರ ‘ದೂರ’ ಅನ್ನುವ ಚಡಪಡಿಕೆ ಅವರ ಧ್ವನಿಯನ್ನು ಹತ್ತಿಕ್ಕಿರುವುದು ಸುಳ್ಳೇನಲ್ಲ…!