ಬೆಂಗಳೂರು: ಕಮರ್ಷಿಯಲ್ ಸ್ಟ್ರೀಟ್ ಪೊಲೀಸರು ಕಾರ್ಯಾಚರಣೆ ನಡೆಸಿ ವಿದೇಶಿ ಪ್ರಜೆ ಸೇರಿ ಇಬ್ಬರನ್ನು ಬಂಧಿಸಿ 35 ಲಕ್ಷ ರೂ. ಮೌಲ್ಯದ 350 ಗ್ರಾಂ ಎಂಡಿಎಂಎ ಮಾದಕ ವಸ್ತುವನ್ನು ವಶಪಡಿಸಿಕೊಂಡಿದ್ದಾರೆ. ನೈಜೀರಿಯಾ ದೇಶದ ಒಕೋರೋ ಕ್ರಿಸ್ಟೇನ್ ಐಫಿನಿ (36) ಮತ್ತು ಬೆಂಗಳೂರಿನ ಟಿಸಿ ಪಾಳ್ಯದ ಸನ್‌ಶೈನ್ ಲೇಔಟ್ ನಿವಾಸಿ ರೋಹಿತ್ ಕ್ರಿಸ್ಟೋಫರ್ (28) ಬಂಧಿತರು.

ನಗರದಲ್ಲಿ ಡ್ರಗ್ಸ್ ಮಾರಾಟ ಮಾಡುವ ಪೆಡ್ಲರ್‌ಗಳನ್ನು ಪತ್ತೆಹಚ್ಚಲು ಹಿರಿಯ ಪೊಲೀಸ್ ಅಧಿಕಾರಿಗಳು ನೀಡಿದ ಸೂಚನೆ ಮೇರೆಗೆ ಕಮರ್ಷಿಯಲ್ ಸ್ಟ್ರೀಟ್ ಠಾಣೆ ಪೊಲೀಸರು ತಂಡಗಳನ್ನು ಮಾಡಿಕೊಂಡು ಡ್ರಗ್ಸ್ ಪೆಡ್ಲರ್ ಪತ್ತೆ ಕಾರ್ಯದಲ್ಲಿ ತೊಡಗಿದ್ದರು. ಕಬ್ಬನ್‌ ರಸ್ತೆಯ ಯೂನಿಯನ್ ಸ್ಟ್ರೀಟ್ ಜಂಕ್ಷನ್ ಬಳಿ ವಿದೇಶಿ ಪ್ರಜೆ ಸೇರಿ ಇಬ್ಬರು ಮಾದಕ ವಸ್ತುವನ್ನು ಸ್ಕೂಟರ್‌ನಲ್ಲಿಟ್ಟುಕೊಂಡು ಗಿರಾಕಿಗಳಿಗಾಗಿ ಕಾಯುತ್ತಿದ್ದರು.

ಈ ಬಗ್ಗೆ ಮಾಹಿತಿ ಸಂಗ್ರಹಿಸಿದ ಪೊಲೀಸರು ತಕ್ಷಣ ಸ್ಥಳಕ್ಕೆ ತೆರಳಿ ನೈಜೀರಿಯಾ ಪ್ರಜೆ ಸೇರಿ ಸ್ಥಳೀಯನೊಬ್ಬನನ್ನು ಬಂಧಿಸಿದ್ದಾರೆ. ಇವರಿಂದ 35.20 ಲಕ್ಷ ರೂ. ಮೌಲ್ಯದ 350 ಗ್ರಾಂ ಎಂಡಿಎಂಎ ಮಾದಕ ವಸ್ತು, 2 ಮೊಬೈಲ್, 10 ಖಾಲಿ ಚಿಕ್ಕ ಪ್ಲಾಸ್ಟಿಕ್ ಕವರ್‌ಗಳು, ಸ್ಕೂಟರ್, 1200 ನಗದು, ನಕಲಿ ವೀಸಾ, ಮನಿ ಟ್ರಾನ್ಸ್ಫರ್ ದಾಖಲಾತಿಗಳನ್ನು ವಶಪಡಿಸಿಕೊಂಡು ಹೆಚ್ಚಿನ ತನಿಖೆಗಾಗಿ ಆರೋಪಿಗಳನ್ನು ವಿಚಾರಣೆಗೊಳಪಡಿಸಲಾಗಿದೆ.

