ನವದೆಹಲಿ : ಭಾರತದ ಸೈನಿಕರ ಮೇಲೆ ನಿಗಾ ಇಡುವ ನಿಟ್ಟಿನಲ್ಲಿ ಪಾಕ್ ಕುತಂತ್ರ ಬುದ್ಧಿ ಬಳಕೆ ಮಾಡಿರುವುದು ಬೆಳಕಿಗೆ ಬಂದಿದೆ.
ಪಾಕಿಸ್ತಾನದ ಗುಪ್ತಚರ ಸಂಸ್ಥೆಗಳು ಆರೋಗ್ಯ ಸೇತು ಆ್ಯಪ್ ನ್ನು ದುರ್ಬಳಕೆ ಮಾಡಿಕೊಳ್ಳುತ್ತಿವೆ ಎಂದು ಸೇನೆ ಎಚ್ಚರಿಸಿದೆ. ಆರೋಗ್ಯ ಸೇತು ಆ್ಯಪ್ ನಂತಹುದ್ದೇ ಮತ್ತೊಂದು ಆ್ಯಪ್ ಅನ್ನು ಸಿದ್ಧಪಡಿಸಿ ಆ ಮೂಲಕ ಭಾರತೀಯ ಸೈನಿಕರ ಮೇಲೆ ನಿಗಾ ಇಡುತ್ತಿದೆ. ಈ ಕುರಿತು ಕೇಂದ್ರ ಸರ್ಕಾರ ಕೂಡಲೇ ಕ್ರಮ ಕೈಗೊಳ್ಳಬೇಕು ಎಂದು ಎಚ್ಚರಿಸಿದೆ.

ನಕಲಿ ಆರೋಗ್ಯ ಸೇತು ಆ್ಯಪ್ ಮೂಲಕ ಭಾರತೀಯ ಮಿಲಿಟರಿ ಪಡೆಯ ಫೋನ್ ಗಳನ್ನು ಹ್ಯಾಕ್ ಮಾಡಿ ಆ ಮೂಲಕ ಸೈನಿಕರ ಚಲನವಲನಗಳನ್ನು ಸೂಕ್ಷ್ಮವಾಗಿ ಗಮನಿಸುತ್ತಿದೆ. ಇದಕ್ಕಾಗಿ ಆರೋಗ್ಯ ಸೇತು. ಎಪಿಕೆ (Aarogya Setu.apk.) ನಂತಹ ನಕಲಿ ಆ್ಯಪ್ ಸೃಷ್ಟಿ ಮಾಡಿದೆ.

ಪಾಕಿಸ್ತಾನ ಮೂಲದ ಆಪರೇಟರ್ ಗಳು ಇದನ್ನು ವಾಟ್ಸಪ್ ಮೂಲಕ ಭಾರತದ ಸೇನಾಧಿಕಾರಿಗಳ ಮೊಬೈಲ್ ಗೆ ರವಾನಿಸುತ್ತಿದ್ದಾರೆ ಎಂದು ಹೇಳಿದೆ. ಇತ್ತೀಚೆಗಷ್ಟೇ ಭಾರತದ ಎಲ್ಲ ಸೈನಿಕರೂ ಆ್ಯಪ್ ಡೌನ್ಲೋಡ್ ಮಾಡಿ ಬಳಸುವಂತೆ ಕೇಂದ್ರ ಸರ್ಕಾರ ನಿರ್ದೇಶನ ನೀಡಿತ್ತು. ಆದರೆ ಸರ್ಕಾರದ ಸದುದ್ದೇಶವನ್ನು ಪಾಕಿಸ್ತಾನ ತನ್ನ ನೀಚ ಕೃತ್ಯಕ್ಕೆ ದುರ್ಬಳಕೆ ಮಾಡಿಕೊಳ್ಳುತ್ತಿದೆ.

Leave a Reply

Your email address will not be published. Required fields are marked *

You May Also Like

ನೌಕರರಿಗೆ ಶಾಕಿಂಗ್ ನ್ಯೂಸ್: ದಕ್ಷತೆ ಆಧರಿಸಿ ವೇತನ ಕಡಿತ

ಕೇಂದ್ರ ಸರ್ಕಾರಿ ಸ್ವಾಮ್ಯದ ಕಂಪನಿಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ನೌಕರರಿಗೆ ವೇತನ ಕಡಿತ ಮಾಡುವ ಸಾಧ್ಯತೆ ಇದೆ.

ಅತಿಥಿ ಉಪನ್ಯಾಸಕರ ಅನಿರ್ದಿಷ್ಟಾವಧಿ ಸತ್ಯಾಗ್ರಹ

ಉತ್ತರಪ್ರಭ ಗದಗ: ಅತಿಥಿ ಉಪನ್ಯಾಸಕರ ಖಾಯಂ ಮತ್ತು ಸೇವಾ  ಭದ್ರತೆಗಾಗಿ  ಜಿಲ್ಲಾಡಳಿತ ಭವನದ ಮುಂದೆ ಅನಿರ್ದಿಷ್ಟಾವಧಿ…

ಟ್ವೀಟರ್ ನಟ ರಜನಿಕಾಂತ ಟ್ವೀಟ್ ಅಳಿಸಿ ಹಾಕಿದ್ದು ಯಾಕೆ?

ಖ್ಯಾತ ನಟ ರಜನಿಕಾಂತ್ ಮಾಡಿದ ಟ್ವೀಟ್ ನ್ನು ಸ್ವತಃ ಟ್ವೀಕರ್ ಅಳಿಸಿ ಹಾಕಿದೆ. ಅವರ ಟ್ವೀಟ್ ಜಾಗದಲ್ಲೀಗ ಟ್ವೀಟರ್ ನಿಯಮ ಉಲ್ಲಂಘಿಸಿರುವುದರಿಂದ ಈ ಟ್ವೀಟ್ ಲಭ್ಯವಿಲ್ಲ ಎಂದು ಸೂಚಿಸಿದೆ. ಟ್ವೀಟ್ ಅಳಿಸಿ ಹಾಕಲಿ ಕಾರಣ ಏನು ಗೊತ್ತೆ?

ಚೀನಾದಲ್ಲಿ ಶುರುವಾಗಿದೆ ಕೊರೊನಾ ಎರಡನೇ ಅಲೆ!

ಬೀಜಿಂಗ್: ಚೀನಾದಲ್ಲಿ ಮತ್ತೊಮ್ಮೆ ಕೊರೊನಾ ಅಲೆ ಶುರುವಾಗಿದೆ. ಹುಟ್ಟು ಪಡೆದಿರುವ ಬೀಜಿಂಗ್ ನಲ್ಲಿಯೇ ಸದ್ಯ ಅದರ…