ಗದಗ: ಕಪ್ಪತ್ತಗುಡ್ಡ ನಾಶವಾದರೆ ಈ ಭಾಗ ಮರಭೂಮಿಯಾಗುತ್ತದೆ. ಬಲ್ದೋಟದಂತಹ ಕಂಪನಿ ಸರ್ಕಾರದ ಮೇಲೆ ಪ್ರಭಾವ ಬೀರುತ್ತವೆ. ಈ ಕಾರಣದಿಂದ ಸರ್ಕಾರ ಕಮಿಶನ್ ಗೆ ಒಳಗಾಗಿ ಗಣಿಗಾರಿಕೆಗೆ ಅವಕಾಶ ನೀಡಬಾರದು ಎಂದು ತೋಂಟದ ಸಿದ್ಧರಾಮಶ್ರೀಗಳು ಎಚ್ಚರಿಸಿದರು.
ಕಪ್ಪತ್ತಗುಡ್ಡದಲ್ಲಿ ಗಣಿಗಾರಿಕೆ ಬಗ್ಗೆ ಸರ್ಕಾರದ ಮಟ್ಟದಲ್ಲಿ ಚರ್ಚೆ ನಡೆಯುತ್ತಿರುವ ಆರೋಪ ಹಿನ್ನೆಲೆ ತೋಂಟದ ಸಿದ್ಧರಾಮಶ್ರೀಗಳು ಪ್ರತಿಕ್ರಿಸಿದರು.

ಸರ್ಕಾರದ ನಡೆ ಹೀಗೆ ಮುಂದುವರೆದರೆ ನಾವು ಕೂಡ ಹೋರಾಟ ಮುಂದುವರೆಸುತ್ತೇವೆ. ಆಗ ಹೋರಾಟ ಹತ್ತಿಕ್ಕುವ ಪ್ರಯತ್ನಗಳು ನಡೆಯುತ್ತವೆ. ಇಂತಹ ಸಂದರ್ಭದಲ್ಲಿ ಯಾರು ಕೂಡ
ಪ್ರಲೋಭನೆಗೆ ಒಳಗಾಗಬಾರದು.
ಯಾವ ಕಾರಣಕ್ಕೂ ಕಪ್ಪತ್ತಗುಡ್ಡದಲ್ಲಿ ಗಣಿಗಾರಿಕೆ ನಡೆಯಬಾರದು. ರಾಜಕಾರಣಿಗಳು ಮುಂದಿನ ಎಲೆಕ್ಷನ್ ಬಗ್ಗೆ ಯೋಚನೆ ಮಾಡಬಾರದು. ಎಲೆಕ್ಷನ್ ಗೆ ಹಣ ಕೂಡಿಸಲು ಯೋಚಿಸುವ ರಾಜಕಾರಣಿ ನಿಜವಾದ ರಾಜಕಾರಣಿ ಅಲ್ಲ. ಹೀಗೆ ಮಾಡಿದರೆ ರಾಜಕಾರಣಿಗಳ ತಂತ್ರಗಾರಿಕೆಗೆ ಜನ ಸ್ಪಂದಿಸಿಲ್ಲ. ನಮ್ಮ ಸಂಪತ್ತುನ್ನು ಎಲ್ಲಿಂದಲೋ ಬಂದವರು ಲೂಟಿ ಹೊಡೆಯಲು ಅವಕಾಶ ನೀಡಬಾರದು ಎಂದು ಆಕ್ರೋಶ ವ್ಯಕ್ತಪಡಿಸಿದರು.

ಸಂಪನ್ಮೂಲ ನಾಶ ಮಾಡಿದರೆ ಉಳಿಗಾಲವಿಲ್ಲ
ಮನುಷ್ಯನ ಬದುಕಿಗೆ ಪೂರಕವಾದ ಎಲ್ಲ ಸಂಪನ್ಮೂಲ ಭೂಮಿ ಮೇಲಿದೆ. ನಾವು ಬದಕಲು ಇರುವ ಸಂಪನ್ಮೂಲ ಸರಿಯಾಗಿ ಬಳಿಸಿಕೊಳ್ಳಬೇಕು. ಆದರೆ ಸಂಪನ್ಮೂಲ ನಾಶ ಮಾಡುವ ಕೆಲಸ ಮಾಡಿದರೆ ಯಾರಿಗೂ ಉಳಿಗಾಲವಿಲ್ಲ ಎಂದರು.

