ಬಾಗಲಕೋಟೆ: ಆರ್ ಟಿ ರೆಕಾರ್ಡಿಂಗ್ ಸ್ಟುಡಿಯೋ ಪ್ರೊಡಕ್ಷನ್ ಬಾಗಲಕೋಟೆ ಅವರ ಮುದ್ದು ಮಾಡೋ ಗೆಳೆಯ ಮ್ಯೂಸಿಕ್ ಆಲ್ಬಂ ಸಾಂಗ್ ಫಸ್ಟ್ ಲುಕ್ ಪೋಸ್ಟರ್ ಅನ್ನು ಬಾಗಲಕೋಟೆಯ ಸಮಗ್ರ ಜೀವನ ವಿಕಾಸ ಸಂಸ್ಥೆಯ ಅಂಧ ಮಕ್ಕಳ ವಸತಿ ಶಾಲೆಯಲ್ಲಿ ಬಿಡುಗಡೆ ಮಾಡಲಾಯಿತು.

 ನಿರ್ದೇಶಕ ಸದಾಶಿವ ಹಿರೇಮಠ, ಸಂಗೀತ ನಿರ್ದೇಶಕ ರವಿತೇಜ, ಜಾನಪದ ಕಲಾವಿದರಾದ ಬಾಳು ಬೆಳಗುಂದಿ, ಶಿವಕಾಂತ ಪೂಜಾರಿ , ಡಿಜೆ ಅರವಿಂದ್ ಉಮರಾಣಿ ಹಲವಾರು ಗಣ್ಯರು ಉಪಸ್ಥಿತರಿದ್ದರು. ಕಳೆದ ಏಳೆಂಟು ವರ್ಷಗಳಿಂದ ಹಲವಾರು ಜನಪದ, ಭಕ್ತಿಗೀತೆ, ಸಿನೇಮಾ, ಮನರಂಜನಾತ್ಮಕ ಹಾಡುಗಳನ್ನು ನಿರ್ಮಿಸಿ ಉತ್ತರ ಕರ್ನಾಟಕದಾದ್ಯಂಥ ಹೆಸರು ಗಳಿಸಿರುವ ಆರ್ ಟಿ ರೆಕಾರ್ಡಿಂಗ್ ಸ್ಟುಡಿಯೋ ಇದೀಗ ಹೊಸ ಕಾನ್ಸೆಪ್ಟ್ ನೊಂದಿಗೆ ಈ ಹಾಡಿನ ಆಲ್ಬಂ ಅತಿ ಕಡಿಮೆ ವೆಚ್ಚದಲ್ಲಿ ಅದ್ದೂರಿ ಗೀತೆ ನಿರ್ಮಿಸುವ ಹೊಸ ಪ್ರಯತ್ನ ಮಾಡಿದ್ದಾರೆ. ಬಾಗಲಕೋಟೆ ಉದ್ಯಮಿಗಳಾದ ರೇಣುಕಾ ಹಾದಿಮನಿ ನಿರ್ಮಾಪಕರಾಗಿದ್ದಾರೆ. ಉತ್ತರ ಕರ್ನಾಟಕದ ಹಳ್ಳಯ ಸೊಗಸು, ಸೊಗಡನ್ನು ತೋರಿಸುವ ಗುರಿ ಇಟ್ಟುಕೊಂಡ ತಂಡ ಬಾಗಲಕೋಟೆಯ ಸುತ್ತಮುತ್ತಲಿನ ಭಾಗದಲ್ಲೇ ಚಿತ್ರೀಕರಣ ಮಾಡಿದ್ದಾರೆ. ಈ ಆಲ್ಬಂ ಗೀತೆ ಪ್ರೇಮಿಗಳಿಗೆ ಖುಷಿಯನ್ನು ತರಲಿದೆ ಎಂದು ತಂಡ ಅಭಿಪ್ರಾಯ ಪಟ್ಟಿದೆ.