ವೀಸಾ, ಪಾಸ್‌ಪೋರ್ಟ್ ದುರ್ಬಳಕೆ: ನೈಜೀರಿಯಾ ದೇಶದ ಪ್ರಜೆ ಒಕಾರೋ 2018ನೇ ಸಾಲಿನಲ್ಲಿ ಮೂರು ತಿಂಗಳ ಅವಧಿಗೆ ಟೂರಿಸ್ಟ್ ವೀಸಾದ ಮೇಲೆ ಭಾರತಕ್ಕೆ ಬಂದು ವೀಸಾ ಅವಧಿ ಮುಗಿದಿದ್ದರೂ ವಾಪಸ್ ತನ್ನ ದೇಶಕ್ಕೆ ಹೋಗದೆ ಅನಧಿಕೃತವಾಗಿ ಬೆಂಗಳೂರಿನಲ್ಲೇ ನೆಲೆಸಿದ್ದನು. ಸುಲಭವಾಗಿ ಹಣ ಗಳಿಸುವ ಉದ್ದೇಶದಿಂದ ತನ್ನ ದೇಶದ ಚಿಬುಕಿ ಎಂಬಾತನಿಂದ ಎಂಡಿಎಂಎ ಎಂಬ ಮಾದಕ ವಸ್ತುವನ್ನು ಕೊರಿಯರ್ ಮುಖಾಂತರ ತರಿಸಿಕೊಂಡು ನಗರದ ವಿವಿಧ ಕಡೆಗಳಲ್ಲಿ ಮಾರಾಟ ಮಾಡಿ ಬಂದ ಹಣವನ್ನು ಯು ಕ್ಯಾಷ್ ಮನಿ ಟ್ರಾನ್ಸ್ಫರ್ ಸರ್ವೀಸ್ ಮುಖಾಂತರ ಆತನ ಬ್ಯಾಂಕ್ ಖಾತೆಗಳಿಗೆ ಹಣ ವರ್ಗಾವಣೆ ಮಾಡಿರುವುದು ವಿಚಾರಣೆಯಿಂದ ತಿಳಿದುಬಂದಿದೆ.

ಬೆಂಗಳೂರಿನ ಟಿಸಿ ಪಾಳ್ಯದಲ್ಲಿರುವ ಬೆಂಗಳೂರು ಶೂಟರ್ಸ್ ಎಂಬ ಹೆಸರಿನ ಫುಟ್‌ಬಾಲ್ ಅಕಾಡೆಮಿಯಲ್ಲಿ ಫುಟ್‌ಬಾಲ್ ಆಡುತ್ತಿದ್ದ ವೇಳೆ ರೋಹಿತ್ ಕ್ರಿಸ್ಟೋಫರ್‌ನನ್ನು ಪರಿಚಯಿಸಿಕೊಂಡು ಆತನ ಮುಖಾಂತರ ಕೆಆರ್ ಪುರ, ರಾಮಮೂರ್ತಿನಗರ ಮುಂತಾದ ಕಡೆಗಳಲ್ಲಿ ಆಫ್ರಿಕಾ ಮೂಲದ ವ್ಯಕ್ತಿಗಳಿಗೆ ಹಾಗೂ ಸಾರ್ವಜನಿಕರಿಗೆ, ಕಾಲೇಜು ವಿದ್ಯಾರ್ಥಿಗಳಿಗೆ ಮಾದಕ ವಸ್ತು ಮಾರಾಟ ಮಾಡುವ ದಂಧೆಯಲ್ಲಿ ತೊಡಗಿರುವುದು ತನಿಖೆಯಿಂದ ಬೆಳಕಿಗೆ ಬಂದಿದೆ.

