ಜಕರ‍್ತಾ:  ಬ್ರೇಕ್ ವೈಫಲ್ಯವಾಗಿ ಪ್ರವಾಸಿ ಬಸ್ ಕಂದಕಕ್ಕೆ ಉರುಳಿ ಬಿದ್ದು 26 ಮಂದಿ ಪ್ರಯಾಣಿಕರು ಮೃತಪಟ್ಟು , 35ಕ್ಕೂ ಹೆಚ್ಚು ಮಂದಿ ಗಂಭೀರವಾಗಿ ಗಾಯಗೊಂಡಿರುವ ಘಟನೆ ಇಂದು ಮುಂಜಾನೆ ಇಂಡೋನೇಷಿಯಾದಲ್ಲಿ ಸಂಭವಿಸಿದೆ. ಇಸ್ಲಾಮಿಕ್ ಜೂನಿಯರ್ ಹೈಸ್ಕೂಲ್ ವಿದ್ಯಾರ್ಥೀಗಳು ಮತ್ತು ಅವರ ಪೋಷಕರನ್ನು ಕರೆದೊಯ್ಯುತ್ತಿದ್ದ ಪ್ರವಾಸಿ ಬಸ್ ಜಾವಾದ ದ್ವೀಪ ಪ್ರದೇಶದಲ್ಲಿ ಸಂಚರಿಸುತ್ತಿದ್ದಾಗ ಬ್ರೇಕ್ ಫೇಲ್ಯೂರ್ ಆಗಿ ಈ ದುರ್ಘಟನೆ ಸಂಭವಿಸಿದೆ.

ಪರ‍್ವಾ ಜಾವಾದ ಸುಬಾಂಗ್ ಪಟ್ಟಣದ ವಿದ್ಯಾರ್ಥಿಗಳು ಮತ್ತು ಅವರ ಪೋಷಕರನ್ನು ತಸಿಕ್ ಮುಲಾಯಾ ಪ್ರದೇಶದಲ್ಲಿರುವ ಧರ‍್ಮಿಕ ಸ್ಥಳಕ್ಕೆ ಕರೆದೊಯ್ಯುತ್ತಿದ್ದ ಪ್ರವಾಸಿ ಬಸ್ ಕಂದಕಕ್ಕೆ ಉರುಳಿ 26 ಮಂದಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ ಎಂದು ಹಿರಿಯ ಪೊಲೀಸ್ ಅಧಿಕಾರಿ ಎಕೊ ರಸೆಟಿಯೋ ರೊಬ್ಯಾಂಟೋ ತಿಳಿಸಿದ್ದಾರೆ.

ಇಕ್ಕಟ್ಟಾದ ಇಳಿಜಾರು ಪ್ರದೇಶದ ತಿರುವಿನಲ್ಲಿ ಬಸ್ನ ಬ್ರೇಕ್ ವೈಫಲ್ಯಗೊಂಡಿದ್ದು , ಚಾಲಕನಿಗೆ ಬಸ್ ನಿಯಂತ್ರಣ ಸಿಗದ ಹಿನ್ನೆಲೆಯಲ್ಲಿ 20 ಅಡಿ ಕಂದಕಕ್ಕೆ ಉರುಳಿ ಬಿತ್ತು. ಕಂದಕದಲ್ಲಿ ಸಿಲುಕಿಕೊಂಡಿದ್ದ 26 ಮೃತದೇಹಗಳನ್ನು ಹೊರ ತೆಗೆಯುವಲ್ಲಿ ರಕ್ಷಣಾ ಪಡೆಗಳು ಯಶಸ್ವಿಯಾಗಿವೆ. ಗಂಭೀರವಾಗಿ ಗಾಯಗೊಂಡಿರುವ 35 ಮಂದಿಯನ್ನು ರಕ್ಷಿಸಿ ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ.

ಗಾಯಗೊಂಡಿರುವ 35 ಮಂದಿಯಲ್ಲಿ 13 ಮಂದಿಯ ಸ್ಥಿತಿ ಚಿಂತಾಜನಕವಾಗಿದೆ. ಬಸ್ ಅಪಘಾತದಲ್ಲಿ  ಚಾಲಕನು ದುರಂತದಲ್ಲಿ ಬಲಿಯಾಗಿದ್ದಾನೆ. ದುರಂತದಲ್ಲಿ ಒಟ್ಟು 26 ಅಮಾಯಕರು ಬಲಿಯಾಗಿದ್ದಾರೆ.

Leave a Reply

Your email address will not be published. Required fields are marked *

You May Also Like

ಚೀನಾ ಟೆನ್ಷನ್: ಸೇನಾಧಿಕಾರಿ, ಇಬ್ಬರು ಸೈನಿಕರು ಬಲಿ!

ದೆಹಲಿ: ಚೀನಾ ಮತ್ತು ಭಾರತೀಯ ಯೋಧರ ನಡುವಿನ ಮುಖಾಮುಖಿಯಲ್ಲಿ ಲಡಾಖ್ ನ ಗಾಲ್ವಾನ್ ನಲ್ಲಿ ಒಬ್ಬ…

ರಾಜ್ಯದಲ್ಲಿ ಕೊರೋನಾ ಸೋಂಕಿತರ ಸಂಖ್ಯೆ 512ಕ್ಕೆ ಏರಿಕೆ

ಕೊರೋನಾ ಸೊಂಕಿಗೆ ಸಾಕಷ್ಟು ಸಾವು ನೋವುಗಳು ಸಂಭವಿಸುತ್ತಿದ್ದು, ರಾಜ್ಯ-ದೇಶ-ರಾಷ್ಟ್ರದಲ್ಲಿ ಕೊರೋನಾ ಸೋಂಕಿತರ ಅಪ್ಡೇಟ್ ಮಾಹಿತಿ..

ವಿಶ್ವ ಸಂಸ್ಥೆ ಭದ್ರತಾ ಸಮಿತಿಗೆ ಭಾರತ ತಾತ್ಕಾಲಿಕ‌ ಸದಸ್ಯ

ನ್ಯೂಯಾರ್ಕ್‌: ಚೀನಾದೊಂದಿಗೆ ಗಡಿಯಲ್ಲಿ ಸಂಘರ್ಷ ನಡೆಯುತ್ತಿರುವ ಬೆನ್ನಲ್ಲಿಯೇ ಭಾರತಕ್ಕೆ ವಿಶ್ವಸಂಸ್ಥೆಯ ಭದ್ರತಾ ಸಮಿತಿಯ ತಾತ್ಕಾಲಿಕ ಸದಸ್ಯತ್ವ…

ಭಾರತ ಸೈನಿಕರ ಮೇಲೆ ನಿಗಾ: ಪಾಕ್ ಕುತಂತ್ರ ಬುದ್ದಿ

ಭಾರತದ ಸೈನಿಕರ ಮೇಲೆ ನಿಗಾ ಇಡುವ ನಿಟ್ಟಿನಲ್ಲಿ ಪಾಕ್ ಕುತಂತ್ರ ಬುದ್ಧಿ ಬಳಕೆ ಮಾಡಿರುವುದು ಬೆಳಕಿಗೆ ಬಂದಿದೆ.