ಗದಗ ತರಕಾರಿ ಮಾರುಕಟ್ಟೆಯಲ್ಲಿ ಜನಜಂಗುಳಿ: ಪೊಲೀಸರಿಂದ ಲಾಠಿ ರುಚಿ

ಗದಗ: ರಾಜ್ಯಾಂದತ ಸರಕಾರ ವೀಕೆಂಡ್ ಕರ್ಫ್ಯೂ ಜಾರಿಗೊಳಿಸಿದ್ದು, ಭಾನುವಾರವೂ ಕೂಡ ಕರ್ಪ್ಯೂ ಎರಡನೇ ದಿನಕ್ಕೆ‌ ಮುಂದುವರೆದಿದೆ. ಆದರೆ, ಜನರು ಅವಶ್ಯಕ‌ ವಸ್ತುಗಳ ಖರೀದಿಗೆಂದು ಕೆಲ ಸಮಯದವರೆಗೆ ಅವಕಾಶ ನೀಡಿದರೆ ಅಲ್ಲಿಯೂ ಸಾಮಾಜಿಕ ಅಂತರ ಮರೆಯುತ್ತಿರುವುದು ಕಂಡು ಬರುತ್ತಿದೆ.

ಭಾನುವಾರ ಬೆಳಿಗ್ಗೆ ಗದಗ ನಗರದ ಗ್ರೀನ್ ಮಾರುಕಟ್ಟೆಯಲ್ಲಿ ತರಕಾರಿ ವ್ಯಾಪಾರ ವಹಿವಾಟಿಗೆ ಅವಕಾಶ ನೀಡಲಾಗಿತ್ತು. ಆದರೆ ಗುಂಪು ಗುಂಪಾಗಿ ಜನ ವ್ಯಾಪಾರ ವಹಿವಾಟು ನಡೆಸುವ ಮೂಲಕ ಬಹುತೆಡಕರು ಸಾಮಾಜಿಕ‌ ಅಂತರ, ಮಾಸ್ಕ, ಸ್ಯಾನಿಟೈಸರನ್ನು ಮರೆತಂತೆ ಕಂಡುಬಂದಿತು. ಹೀಗಾಗಿ ಸ್ಥಳಕ್ಕೆ ಆಗಮಿಸಿದ ಪೊಲೀಸರು ಹಾಗೂ ನಗರಸಭೆ ಅಧಿಕಾರಿಗಳು ತರಕಾರಿ ಮಾರುಕಟ್ಟೆಯನ್ನು ಬಂದ್ ಮಾಡಿಸಿದರು. ಎಷ್ಟೆ ತಿಳಿಹೇಳಿದರು ವ್ಯಾಪಾರಸ್ಥರು ಹಾಗು ಸಾರ್ವಜನಿಕರು ಪೊಲೀಸರ ಮಾತು ಕೇಳದ ಕಾರಣ ಅನಿವಾರ್ಯವಾಗಿ ಲಾಠಿ‌ ಏಟು ನೀಡಿ ವ್ಯಾಪಾರ ವಹಿವಾಟು ಬಂದ್ ಮಾಡಿಸಬೇಕಾಯಿತು.ಉ ಶನಿವಾರವೂ ಬೆಳಿಗ್ಗೆ ಹತ್ತು ಗಂಟೆವೆರೆಗೂ ಅವಶ್ಯಕ‌ ಸಾಮಗ್ರಿಗಳ ಖರಿದಿಗೆ ಅವಕಾಶ ನೀಡಲಾಗಿತ್ತು. ತಮ್ಮ ಆರೋಗ್ಯದ ದೃಷ್ಟಿಯಿಂದ ಸಾರ್ವಜನಿಕರು ಮುಂಜಾಗೃತ ಕ್ರಮಗಳನ್ನು ಅನುಸರಿಸದೇ ಇರುವುದು ಅಧಿಕಾರಿಗಳಲ್ಲಿ ಬೇಸರ‌ ಮೂಡಿಸಿದೆ. ಇನ್ನು ಮತ್ತೊಂದೆಡೆ ವ್ಯಾಪಾರ, ವಹಿವಾಟು ಹಾಗು ದಿನಸಿ ಖರೀದಿಗೆ ಕೊಟ್ಟ ಸಮಯಕ್ಕೂ ಮೊದಲೇ ಬಂದ್ ಮಾಡಿಸಿದರೆ ನಮ್ಮ ಉಪಜೀವನ ಹೇಗೆ? ಇನ್ನು ವ್ಯಾಪಾರದಿಂದಲೇ ಜೀವನ ನಿರ್ವಹಣೆ ಮಾಡುವ ನಮ್ಮ ಬದುಕು ಹೇಗೆ? ಎನ್ನುವ ಅಸಮಾಧಾನ ವ್ಯಾಪಾರಿಗಳು ಹಾಗು ಸಾರ್ವಜನಿಕರಿಂದ ಕೇಳಿ ಬಂದಿತು.

Exit mobile version