ಗಜೇಂದ್ರಗಡ: ಕೋವಿಡ್ ಸೊಂಕಿತರ ಆರೈಕೆಗಾಗಿ ಪಟ್ಟಣದಲ್ಲಿ ತೆರೆಯಲಾಗಿದ್ದ ಕೋವಿಡ್ ಕೇರ್ ಸೆಂಟರ್ ಇದೀಗ ಸಮೀಪದ ಕಾಲಕಾಲೇಶ್ವರ ಗ್ರಾಮ ಬಳಿಯ ಕಿತ್ತೂರ ರಾಣಿ ಚನ್ನಮ್ಮ ವಸತಿ ನಿಲಯಕ್ಕೆ ಸ್ಥಳಾಂತರಿಸಲಾಗಿದೆ.
ಪಟ್ಟಣದ ಕುಷ್ಟಗಿ ರಸ್ತೆಯ ಸಮಾಜ ಕಲ್ಯಾಣ ಇಲಾಖೆಯ ಬಾಲಕಿಯರ ವಸತಿ ನಿಲಯದಲ್ಲಿ ತಾಲೂಕಾಡಳಿತ ಕೋವಿಡ್ ಸೊಂಕಿತರಿಗೆ ನೆರವಾಗುವ ಉದ್ದೇಶದಿಂದ 50 ಹಾಸಿಗೆಯ ಕೋವಿಡ್ ಕೇರ್ ಸೆಂಟರ ತೆರೆಯಲಾಗಿತ್ತು. ಆದರೆ ಸೊಂಕಿತರ ಸಂಖ್ಯೆ ಹೆಚ್ಚಾಗುತ್ತಿರುವ ಹಿನ್ನಲೆಯಲ್ಲಿ ಕೇಂದ್ರವನ್ನು ಬೇರೆಡೆಗೆ ಸ್ಥಳಾಂತರಿಸಿದ್ದಾರೆ.
ಸಮೀಪದ ಕಾಲಕಾಲೇಶ್ವರ ಗ್ರಾಮ ಬಳಿ ಇರುವ ಸಮಾಜ ಕಲ್ಯಾಣ ಇಲಾಖೆಯ ಕಿತ್ತೂರರಾಣಿ ಚನ್ನಮ್ಮ ವಸತಿ ನಿಲಯದಲ್ಲಿ 100 ಹಾಸಿಗೆಯ ವ್ಯವಸ್ಥೆ ಕಲ್ಪಿಸಲಾಗಿದೆ. ರೋಣ ತಾಲೂಕಾ ಆರೋಗ್ಯ ಕೇಂದ್ರದಲ್ಲಿ ಸೊಂಕಿತರ ಸಂಖ್ಯೆ ಹೆಚ್ಚಾಗುತ್ತಿರುವ ಹಿನ್ನಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಗಜೇಂದ್ರಗಡ ತಾಲೂಕಾಡಳಿತ ಹೆಚ್ಚಿನ ಬೆಡ್‌ಗಳ ವ್ಯವಸ್ಥೆ ಮಾಡಿಕೊಂಡಿದೆ ಎಂದು ತಿಳಿದು ಬಂದಿದೆ.
ಈ ಕುರಿತು ಕಂದಾಯ ನಿರೀಕ್ಷಕಿ ಗೌರಮ್ಮ ಆನಂದಪ್ಪನವರ ಸುದ್ದಿಗಾರರೊಂದಿಗೆ ಮಾತನಾಡಿ, ಪಟ್ಟಣದಲ್ಲಿನ ಕೋವಿಡ್ ಕೇರ್ ಸೆಂಟರ್ ಇದೀಗ ಕಿತ್ತೂರ ರಾಣಿ ಚನ್ನಮ್ಮ ವಸತಿ ನಿಲಯಕ್ಕೆ ಸ್ಥಳಾಂತರಿಸಿ, ಎಲ್ಲ ಬೆಡ್ ಸೇರಿದಂತೆ ಅಗತ್ಯ ಕ್ರಮ ಕೈಗೊಳ್ಳಲಾಗಿದೆ. ಜೊತೆಗೆ ಸೊಂಕಿತರನ್ನು ಸಹ ಸ್ಥಳಾಂತರಿಸಲಾಗಿದೆ. ಸೊಂಕಿತರಿಗೆ ಸೊಂಕಿತರಿಗೆ ಊಟೋಪಚಾರ, ವೈದ್ಯಕೀಯ ಚಿಕಿತ್ಸೆ, ಶೌಚಾಲಯ ಸೇರಿ ಎಲ್ಲ ಸೌಕರ್ಯ ಕಲ್ಪಿಸಲು ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿಸಿದರು.

