ಗಜೇಂದ್ರಗಡ: ಸಮೀಪದ ಕೊಡಗಾನೂರ ಗ್ರಾಮದ ಶ್ರೀ ವೀರಭದ್ರೇಶ್ವರ ಜಾತ್ರಾ ಮಹೋತ್ಸವದ ರಥೋತ್ಸವ ಭಕ್ತರ ಹರ್ಷೊದ್ಘಾರದ ಮಧ್ಯೆ ಶನಿವಾರ ಸಂಜೆ ಸಂಭ್ರಮದಿಂದ ನಡೆಯಿತು.

ಬೆಳಗ್ಗೆ ದೇಗುಲದಲ್ಲಿ ಶ್ರೀ ವೀರಭದ್ರೇಶ್ವರ ಮೂರ್ತಿಗೆ ವಿಶೇಷ ಪೂಜಾ ಕೈಂಕರ್ಯಗಳು ನಡೆದವು. ಭಕ್ತಸಮೂಹ ಶ್ರೀ ವೀರಭದ್ರೇಶ್ವರ ಮಹಾರಾಜ ಕೀ ಜೈ ಎಂದು ಜಯಘೊಷ ಹಾಕುತ್ತಾ ಭಜನೆ, ಝಾಂಜಮೇಳ, ಡೊಳ್ಳು, ಕರಡಿ ಮಜಲು, ಡೊಳ್ಳು, ಸಂಗೀತ ವಾಧ್ಯ ವೈಭವದಿಂದ ನಂದಿಕೊಲು, ಛತ್ರ ಚಾಮರಗಳೊಂದಿಗೆ ಭಕ್ತಿ ಭಾವದಿಂದ ಭಕ್ತರು ಉತ್ತತ್ತಿ, ಬಾಳೆ ಹಣ್ಣುಗಳನ್ನು ಎಸೆದು ನಮನ ಸಲ್ಲಿಸಿದರು.

ರಥ ಯಶಸ್ವಿಯಾಗಿ ಮರಳಿ ಸ್ವಸ್ಥಳಕ್ಕೆ ಬಂದು ನಿಂತಾಗ ಭಕ್ತಾದಿಗಳು ಚಪ್ಪಾಳೆ ತಟ್ಟಿ ಭಕ್ತಿಭಾವದಿಂದ ಮರೆತರು. ಬಳಿಕ ದೇವಸ್ಥಾನದಲ್ಲಿ ದೇವರ ದರ್ಶನ ಪಡೆದು ಕಾಯಿ ಒಡೆಸಿ, ನೈವಿದ್ಯೆ ನೆರವೇರಿಸಿ ಕೃತಾರ್ಥರಾದರು.

Leave a Reply

Your email address will not be published. Required fields are marked *

You May Also Like

ಆಲಮಟ್ಟಿ: 15 ರಂದು ಹಳಕಟ್ಟಿ ಶಾಲೆಯ 64 ನೇ ವಾಷಿ೯ಕ ಸ್ನೇಹ ಸಮ್ಮೇಳನ

ಗುಲಾಬಚಂದ ಆರ್. ಜಾಧವಆಲಮಟ್ಟಿ : ಸ್ಥಳೀಯ ಎಸ್.ವ್ಹಿ.ವ್ಹಿ.ಸಂಸ್ಥೆಯ ರಾವಬಹದ್ದೂರ ಡಾ. ಫ.ಗು.(ಆರ್.ಬಿ.ಪಿ.ಜಿ) ಹಳಕಟ್ಟಿ ಪ್ರೌಢಶಾಲೆಯ 2021-22…

ಸಾರಿಗೆ ಸಂಸ್ಥೆ ಸಿಬ್ಬಂದಿಗೂ ವಕ್ಕರಿಸಿದ ಸೋಂಕು!

ಕಾರವಾರ: ಬಿಎಂಟಿಸಿ ನೌಕರರಲ್ಲಿ ಇತ್ತೀಚೆಗೆ ಕೊರೊನಾ ಸೋಂಕು ದೃಢಪಟ್ಟಿತ್ತು. ಸದ್ಯ ಸಾರಿಗೆ ಸಂಸ್ಥೆಯ ನೌಕರಸ್ಥರಿಗೂ ಇದರ…

ಕಲೆಯ ಅಭಿರುಚಿ ಇಲ್ಲದದಿದ್ದರೆ ನಕಾರಾತ್ಮಕ ಅಪಸವ್ಯಗಳು ಮೈದಳೆಯುತ್ತವೆ

ಲಲಿತಕಲೆ, ಸಾಹಿತ್ಯ, ಸಂಗೀತದಥ ಕಲೆಗಳ ಅಭಿರುಚಿ ಇಲ್ಲದಿರುವುದರಿಂದಲೇ ಆಧನಿಕ ಯುವಜನರಲ್ಲಿ ನಕಾರಾತ್ಮಕ ಚಿಂತನೆಗಳು ಮೂಡುತ್ತಿವೆ

ಆರೋಪಿಯಲ್ಲಿ ಕೊರೊನಾ ಸೋಂಕು – ಪೊಲೀಸರಲ್ಲಿ ಹೆಚ್ಚಿದ ಆತಂಕ!

ಬೆಂಗಳೂರು: ಇಲ್ಲಿಯ ಭೀಮಾನಗರ ಪೊಲೀಸ್ ಠಾಣೆಯಲ್ಲಿ ಆರೋಪಿಯೊಬ್ಬನಲ್ಲಿ ಕೊರೊನಾ ಪಾಸಿಟಿವ್ ಕಂಡು ಬಂದಿದೆ. ಇನ್ನೊಂದೆಡೆ ನಗರದಲ್ಲಿ…