 ಮೊದಲ ಬಾರಿಗೆ ಆಲ್ಬಂ ನಿರ್ದೇಶನಕ್ಕಿಳಿದಿರುವ ಜವಾರಿ ಲವ್ ಸಿನೇಮಾದ ನಿರ್ದೇಶಕ ಸದಾಶಿವ ಹಿರೇಮಠ ನಿರ್ದೇಶನ, ರವಿತೇಜ ಅವರ ಮನ ಸೆಳೆಯುವ ಸಂಗೀತ ನಿರ್ದೇಶನವಿರುವ ಈ ಹಾಡಿಗೆ ತುಷಾರ ಮಲಗೊಂಡ ನಟಿಸಿದ್ದಾರೆ. ಶಿವಾರಂಜಿನಿ ಸಾಹಿತ್ಯ ಬರೆದಿದ್ದು ಹಾಡಿಗೆ ಸರಿಗಮಪ ಖ್ಯಾತಿಯ ಶ್ರೀರಕ್ಷಾ ಆಚಾರ್ಯ ಧ್ವನಿ ನೀಡಿದ್ದಾರೆ. ಇವರೊಂದಿಗೆ ರುಕ್ಷಾನಾ ರುಕ್ಕು ನಾಯಕಿ ನಟಿಯಾಗಿ ಅಭಿನಯಿಸಿದ್ದು ಹಲವಾರು ಚಲನಚಿತ್ರಗಳಿಗೆ ಛಾಯಾಗ್ರಹಣ ಮಾಡಿರುವ ಸದಾಶಿವ ಹಿರೇಮಠ ಅತ್ಯುತ್ತಮ ಛಾಯಾಗ್ರಹಣ ಮಾಡಿದ್ದಾರೆ. ರೋಣದ ಮೋಹನಬಾಬು ಕಟ್ಟಿಮನಿ ಸಹ ನಿರ್ದೇಶಕರಾಗಿದ್ದು, ಉದಯ ಆನಂದ್ ಬರ್ಕೆ ಅವರ ಸಂಕಲನ, ಬಾಗಲಕೋಟೆಯ ರಾಜು ಗೋಗಿ ಪ್ರಸಾಧನ, ಪ್ರಚಾರ ಕಲೆ ಡಾ.ಪ್ರಭು ಗಂಜಿಹಾಳ, ಡಾ.ವೀರೇಶ ಹಂಡಗಿ ನಿರ್ವಹಿಸುತ್ತಿದ್ದಾರೆ. ಬಾಳು ಬೆಳಗುಂದಿ, ಶಿವಕಾಂತ ಪೂಜಾರಿ, ಬೀರಣ್ಣ ಮರಿಯಾಯಿ, ಬೊಂಬಾಟ್ ಬಸಣ್ಣ, ಜೀವಾ ಅಂಬಿಗೇರ, ಶಿವು ಅಂಬಿಗೇರ, ಡಿ.ವಾಯ್. ನಾಯಕ್, ಡಿಜೆ ಬೀರು, ರಾಕಿ ವಾಲ್ಮೀಕಿ, ಸಂತೋಷ ವಿಂತ್ರಿ, ಡಿಜೆ ಅರವಿಂದ್ ಉಮರಾಣಿ, ಇಮ್ತಾಜ್, ಪರಶು ಕೋಲಾರ, ಬಸವರಾಜ ನರೇಂದ್ರ, ಬಸು ಕೋಲಾರ, ಸುದೀಪ ಹಳವಾರ, ಲಗಮಣ್ಣ ಮರಿಯಾಯಿ, ಮಾಳು ನಿಪ್ಪಿನಾಳ, ಮಂಜುನಾಥ ಹೆಗ್ಗೆಣ್ಣವರ, ಪ್ರಕಾಶ ರೂಗಿ, ಮಂಜುನಾಥ ಸಂಗಳದ, ಜಕ್ಕು ಹಿರೆಕೋಡಿ, ಬೀರಾಬೆನ್ನಿ, ಸಿದ್ದು ಹುಕ್ಕೇರಿ, ಭೀಮಣ್ಣ ಕಾರತ್, ತುಕಾರಾಮ ಕಾರತ್, ಮಲ್ಲಣ್ಣ ಮಂತ್ರಿ, ಮುತ್ತಣ್ಣ ಬೂದಿಹಳ್ಳಿ, ನಾಗರಾಜ ಹೊನ್ನ ಸಿಂಗಾರಿ ಮುಂತಾದವರು ಸಹಕಾರ ನೀಡಿದ್ದು ಈಗಾಗಲೇ ಚಿತ್ರೀಕರಣ ಮುಗಿಸಿದ್ದು ಫಸ್ಟ್ ಲುಕ್ ಪೋಸ್ಟರ್ ಬಿಡುಗಡೆ ಮಾಡಿ, ಸಾಂಗ್ ಬಿಡುಗಡೆ ಮಾಡಲು ಸಜ್ಜಾಗಿದ್ದಾರೆ. ಈ ತಿಂಗಳ ಕೊನೆಯ ವಾರದಲ್ಲಿ ಬಿಡುಗಡೆ ಮಾಡುವದಾಗಿ ನಿರ್ಮಾಪಕರು ತಿಳಿಸಿದ್ದಾರೆ.

