ಗದಗ: ರಾಜ್ಯಾಂದತ ಸರಕಾರ ವೀಕೆಂಡ್ ಕರ್ಫ್ಯೂ ಜಾರಿಗೊಳಿಸಿದ್ದು, ಭಾನುವಾರವೂ ಕೂಡ ಕರ್ಪ್ಯೂ ಎರಡನೇ ದಿನಕ್ಕೆ‌ ಮುಂದುವರೆದಿದೆ. ಆದರೆ, ಜನರು ಅವಶ್ಯಕ‌ ವಸ್ತುಗಳ ಖರೀದಿಗೆಂದು ಕೆಲ ಸಮಯದವರೆಗೆ ಅವಕಾಶ ನೀಡಿದರೆ ಅಲ್ಲಿಯೂ ಸಾಮಾಜಿಕ ಅಂತರ ಮರೆಯುತ್ತಿರುವುದು ಕಂಡು ಬರುತ್ತಿದೆ.

ಭಾನುವಾರ ಬೆಳಿಗ್ಗೆ ಗದಗ ನಗರದ ಗ್ರೀನ್ ಮಾರುಕಟ್ಟೆಯಲ್ಲಿ ತರಕಾರಿ ವ್ಯಾಪಾರ ವಹಿವಾಟಿಗೆ ಅವಕಾಶ ನೀಡಲಾಗಿತ್ತು. ಆದರೆ ಗುಂಪು ಗುಂಪಾಗಿ ಜನ ವ್ಯಾಪಾರ ವಹಿವಾಟು ನಡೆಸುವ ಮೂಲಕ ಬಹುತೆಡಕರು ಸಾಮಾಜಿಕ‌ ಅಂತರ, ಮಾಸ್ಕ, ಸ್ಯಾನಿಟೈಸರನ್ನು ಮರೆತಂತೆ ಕಂಡುಬಂದಿತು. ಹೀಗಾಗಿ ಸ್ಥಳಕ್ಕೆ ಆಗಮಿಸಿದ ಪೊಲೀಸರು ಹಾಗೂ ನಗರಸಭೆ ಅಧಿಕಾರಿಗಳು ತರಕಾರಿ ಮಾರುಕಟ್ಟೆಯನ್ನು ಬಂದ್ ಮಾಡಿಸಿದರು. ಎಷ್ಟೆ ತಿಳಿಹೇಳಿದರು ವ್ಯಾಪಾರಸ್ಥರು ಹಾಗು ಸಾರ್ವಜನಿಕರು ಪೊಲೀಸರ ಮಾತು ಕೇಳದ ಕಾರಣ ಅನಿವಾರ್ಯವಾಗಿ ಲಾಠಿ‌ ಏಟು ನೀಡಿ ವ್ಯಾಪಾರ ವಹಿವಾಟು ಬಂದ್ ಮಾಡಿಸಬೇಕಾಯಿತು.ಉ ಶನಿವಾರವೂ ಬೆಳಿಗ್ಗೆ ಹತ್ತು ಗಂಟೆವೆರೆಗೂ ಅವಶ್ಯಕ‌ ಸಾಮಗ್ರಿಗಳ ಖರಿದಿಗೆ ಅವಕಾಶ ನೀಡಲಾಗಿತ್ತು. ತಮ್ಮ ಆರೋಗ್ಯದ ದೃಷ್ಟಿಯಿಂದ ಸಾರ್ವಜನಿಕರು ಮುಂಜಾಗೃತ ಕ್ರಮಗಳನ್ನು ಅನುಸರಿಸದೇ ಇರುವುದು ಅಧಿಕಾರಿಗಳಲ್ಲಿ ಬೇಸರ‌ ಮೂಡಿಸಿದೆ. ಇನ್ನು ಮತ್ತೊಂದೆಡೆ ವ್ಯಾಪಾರ, ವಹಿವಾಟು ಹಾಗು ದಿನಸಿ ಖರೀದಿಗೆ ಕೊಟ್ಟ ಸಮಯಕ್ಕೂ ಮೊದಲೇ ಬಂದ್ ಮಾಡಿಸಿದರೆ ನಮ್ಮ ಉಪಜೀವನ ಹೇಗೆ? ಇನ್ನು ವ್ಯಾಪಾರದಿಂದಲೇ ಜೀವನ ನಿರ್ವಹಣೆ ಮಾಡುವ ನಮ್ಮ ಬದುಕು ಹೇಗೆ? ಎನ್ನುವ ಅಸಮಾಧಾನ ವ್ಯಾಪಾರಿಗಳು ಹಾಗು ಸಾರ್ವಜನಿಕರಿಂದ ಕೇಳಿ ಬಂದಿತು.