ಆರೋಪಿಗಳ ವಿರುದ್ಧ ಕಮರ್ಷಿಯಲ್ ಸ್ಟ್ರೀಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆರೋಪಿಯೊಂದಿಗೆ ನಿಕಟ ಸಂಪರ್ಕ ಹೊಂದಿದ್ದ ವ್ಯಕ್ತಿಗಳ ವಿಚಾರಣೆಯನ್ನು ವಿಶೇಷ ತಂಡ ಕೈಗೊಂಡಿದೆ. ಮನೆ ಮಾಲೀಕರ ವಿಚಾರಣೆ: ನೈಜೀರಿಯಾ ದೇಶದ ಪ್ರಜೆ ಒಕಾರೋ ವಾಸವಾಗಿದ್ದ ಮನೆಯನ್ನು ವಿಶೇಷ ತಂಡ ಶೋಧ ನಡೆಸಿದ್ದು, ಈತನ ವೀಸಾ ದಾಖಲಾತಿಗಳನ್ನು ಪರಿಶೀಲಿಸದೆ ವಾಸಿಸಲು ಮನೆ ಬಾಡಿಗೆಗೆ ನೀಡಿದ್ದ ಮಾಲೀಕರ ವಿಚಾರಣೆ ಕೈಗೊಂಡಿದ್ದು, ಕಾನೂನು ರೀತಿ ಕ್ರಮ ಕೈಗೊಂಡಿದ್ದಾರೆ.

Leave a Reply

Your email address will not be published. Required fields are marked *

You May Also Like

ಗ್ರಾಮೀಣ ಭಾಗಕ್ಕೂ ಬಂದೇ ಬಿಟ್ಟಿತು ಕೊರೊನಾ!

ಬೆಳಗಾವಿ: ಇಲ್ಲಿಯವರೆಗೂ ನಗರ ಪ್ರದೇಶದ ಜನರ ಆತಂಕಕ್ಕೆ ಕಾರಣವಾಗಿದ್ದ ಕೊರೊನಾ ಮಹಾಮಾರಿ ಸದ್ಯ ಹಳ್ಳಿಗರ ನಿದ್ದೆಗೆಡಿಸಿದೆ.…

ಶಿಘ್ರ ಆರಂಭವಾಗಲಿವೆ ದೇವಸ್ಥಾನಗಳು?

ಮುಂದಿನ ವಾರದಿಂದ ಭಕ್ತರಿಗೆ ದೇವರು ದರ್ಶನ ಕರುಣಿಸುವ ಸಾಧ್ಯತೆ ಇದೆ. ಸಾಮಾಜಿಕ ಅಂತರ, ಮಾಸ್ಕ್ ಬಳಕೆ ಕಡ್ಡಾಯ ಮಾಡಲಾಗುತ್ತಿದ್ದು ತೀರ್ಥ, ಪ್ರಸಾದಗಳಿಗೆ ಬ್ರೇಕ್ ಬೀಳುವ ಸಾದ್ಯತೆ ಇದೆ.

ಕೋವಿಡ್-19 ನಿಯಂತ್ರಣ : ಜಿಲ್ಲೆಯಲ್ಲಿ 2 ವಾರ ಪ್ರತಿಬಂಧಕಾಜ್ಞೆ ಮುಂದುವರಿಕೆ

ಕೋವಿಡ್ -19 ಹರಡದಂತೆ ತಡೆಗಟ್ಟಲು ಮತ್ತು ಸಾರ್ವಜನಿಕರ ಆರೋಗ್ಯದ ಹಿತದೃಷ್ಟಿಯಿಂದ ಮುಂಜಾಗ್ರತಾ ಕ್ರಮವಾಗಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಆದೇಶದನ್ವಯ ಮುಂದಿನ ಎರಡು ವಾರಗಳವರೆಗೆ ನಿಗದಿತ ಸಮಯ ಹೊರತುಪಡಿಸಿ ಉಳಿದ ಸಮಯದಲ್ಲಿ ಸಂಚಾರ ನಿಷೇಧಿಸಿದೆ.

ಅರಣ್ಯ ಇಲಾಖೆ ನಿರ್ಲಕ್ಷ್ಯದಿಂದ ಕಪ್ಪತಗುಡ್ಡಕ್ಕೆ ಬೆಂಕಿ: ಗಿಡ ಮರಗಳು ಸುಟ್ಟು ಭಸ್ಮ

ಉತ್ತರಪ್ರಭ ಸುದ್ದಿಗದಗ: ಗದಗ ಜಿಲ್ಲೆಯಲ್ಲಿರುವ ಕಪ್ಪತ್ತಗುಡ್ಡಕ್ಕೆ ಬೆಂಕಿ ಹಚ್ಚುತ್ತಿರುವುದನ್ನು ಅರಣ್ಯ ತಡೆಯಲು ವಿಫಲವಾಗಿದೆ, ಅರಣ್ಯ ಇಲಾಖೆಯ…