ಬಸವಣ್ಣನವರ ತತ್ವಗಳು ಸರ್ವಕಾಲಿ ಸತ್ಯಗಳಾಗಿವೆ
ಉತ್ತರಪ್ರಭ ಸುದ್ದಿ
ಗದಗ : ಶ್ರೀ ತೋಂಟದಾರ್ಯ ಮಠದ ಪೂಜ್ಯ ಮಹಾಂತುದೇವರ ನೇತೃತ್ವದಲ್ಲಿ ಶ್ರೀ ಬಸವೇಶ್ವರ ವೃತ್ತದ ಪುತ್ಥಳಿಗೆ ಮಾಲಾರ್ಪಣೆ, ಪುಷ್ಪಾರ್ಪಣೆ, ಬಸವಣ್ಣನವರ ವಚನ ಪಠಣ ಹಾಗೂ ಜಯ ಘೋಷಣೆಗಳನ್ನು ಮಾಡುವ ಮೂಲಕ ಸಾಂಕೇತಿಕವಾಗಿ 916ನೇ ಬಸವ ಜಯಂತಿಯನ್ನು ಆಚರಿಸಲಾಯಿತು.
ಈ ಸಂದರ್ಭದಲ್ಲಿ ಲಿಂಗಾಯತ ಪ್ರಗತಿಶೀಲ ಸಂಘದ ಅಧ್ಯಕ್ಷ ಶ್ರೀ ಎಂ. ಸಿ. ಐಲಿ, ಜಾತ್ರಾ ಕಮೀಟಿ ಅಧ್ಯಕ್ಷ ಅಮರೇಶ ಅಂಗಡಿ, ಡಿ.ಎಸ್.ಎಸ್. ಮುಖಂಡ ಎಸ್. ಎನ್. ಬಳ್ಳಾರಿ, ಬಸವಕೇಂದದ ಎಸ್. ಎಂ. ಕವಳಿಕಾಯಿ, ಬಸವದಳದ ಅಶೋಕ ಬರಗುಂಡಿ, ಪ್ರಕಾಶ ಅಸುಂಡಿ, ಬಸವರಾಜ ಹಿರೇಹಡಗಲಿ, ಮಂಜುನಾಥ ಅಸುಂಡಿ, ಶ್ರೀಮಠದ ಮ್ಯಾನೇಜರ ಶ್ರೀ ಎಂ. ಎಸ್. ಅಂಗಡಿ, ಶಿವಯ್ಯ ನಾಲತ್ವಾಡಮಠ, ನಾಗಭೂಷಣ ಬಡಿಗಣ್ಣವರ, ಅಶೋಕ ಬಂಡೆಪ್ಪನವರ, ಶಿವುಕುಮಾರ ರಾಮನಕೊಪ್ಪ, ಮಹಾಂತೇಶ ಅಂಗಡಿ, ವೀರಭದ್ರಪ್ಪ ಹೂಗಾರ, ಮೆಣಸಿನಕಾಯಿ ವಕೀಲರು, ಭರಡಿ, ಕಾಶೀನಾಥ, ಶರಣ ಸಾಹಿತ್ಯ ಪರಿಷತ್ತು, ಜಾಗತಿಕ ಲಿಂಗಾಯತ ಮಹಾಸಭಾದ ಅನೇಕ ಮುಖಂಡರುಗಳು ಭಾಗವಹಿಸಿದ್ದರು.