Leave a Reply

Your email address will not be published. Required fields are marked *

You May Also Like

ಪುಟಾಣಿಗಳ ಬಿಂದಾಸ್ ಸ್ಟೇಪ್ಸ್…ಬೊಂಬಾಟ್ ಪ್ರಫಾರ್ಮನ್ಸ್ ಗೆ ಜನ ಫಿದಾ…!

ವಿಶೇಷ ವರದಿ: ಗುಲಾಬಚಂದ ಆರ್. ಜಾಧವಆಲಮಟ್ಟಿ : ಪುಟ್ಟ ಪುಟ್ಟ ಪುಟಾಣಿ ಮಕ್ಕಳು ಫೂಲ್ ಜೋಶ್…

ಕೊರೋನಾ ಕಾವ್ಯ ಸರಣಿ ಆರಂಭ

ಕೊರೋನಾ ಸಂಕಷ್ಟದ ಈ ದಿನಗಳಲ್ಲಿ ಮನೆಯಲ್ಲಿಯೇ ಕಾಲ ಕಳಿಯುತ್ತಾ ಸದಾ ಓದು ಬರಹದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡವರ ಸಂಖ್ಯೆ ಬಹಳಷ್ಟಿದೆ. ಹೀಗಾಗಿ ಕವಿಗಳಿಗೊಂದು ಸೂಕ್ತ ವೇದಿಕೆ ಕಲ್ಪಿಸಲು ಕೊರೋನಾ ಕಾವ್ಯ ಸರಣಿ ಆರಂಭಿಸಿದ್ದೇವೆ. ಆಸಕ್ತರು ಕೊರೋನಾ ಬಗ್ಗೆ ಬರೆದಿರುವ ಕವನ ಕಳುಹಿಸಬಹುದು.

ದುಗೂಡದ ಮದ್ಯೆಯೂ ಪರೀಕ್ಷೆ ಬರೆದ ವಿದ್ಯಾರ್ಥಿಗಳು..!: ಪರೀಕ್ಷೆ ಮುಗಿಸಿದ ಸಿದ್ದಪ್ಪ ಮನೆಗೆ ಮರಳಲೇ ಇಲ್ಲ..!

ಮುಂಡರಗಿ: ಗೆಳೆಯರಿಗೆ ಅಚ್ಚುಮೆಚ್ಚಾಗಿದ್ದಾತ. ನಿನ್ನೆಯಷ್ಟೆ ಭವಿಷ್ಯದ ನಿರ್ಣಾಯಕ ಘಟ್ಟದ ಮೊದಲ ಪರೀಕ್ಷೆ ಮುಗಿಸಿದ್ದ. ಸಹಪಾಠಿಗಳೊಂದಿಗೆ ಕೂಡಿ…

ಬೆಂಗಳೂರು ಸೇರಿದಂತೆ ರಾಜ್ಯದ ಹಲವಾರು ಕಡೆ ಭೂ ಕಂಪನ ಅನುಭವ

ಬೆಂಗಳೂರು: ಇಂದು ಬೆಂಗಳೂರು ಸೇರಿದಂತೆ ರಾಜ್ಯದ  ಹಲವೆಡೆ ಭೂಮಿ ಕಂಪಿಸಿದ ಅನುಭವ .ರಾಮನಗರ  ಸೇರಿದಂತೆ ಮಂಡ್ಯದಲ್ಲಿಯೂ…