ಶಿರಹಟ್ಟಿ : ಕೊರೊನಾ ಹಿನ್ನೆಲೆಯಲ್ಲಿ ಕೈಗೊಳ್ಳಲಾದ ವೀಕೆಂಡ್ ಕಫ್ಯೂ೯ಗೆ ಶನಿವಾರ ಪಟ್ಟಣ ಸಂಪೂರ್ಣ ಸ್ಥಬ್ಧವಾದ ಚಿತ್ರಣ ಕಂಡು ಬಂದಿತು.
ವ್ಯಾಪಾರ ವಹಿವಾಟು, ಬಸ್ ಸಂಚಾರ ಸೇರಸಿಬ್ಬಂದಿ ಕಾರ್ಯಚಟುವಟಿಕೆಗಳು ಸಂಪೂರ್ಣ ಬಂದ್ ಆಗಿವೆ. ಜನ ಜಾಗೃತಿಗೊಂಡಿದ್ದಾರೋ ಇಲ್ಲವೊ ಅಥವಾ ಜನ ಕರ್ಪ್ಯೂಗೆ ಬೆಂಬಲ ನೀಡುತ್ತಿದ್ದಾರೋ ಒಟ್ಟಿನಲ್ಲಿ ವೀಕೆಂಡ್ ಕರ್ಪ್ಯೂಗೆ ಶಿರಹಟ್ಟಿ ಸಂಪೂರ್ಣ ಸಾಥ್ ನೀಡಲಾಗುತ್ತಿದೆ ಎಂದು ಹೇಳಬಹುದು.
ಶುಕ್ರವಾರ ರಾತ್ರಿ 9 ಗಂಟೆಯಿಂದಲೇ ಪ್ರಾರಂಭವಾದ ವೀಕೆಂಡ್ ಕಫ್ಯೂ೯ ಹಿನ್ನೆಲೆಯಲ್ಲಿ ಪಟ್ಟಣದ ಬಸವೇಶ್ವರ ವೃತ್ತ, ಸಂಗೊಳ್ಳಿ ರಾಯಣ್ಣ ವೃತ್ತ, ಗಾಂಧಿ ವೃತ್ತಗಳಲ್ಲಿದ್ದ, ಕಿರಾಣಿ ಅಂಗಡಿಗಳಿಗೆ ಅವಕಾಶವಿದ್ದರೂ ಕೂಡಾ ಸ್ವಯಂ ಪ್ರೇರಣೆಯಿಂದ ವರ್ತಕರು ಸಂಪೂರ್ಣ ಬಂದ್ ಮಾಡಿದ್ದಾರೆ. ವ್ಯಾಪಾರ ವಹಿವಾಟು ಇಲ್ಲದೇ ಪಟ್ಟಣ ಖಾಲಿ ಖಾಲಿ ಎನಿಸುತ್ತಿದೆ.
ದಿನದಿಂದ ದಿನಕ್ಕೆ ಕೊರೋನಾ ಸೋಂಕು ಸ್ಪೋಟವಾಗುತ್ತಿರುವ ಹಿನ್ನಲೆಯಲ್ಲಿ ಕಂದಾಯ ಇಲಾಖೆ, ಪೊಲೀಸ್ ಇಲಾಖೆ ಹಾಗೂ ಪಟ್ಟಣ ಪಂಚಾಯಿತಿ ವತಿಯಿಂದ ಆರೋಗ್ಯ ಜಾಗೃತಿಗಾಗಿ ಸಾಕಷ್ಟು ಮನವಿ ಮಾಡುತ್ತಿದ್ದಾರೆ. ಪಟ್ಟಣದ ಎಲ್ಲಾ ವ್ಯಾಪಾರ ಮುಗ್ಗಟ್ಟು ಬಂದ್ ಆಗಿದ್ದು, ಹಾಲು ಹಣ್ಣು, ಔಷಧಿ ಮಾರಾಟ ಸೇರಿದಂತೆ ಅಗತ್ಯ ವಸ್ತುಗಳ ಮಾರಾಟಕ್ಕೆ ಮಾತ್ರ ಅನುಮತಿ ನೀಡಲಾಗಿದೆ.
ಪಟ್ಟಣದ ಪ್ರಮುಖ ಸ್ಥಳಗಳಲ್ಲಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದ್ದು, ಬಸವೇಶ್ವರ ವೃತ್ತ, ನೆಹರು ವೃತ್ತ, ಗಾಂಧಿ ವೃತ್ತ ಸೇರಿದಂತೆ ಅನೇಕ ಕಡೆಗಳಲ್ಲಿ ಪೌರಕಾರ್ಮಿಕರು ಹಾಗೂ ಪೊಲೀಸ್ ಸಿಬ್ಬಂದಿಯವರು ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಒಟ್ಟಿನಲ್ಲಿ ವೀಕೆಂಡ ಕರ್ಫ್ಯೂಗೆ ಪಟ್ಟಣ ಜನತೆಯಿಂದ ಉತ್ತಮ ಸ್ಪಂದನೆ ದೊರೆತ್ತಿದ್ದು, ಸಾರ್ವಜನಿಕರು ಇದೆ ರೀತಿ ಬೆಂಬಲ ನೀಡುವುದರ ಮೂಲಕ ಕೊರೊನಾ ಹೊಡೆದೊಡಿಸಲು ಪಣ ಕೊಡಬೇಕೆಂಬುದು ಉತ್ತರಪ್ರಭದ ಆಶಯ.