ಗದಗ: ಲಿಂಗಾಯತ ಪ್ರಗತಿಶೀಲ ಸಂಘ, ಆಶ್ರಯದಲ್ಲಿಂದು ಎಡೆಯೂರು ಜಗದ್ಗುರು ತೋಂಟದಾರ್ಯ ಮಠದಲ್ಲಿ ಜರುಗುವ ಶಿವಾನುಭವದಲ್ಲಿ ವಿಶ್ವದ ಪ್ರಥಮ ಮಹಿಳಾ ಜಗದ್ಗುರು ಡಾ. ಮಾತೆಮಹಾದೇವಿ ಅವರು 2ನೇ ಸ್ಮರಣೋತ್ಸವ ಹಾಗೂ ಪುಸ್ತಕ ಬಿಡುಗಡೆ ಕಾರ್ಯಕ್ರಮ ಆಯೋಜಿಸಲಾಗಿದೆ.

ಕಾರ್ಯಕ್ರಮದ ಸಾನ್ನಿಧ್ಯವನ್ನು ಜ.ಡಾ. ತೋಂಟದ ಸಿದ್ಧರಾಮ ಮಹಾಸ್ವಾಮಿಗಳು ವಹಿಸುವರು. ಮಾತೆ ಮಹಾದೇವಿ ಅವರ ಕುರಿತು ರೇಲ್ವೆ ಇಲಾಖೆ ಹಿರಿಯ ಅಭಿಯಂತರ ಶ್ರೀಸಚ್ಚಿದಾನಂದ ಚಟನಳ್ಳಿ ಮಾತನಾಡುವರು.

ಶಿವಣ್ಣ ಶರಣರು, ಗುಡಗುಂಟಿ ಇವರು ಸಂಪಾದಿಸಿರುವ ಶರಣ ಧರ್ಮ ಪ್ರವಚನ ರೂಪು-ರೇಷೆ ಗ್ರಂಥವನ್ನು ಪೂಜ್ಯರು ಲೋಕಾರ್ಪಣೆಗೊಳಿಸುವರು.

ಧರ್ಮಗ್ರಂಥ ಪಠಣವನ್ನು ಮಂಗಳಾ ಬಿ. ಕಾಮಣ್ಣವರ, ವಚನ ಚಿಂತನವನ್ನು ಚನ್ನಬಸವಣ್ಣ ಕಾಮಣ್ಣವರ ನೆರವೇರಿಸುವರು. ಸಂಗೀತ ಕಾರ್ಯಕ್ರಮವನ್ನು ಕೊಳಲು ವಾದಕ ಪಿ. ಕಾರ್ತಿಕ ಭಟ್ ಹಾಗೂ ತಬಲಾ ವಾದಕ ಶ್ರೀವತ್ಸ ಶರ್ಮಾ ನಡೆಸಿಕೊಡುವರು.

ದಾಸೋಹ ಸೇವೆಯನ್ನ ಗದಗ-ಬೆಟಗೇರಿ ಬಸವದಳದ ಬಸವಣ್ಣೆಪ್ಪ ವಿ. ಕಾಮಣ್ಣವರ ಹಾಗೂ ಲಿಂ. ಅನಸಮ್ಮ ಜಿ. ಗಾಣಗೇರಿ ಇವರ ಸ್ಮರಣಾರ್ಥ ಷಣ್ಮುಖಪ್ಪ ನೀಲಕಂಠಪ್ಪ ಕುರ್ನಳ್ಳಿ ವಹಿಸಿಕೊಂಡಿದ್ದಾರೆ ಎಂದು ಸಂಘದ ಅಧ್ಯಕ್ಷ ಎಂ.ಸಿ.ಐಲಿ ಹಾಗೂ ಶಿವಾನುಭವ ಸಮಿತಿ ಚೇರಮನ್ ವಿವೇಕಾನಂದಗೌಡ ಪಾಟೀಲ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Leave a Reply