Leave a Reply

Your email address will not be published. Required fields are marked *

You May Also Like

ಶೈಕ್ಷಣಿಕ ವರ್ಷ ಯಾವಾಗ ಅಂತಾ ಸೂಕ್ತ ತೀರ್ಮಾನ

ಮುಂದಿನ ಶೈಕ್ಷಣಿಕ ವರ್ಷದ ಅವಧಿ ಎಷ್ಟಿರಬೇಕು ಎಂಬ ಕುರಿತು ತಜ್ಞರು ಮತ್ತು ಇಲಾಖಾ ಅಧಿಕಾರಿಗಳ ಸಭೆ ಕರೆದು ಸೂಕ್ತ ತೀರ್ಮಾನದ ಬಗ್ಗೆ ಶಿಕ್ಷಣ ಇಲಾಖೆ ಚಿಂತನೆ ನಡೆಸಿದೆ.

ಆಯಾ ರಾಜ್ಯಗಳ ಭಾಷೆಯಲ್ಲಿ ನೇಮಕಾತಿ ಪರೀಕ್ಷೆ ನಡೆಸಲು ಕಪ್ರವೇ: ಮನವಿ

ಕೇಂದ್ರ ಸರ್ಕಾರ ವಿವಿಧ ಹುದ್ದೆಗಳಿಗೆ ನಡೆಸುವ ನೇಮಕಾತಿ ಪರೀಕ್ಷೆಗಳನ್ನು ಆಯಾ ರಾಜ್ಯದ ಮಾತೃ ಭಾಷೆಯಲ್ಲಿ ನಡೆಸಬೇಕೆಂದು ಒತ್ತಾಯಿಸಿ ಕರ್ನಾಟಕ ಪ್ರಜಾಪರ ವೇದಿಕೆಯ ತಾಲೂಕು ಘಟಕದ ವತಿಯಿಂದ ತಹಶೀಲ್ದಾರರ ಮೂಲಕ ಪ್ರಧಾನಮಂತ್ರಿ ಮೋದಿಯವರಿಗೆ ಶನಿವಾರ ಮನವಿ ಸಲ್ಲಿಸಲಾಯಿತು.

ವಾಯವ್ಯ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನೌಕರರ ಗೃಹ ನಿರ್ಮಾಣ ಸಹಕಾರ ಸಂಘ ನಿಯಮಿತ ಗದಗ ಚುನಾವಣೆ-2022 ಜಯಗಳಿಸಿದ ಅಭ್ಯರ್ಥಿಗಳು

ಉತ್ತರಪ್ರಭ ಸುದ್ದಿಗದಗ: ವಾಯವ್ಯ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನೌಕರರ ಗೃಹ ನಿರ್ಮಾಣ ಸಹಕಾರ ಸಂಘ…

ನೌಕರರಿಗೆ ಸಂಬಳ ಕೊಡಲು ಸರ್ಕಾರದ ಬಳಿ ಹಣವಿಲ್ಲ: ಸಿದ್ದರಾಮಯ್ಯ

ಕೊಪ್ಪಳ: ಸಚಿವ ಸೋಮಣ್ಣ ಅವರ ಹೇಳಿಕೆ ಆರ್ಥಿಕತೆಯ ಬಗ್ಗೆ ಅವರಿಗಿರುವ ಅಜ್ಞಾನವನ್ನು ತೋರಿಸುತ್ತದೆ. ನಮ್ಮ ಸರ್ಕಾರದ ಅವಧಿಯಲ್ಲಿ ಆರ್ಥಿಕ ಶಿಸ್ತಿನಲ್ಲಿ ರಾಜ್ಯ ಮೊದಲ ಸ್ಥಾನದಲ್ಲಿತ್ತು. ಈಗ ಸರ್ಕಾರಿ ನೌಕರರಿಗೆ ಸಂಬಳ ಕೊಡಲು ಸರ್ಕಾರದ ಬಳಿ ಹಣವಿಲ್ಲ. ರಾಜ್ಯ ಮಾತ್ರವಲ್ಲ ಇಡೀ ದೇಶವೇ ಆರ್ಥಿಕವಾಗಿ ದಿವಾಳಿಯಾಗಿದೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದ್ದಾರೆ.