ಮುಂಡರಗಿ: ಚಾಲಕನ ಸಮಯಪ್ರಜ್ಞೆಯಿಂದ ಪ್ರಯಾಣಿಕರು ಪ್ರಾಣಾಪಾಯದಿಂದ ಪಾರಾದ ಘಟನೆ ನಡೆದಿದೆ. ಗದಗ ಜಿಲ್ಲೆ ಮುಂಡರಗಿ ತಾಲೂಕಿನ ಬಾಗೇವಾಡಿ ಗ್ರಾಮದ ಹತ್ತಿರ ಘಟನೆ ನಡೆದಿದೆ.

ಬಸ್ ಬ್ರೆಕ್ ಫೇಲ್ ಆಗಿ ಅಪಘಾತಕ್ಕಿಡಾಗುತ್ತಿದ್ದ ಸಾರಿಗೆ ಸಂಸ್ಥೆಯ ಬಸ್ ಚಾಲಕ ಮುತವರ್ಜಿ ವಹಿಸಿದ್ದರಿಂದ ಪ್ರಯಾಣಿಕರು ಪ್ರಾಣಾಪಾಯದಿಂದ ಪಾರಾದರು.

ಶಿರಹಟ್ಟಿಯಿಂದ ಮುಂಡರಗಿ ಪಟ್ಟಣಕ್ಕೆ ಬರುತ್ತಿದ್ದ ಬಸ್ ಬ್ರೇಕ್ ಫೇಲ್ ಆಗುತ್ತಿದ್ದಂತೆ ಕ್ಷಣಮಾತ್ರದಲ್ಲಿ ಬಸ್ ಚಾಲಕ ಎಚ್ಚೆತ್ತುಕೊಂಡಿದ್ದಾನೆ. ಈ ವೇಳೆ ರಸ್ತೆಗೆ ಹೊಂದಿಕೊಂಡ ಗುಡ್ಡಕ್ಕೆ ಬಸ್ ಏರಿಸಿ ಪ್ರಯಾಣಿಕರ ಪ್ರಾಣ ರಕ್ಷಣೆ ಮಾಡಿದ್ದಾನೆ. ಈ ಮೂಲಕ ಪ್ರಯಾಣಿಕರಿಗೆ ಯಾವುದೇ ಹಾನಿಯಾಗದಂತೆ ಬಸ್ ನಿಯಂತ್ರಣಕ್ಕೆ ತರುವಲ್ಲಿ ಯಶಸ್ವಿಯಾಗಿದ್ದಾನೆ. ಇದರಿಂದ ಚಾಲಕನ ಈ ಕಾರ್ಯ ಪ್ರಯಾಣಿಕರ ಮೆಚ್ಚುಗೆಗೆ ಪಾತ್ರವಾಯಿತು.

Leave a Reply

Your email address will not be published. Required fields are marked *

You May Also Like

ಅರಣ್ಯ ಇಲಾಖೆಯಿಂದ ಸಹಸ್ರಾರು ಸಸಿ ನೆಡುವ ಕಾರ್ಯ ಜೋರು…! ಸಸ್ಯ ಪ್ರೇಮದಲ್ಲಿದೆ ನಮ್ಮೆಲ್ಲರ ಹಿತ

ಉತ್ತರಪ್ರಭ ಸುದ್ದಿ ಆಲಮಟ್ಟಿ: ಮನುಷ್ಯನಿಗೆ ಉಸಿರು ಎಷ್ಟು ಮುಖ್ಯವೋ ಜೀವನ ಚೈತ್ರದ ನೆಮ್ಮದಿಗೆ ಸಸ್ಯ ಪ್ರೇಮ…

ರಾಜ್ಯದ ಉದ್ದಗಲಕ್ಕೂ ಶುರುವಾದ ಬಂದ್ ಬಿಸಿ!

ಬೆಂಗಳೂರು : ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ರೈತ ವಿರೋಧಿ ನೀತಿ ತಾಳುತ್ತಿವೆ ಎಂದು ಆರೋಪಿಸಿ…

ರೈತ ಕಷ್ಟಗಳನ್ನು ಮೆಟ್ಟಿ ನಿಲ್ಲಬೇಕು : ಕವಿತಾ ಮಿಶ್ರಾ

ಕೃಷಿ ಕ್ಷೇತ್ರ ನಶಿಸಿ ಹೊಗುತ್ತಿದೆ. ಇಂದು ರೈತರು ತಲೆ ಮೇಲೆ ಸಾಲ ಹೊತ್ತು ಬದುಕು ಎದುರಿಸುವುದು ಕಷ್ಟಸಾಧ್ಯವಾಗಿದೆ. ಇದರಿಂದಾಗಿ ಆರ್ಥಿಕ ಸಂಕಷ್ಟ ಎದುರಿಸಲಾಗದೇ ಆತ್ಮಹತ್ಯೆಯ ಹಾದಿ ಹಿಡಿಯುತ್ತಿದ್ದಾರೆ ಎಂದು ಕೃಷಿಕ ಮಹಿಳೆ ಕವಿತಾ ಮಿಶ್ರಾ ಹೇಳಿದರು.

ಸರಳ ಗಣರಾಜ್ಯೋತ್ಸವ ಆಲಮಟ್ಟಿ ಪ್ರವಾಸಿ ತಾಣ ಉತ್ತೇಜನಕ್ಕೆ ಸಂಕಲ್ಪ- ಎಚ್.ಸುರೇಶ್

ಆಲಮಟ್ಟಿ: ಈ ಭಾಗದ ಪ್ರವಾಸಿ ತಾಣವಾಗಿ ಖ್ಯಾತಿ ಪಡೆಯುತ್ತಿರುವ ಆಲಮಟ್ಟಿಯನ್ನು ಇನ್ನಷ್ಟು ಪ್ರವಾಸಿಗರನ್ನು ಇತ್ತ ಆಕಷಿ೯ಸಿ…