Your email address will not be published. Required fields are marked *

You May Also Like

ಹೂವು ಮಾರಿ ಬದುಕು ಕಟ್ಟಿಕೊಂಡವನ ಹೂ ಮನಸ್ಸು

ರೋಣ: ಕೊಟ್ಟಿದ್ದು ತನಗೆ, ಬಚ್ಚಿಟ್ಟದ್ದು ಪರರಿಗೆ, ಕೊಟ್ಟು ಕೆಟ್ಟಿತೆನಬೇಡ, ಕೊಟ್ಟು ಕುದಿಯಲು ಬೇಡ, ಕೊಟ್ಟು ಹಂಗಿಸಬೇಡ… ಹೀಗೆ ದಾನದ ಬಗ್ಗೆ ೧೨ನೇ ಶತಮಾನದಲ್ಲಿ ಶರಣರು ಸಾರಿ ಹೇಳಿದ್ದಾರೆ. ಆದರೆ ಪಟ್ಟಣದ ವ್ಯಕ್ತಿಯೊಬ್ಬರು ದುಡಿದ ಬೆವರಿನ ಫಲದಲ್ಲಿ ಸಂಕಷ್ಟದಲ್ಲಿರುವವರಿಗೆ, ನೊಂದವರಿಗೆ ನೆರವು ನೀಡಿ, ಶರಣರ ನಿಜ ನಡೆಯನ್ನು ಪಾಲಿಸುವ ಮೂಲಕ ಮಾದರಿಯಾಗಿದ್ದಾರೆ.

ನಗರ ಸಭೆ ಚುನಾವಣೆ: 32ನೇ ವಾರ್ಡ ಬಿಜೆಪಿ ಪಾಲಿಗೆ

ನಗರ ಸಭೆ ಚುನಾವಣೆ: 32ನೇ ವಾರ್ಡ ಬಿಜೆಪಿ ಪಾಲಿಗೆ ಗದಗ ಬೇಟಗೇರಿ:ನಗರ ಸಭೆ 31ನೇ ವಾರ್ಡನ…

ಸಿಡಿ ಪ್ರಕರಣ ನ್ಯಾಯಾಲಯಕ್ಕೆ ಮೊರೆ ಹೋದ ಆರು ಸಚಿವರು : ಇಂದು ಅರ್ಜಿ ವಿಚಾರಣೆ

ರಾಜ್ಯದಲ್ಲಿ ರಮೇಶ್ ಜಾರಕಿಹೊಳಿ ರಾಸಲೀಲೆ ಸಿಡಿ ಹೊರಬೀಳುತ್ತಿದ್ದಂತೆ ರಾಜ್ಯದ 6 ಸಚಿವರು ನ್ಯಾಯಾಲಯದ ಮೊರೆ ಹೋಗಿದ್ದು ಇಂದು ಇನ್ನೂ 6 ಸಚಿವರು ನ್ಯಾಯಾಲಯದ ಮೊರೆ ಹೋಗಲಿದ್ದಾರೆ ಎಂದು ಸಚಿವ ಎಸ್.ಟಿ.ಸೋಮಶೇಖರ ತಿಳಿಸಿದ್ದಾರೆ.

ಸಂಭವನೀಯ ಪ್ರವಾಹ ಹತೋಟೆಗೆ ಆಗತ್ಯ ಕ್ರಮ-ಅಧಿಕಾರಿಗಳಿಗೆ ಸೂಚನೆ

ಆಲಮಟ್ಟಿ: ಕೃಷ್ಣಾ ನದಿ ತೀರದ ಸಂಭವನೀಯ ಪ್ರವಾಹಕ್ಕೊಳಗಾಗುವ ಪ್ರದೇಶದಲ್ಲಿ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಬೇಕು.ಆ ನಿಟ್ಟಿನಲ್ಲಿ ಸಂಬಂಧಿಸಿದ…