ಶಿರಹಟ್ಟಿ: ತಾಲೂಕಿನ ಕಡಕೋಳ ಗ್ರಾಮದಲ್ಲಿ ಶನಿವಾರ ಸುರಿದ ಭಾರಿ ಮಳೆಗೆ ಸಿಡಿಲು ಬಡಿದು ಮೂವರು ಸಾವನ್ನಪ್ಪಿದ ಧಾರುಣ ಘಟನೆ ಜರುಗಿದೆ.
ಘಟನೆಯ ವಿವರ: ಕಡಕೋಳ ಗ್ರಾಮದ ನಿವಾಸಿಗಳಾದ ಕುಮಾರ(24), ಶರಣಪ್ಪ (38) ಮಾರುತಿ(50) ಹೊಲ ನೋಡಿ ಬರಲು ಹೋಗಿದ್ದು, ಮಳೆ, ಗಾಳಿ ಪ್ರಾರಂಭವಾಗಿದ್ದರಿಂದ ಅಲ್ಲಿಯೇ ಗಿಡದ ಮರೆಯಲ್ಲಿ ನಿಂತುಕೊಂಡಿದ್ದಾರೆ. ದುರಾದೃಷ್ಟವಶಾತ್ ಸಿಡಿಲು ಬಡಿದು ಈ ಮೂವರು ಸಾವನ್ನಪ್ಪಿದ್ದಾರೆ. ಅವರೊಂದಿಗಿದ್ದ ಪರಶುರಾಮ(22), ಪ್ರವೀಣ (30), ಲಕ್ಷ್ಮಣ್ಣ(30) ದುರಗಪ್ಪ(35) ಎಂಬುವವರು ತಿವೃ ಗಾಯಗೊಂಡಿದ್ದು, ಗಾಯಳುಗಳನ್ನು ಗದಗ ಜಿಮ್ಸ್ ಗೆ ದಾಖಲಿಸಿಲಾಗಿದೆ.

ಈ ಘಟನೆ ತಿಳಿದ ತಕ್ಷಣ ಶಾಸಕ ರಾಮಣ್ಣ ಲಮಾಣಿ ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲಿಸಿ ನಂತರ ಮೃತ ಕುಟುಂಬಕ್ಕೆ ಪರಿಹಾರ ನೀಡುವ ಬಗ್ಗೆ ತಹಶೀಲ್ದಾರ ಅಧಿಕಾರಿಗೆ ಸೂಚಿಸಿದರು.

1 comment
  1. ಪ್ರತಿಕ್ಷಣದ ಸುದ್ದಿ ತಕ್ಷಣ. ನಿಖರ ಸುದ್ದಿಗೆ ಇನ್ನೊಂದು ಹೆಸರೇ ಉತ್ತರ ಪ್ರಭ.

Leave a Reply

Your email address will not be published. Required fields are marked *

You May Also Like

ರೋಣ ತಾಲೂಕು ಗ್ರಾಪಂ ಅಧ್ಯಕ್ಷ- ಉಪಾಧ್ಯಕ್ಷ ಮೀಸಲಾತಿ ಪ್ರಕಟ

ರೋಣ: ತಾಲೂಕಿನ 24 ಗ್ರಾಮ ಪಂಚಾಯತಿಗಳ ಅಧ್ಯಕ್ಷ ಉಪಾಧ್ಯಕ್ಷರ ಮೀಸಲಾತಿ ಆಯ್ಕೆ ಪ್ರಕ್ರಿಯೆ ವೀರಭದ್ರೇಶ್ವರ ಕಲ್ಯಾಣ…

ಕೇಲೂರ ಘಟನೆ: ಸಂತ್ರಸ್ಥೆಯ ಆರೋಗ್ಯ ವಿಚಾರಿಸಿದ ಜಿಲ್ಲಾಧಿಕಾರಿಗಳು

ಗದಗ: ಮುಂಡರಗಿ ತಾಲೂಕಿನ ಕೇಲೂರು ಗ್ರಾಮದಲ್ಲಿ ಅರಣ್ಯ ಇಲಾಖೆಯಿಂದ ಅರಣ್ಯ ಭೂಮಿ ಒತ್ತುವರಿ ತೆರವು ಕರ‍್ಯಾಚರಣೆ…