ಗಣಿಗಾರಿಕೆಯಿಂದ ಸಂಪನ್ಮೂಲ ನಾಶ ಮಾಡುವುದು ಪಕೃತಿ ಮೇಲಿನ ಅತ್ಯಾಚಾರ. ಹೀಗಾಗಿ ಚಿನ್ನದ ಮೊಟ್ಟೆ ಇಡುವ ಕೋಳಿ ಸಾಕಿದ ವ್ಯಕ್ತಿಯ ಕಥೆಯನ್ನು ಪ್ರತಿಯೊಬ್ಬರು ನೆನೆಪಿಸಿಕೊಳ್ಳಬೇಕು. ಇಲ್ಲದಿದ್ದರೆ ಚಿತ್ರ ತೋರಿಸಿ ಪ್ರಾಣಿ ಪರಿಚಯಿಸುವ ಕಾಲ ಬರುತ್ತದೆ ಎಂದು ವಿಷಾದ ವ್ಯಕ್ತಪಡಿಸಿದರು.

ನಾವು ಮಾಡಿದ ಹ್ಯೇಯ ಕೃತ್ಯಕ್ಕೆ ಮುಂದಿನ ಪಿಳಿಗೆ ಬಲಿ ಪಶುವಾಗುತ್ತದೆ. ಪಾಕೃತಿಕ ಸಂಪನ್ಮೂಲವನ್ನು ಕಾಳಜಿಯಿಂದ ಉಳಿಸಿಕೊಳ್ಳಬೇಕು.
ಈಗಾಗಲೇ ಕಪ್ಪತ್ತಗುಡ್ಡದಲ್ಲಿ ಪವನ ಯಂತ್ರಗಳನ್ನು ಸ್ಥಾಪಿಸಿ ಇವುಗಳಿಗಾಗಿ ರಸ್ತೆ ನಿರ್ಮಿಸಿದ್ದಾರೆ. ಇದರಿಂದ ಸಸ್ಯ ವೈವಿಧ್ಯಕ್ಕೆ ಬೆಂಕಿ ಬೀಳುತ್ತದೆ. ಈ ಕಾರಣದಿಂದ ಸಾಕಷ್ಟ ಸಸ್ಯ ಹಾಗೂ ವನ್ಯ ಸಂಪತ್ತು ಹಾನಿಯಾಗುತ್ತದೆ.
ನಿರಂತರ ಕಪ್ಪತ್ತಗುಡ್ಡದ ಮೇಲೆ ಆಘಾತಕಾರಿ ಘಟನೆಗಳು ನಡೆಯುತ್ತಲಿದೆ. ಗಣಿಗಾರಿಕೆ ನಡೆಸಿ ಸಂಪತ್ತು ಕೊಳ್ಳೆ ಹೊಡೆಯಲು ವಿದೇಶಿ ಕಂಪನಿಗಳು ಹುನ್ನಾರ ನಡೆಸಿವೆ.

ಆರ್ಥಿಕ ಸಂಕಷ್ಟ ಮುಕ್ತಕ್ಕೆ ಅನ್ಯಮಾರ್ಗ ಬೇಡ

ಸರ್ಕಾರ ಕೊರೋನಾ ಆರ್ಥಿಕತೆ ಸಂಕಷ್ಟ ಮುಕ್ತವಾಗಲೂ ಗಣಿಗಾರಿಕೆ ನಡೆಸಬಹುದು. ಈ ಘಟನೆ ಸೂಚ್ಯವಾಗಿ ಗಮನಿಸಲಾಗ್ತಿದೆ. ಆರ್ಥಿಕತೆ ಹದಗೆಟ್ಟ ಮಾತ್ರಕ್ಕೆ ಗಣಿಗಾರಿಕೆ ಅಥವಾ ಯಾವುದೇ ಚಟುವಟಿಕೆ ನಡೆಸುವುದು ಸೂಕ್ತವಲ್ಲ. ಕಾಂಗ್ರೆಸ್-ಬಿಜೆಪಿ ಯಾರೇ ಇರಲಿ
ಗಣಿಗಾರಿಕೆಯಿಂದ ಆಗುವ ತೊಂದರೆ ಬಗ್ಗೆ ಅವರಿಗೆ ಅರಿವಿದೆ. ಬಳ್ಳಾರಿ ಸದ್ಯದ ಸ್ಥಿತಿ ಇದಕ್ಕೆ ಉದಾಹರಣೆಯಾಗಿದೆ. ಸರ್ಕಾರ ಯಾವುದೇ ಕಾಲಕ್ಕೂ ಗಣಿಗಾರಿಕೆಗೆ ಅವಕಾಶ ನೀಡಬಾರದು.
ಸಪ್ಪಳವಿಲ್ಲದಂತೆ ಗಣಿಗಾರಿಕೆ ಆರಂಭಿಸಿದರೆ ಪ್ರಾಕೃತಿಕ ಸಂಪನ್ಮೂಲ ಕಳೆದುಕೊಂಡಂತಾಗುತ್ತದೆ ಎಂದು ಎಚ್ಚರಿಸಿದರು.