Leave a Reply

Your email address will not be published. Required fields are marked *

You May Also Like

ಗದಗ ಜಿಲ್ಲೆಯ ಹಳ್ಳಿ ಗಳಲ್ಲಿ ಕೊರೊನಾ ಭಯ..!: ಗುಟಕಾ, ಸಿಗರೇಟ್ ಮಾರಿದ್ರೆ ದಂಡ ಗ್ಯಾರಂಟಿ..!

ಗದಗ: ಜಿಲ್ಲೆಯಲ್ಲಿ 180 ಪಾಸಿಟಿವ್ ಕೇಸ್ ಪತ್ತೆಯಾದ ಹಿನ್ನಲೆ ಹಳ್ಳಿ ಹಳ್ಳಿಗೂ ಕೊರೋನಾ ಭಯ ಶುರುವಾಗಿದೆ.…

ಇನ್ಮುಂದೆ ಗ್ರಾಮ ಪಂಚಾಯತಿಯಲ್ಲೆ ಸಿಗಲಿದೆ ಜನನ-ಮರಣ ಪ್ರಮಾಣ ಪತ್ರ

ರಾಷ್ಟ್ರೀಯ ಜನನ-ಮರಣ ಕಾಯ್ದೆ 1967ರ ಅಧ್ಯಾಯ 5ರ ಪ್ರಕರಣ 27 ರ ಅಡಿ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳನ್ನು (ಪಿಡಿಒ) ಜನನ ಮತ್ತು ಮರಣ ಪತ್ರಗಳ ವಿತರಣಾಧಿಕಾರಿ ಎಂದು ರಾಜ್ಯಪಾಲರ ಆದೇಶದ ಪ್ರಕಾರ ನೇಮಕ ಮಾಡಿ, ಸರ್ಕಾರದ ಅಧೀನ ಕಾರ್ಯದರ್ಶಿ (ಜಿಪಂ) (ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ) ಆದೇಶ ಹೊರಡಿಸಿದ್ದಾರೆ.

ಪ್ರವಾಸಿಗರಿಗೆ ಮಡಿಕೇರಿ ಮುಕ್ತ

ಮಡಿಕೇರಿ : ಕೊರೊನಾ ಸೋಂಕಿನ ಮಧ್ಯೆಯೇ ಪ್ರವಾಸೋದ್ಯಮಕ್ಕೆ ಅವಕಾಶ ನೀಡಲಾಗಿದ್ದು, ಜನರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುತ್ತಿದ್ದಾರೆ.…