Leave a Reply

Your email address will not be published. Required fields are marked *

You May Also Like

ಸಿಡಿಲು ಬಡಿದು ಇಬ್ಬರು ಸಾವು

ಉತ್ತರಪ್ರಭಶಿರಹಟ್ಟಿ: ಪಟ್ಟಣದ ಹೊರವಲಯದಲ್ಲಿ ಗುಡುಗು ಸಿಡಿಲು ಸಹಿತ ಭಾರಿ ಮಳೆಯಾಗಿದ್ದು, ಸಿಡಿಲು ಬಡಿದು ಇಬ್ಬರು ಸಾವನ್ನಪ್ಪಿದ…

ಗದಗಿನ ಶ್ರೀ ಜಗದ್ಗುರು ತೋಂಟದಾರ್ಯ ವಿದ್ಯಾಪೀಠದ ಮೂರು ಸಿ.ಬಿ.ಎಸ್.ಇ ಶಾಲೆಗಳ ಫಲಿತಾಂಶ ಶೇ.100 ಕ್ಕೆ 100 ರಷ್ಟು

ಗದಗ : ಗದುಗಿನ ಜಗದ್ಗುರು ತೋಂಟದಾರ್ಯ ವಿದ್ಯಾಪೀಠದ ವತಿಯಿಂದ ಗದಗ, ಮುಂಡರಗಿ ಹಾಗು ಗಜೇಂದ್ರಗಡ ಪಟ್ಟಣದಲ್ಲಿ…

ಆಲಮಟ್ಟಿ ಪದವಿ ಕಾಲೇಜಿಗೆ ಎಲ್.ಐ.ಸಿ.ತಂಡ ಭೇಟಿ

ಗುಲಾಬಚಂದ ಜಾಧವಆಲಮಟ್ಟಿ : ಸ್ಥಳೀಯ ಎಸ್.ವ್ಹಿ.ವ್ಹಿ.ಸಂಸ್ಥೆಯ ಮಂಜಪ್ಪ ಹಡೇ೯ಕರ (ಎಂ.ಎಚ್.ಎಂ.)ಪದವಿ ಮಹಾವಿದ್ಯಾಲಯಕ್ಕೆ ಬೆಳಗಾವಿ ರಾಣಿ ಚೆನ್ನಮ್ಮ…

ಸಿನಿಮಾ ಮಂದಿರದಲ್ಲಿ ಪ್ರೇಕ್ಷಕರ ಕಡಿತವಿಲ್ಲ

ಕೊರೊನಾ ಸಂಖ್ಯೆ ಮತ್ತೆ ಹೆಚ್ಚಾಗುತ್ತಿರುವುದರಿಂದ ರಾಜ್ಯದಲ್ಲಿ ಸಿನಿಮಾ ಮಂದಿರಗಳು ಶೇ.50 ರಷ್ಟು ಪ್ರೇಕ್ಷಕರಿಗೆ ಮಾತ್ರ ಅವಕಾಶ ನೀಡುವ ಪ್ರಸ್ತಾಪ ಸರ್ಕಾರದ ಮುಂದಿಲ್ಲ ಎಂದು ಸಿಎಂ ಯಡಿಯೂರಪ್ಪ ಅವರು ತಮ್ಮ ಟ್ವೀಟರ್ ಖಾತೆಯಲ್ಲಿ ಟ್ವೀಟ ಮಾಡುವ ಮೂಲಕ ಸ್ಪಷ್ಟಪಡಿಸಿದ್ದಾರೆ.