ಬೆಂಗಳೂರು : ರಾಜರಾಜೇಶ್ವರಿ ನಗರದಲ್ಲಿ ಬಿಜೆಪಿ ಅಭ್ಯರ್ಥಿ ಮುನಿರತ್ನ ಗೆಲುವಿನ ಸನಿಹಕ್ಕೆ ಬಂದು ನಿಂತಿದ್ದಾರೆ.

ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಕುಸುಮಾ ಹಾಗೂ ಜೆಡಿಎಸ್ ಪಕ್ಷದ ಕೃಷ್ಣಮೂರ್ತಿ ವಿರುದ್ಧ ಹೆಚ್ಚಿನ ಮತಗಳ ಅಂತರದಿಂದ ಮುನ್ನಡೆ ಸಾಧಿಸಿದ್ದು, ಹ್ಯಾಟ್ರಿಕ್ ಗೆಲುವು ಸಾಧಿಸುವುದು ಬಹುತೇಕ ಖಚಿತವಾದಂತಾಗಿದೆ.

ಈ ಕ್ಷೇತ್ರದ 20ನೇ ಸುತ್ತಿನ ಮತಎಣಿಕೆ ಪೂರ್ಣಗೊಂಡಿದ್ದು, ಬಿಜೆಪಿ ಅಭ್ಯರ್ಥಿ ಮುನಿರತ್ನ ಅವರು 1,03,291 ಮತಗಳನ್ನು ಪಡೆದು ಮುನ್ನಡೆ ಕಾಯ್ದು ಕೊಂಡಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿ ಕುಸುಮಾ ಅವರು 58,743 ಮತಗಳನ್ನು ಪಡೆದಿದ್ದಾರೆ. ಜೆಡಿಎಸ್ ಅಭ್ಯರ್ಥಿ ಕೃಷ್ಣಮೂರ್ತಿ ಅವರು 7,772 ಮತಗಳನ್ನು ಪಡೆದಿದ್ದಾರೆ. ಮುನಿರತ್ನ ಅವರು 44,548 ಮತಗಳ ಅಂತರಿಂದ ಮುನ್ನಡೆ ಸಾಧಿಸಿದ್ದಾರೆ.

ಮುನಿರತ್ನ ಅವರ ಅಂತರ 44 ಸಾವಿರ ದಾಟಿದ್ದು, ಇನ್ನು 5 ಸುತ್ತುಗಳ ಮತ ಎಣಿಕೆ ಮಾತ್ರ ಬಾಕಿ ಇದೆ. ಆದರೆ, ಮುನಿರತ್ನ ಅವರು ಸಾಧಿಸಿರುವ ಮುನ್ನಡೆಯನ್ನು ಇನ್ನು ಉಳಿದಿರುವ 5 ಸುತ್ತುಗಳಲ್ಲಿ ದಾಟಲು ಕಾಂಗ್ರೆಸ್ ಅಭ್ಯರ್ಥಿಗೆ ಆಗುವುದಿಲ್ಲ ಎಂದು ಹೇಳಲಾಗುತ್ತಿದೆ. ಹೀಗಾಗಿ ಎಲ್ಲಾ ಸುತ್ತುಗಳ ಮತ ಎಣಿಕೆ ಪೂರ್ಣಗೊಂಡು ಬಹುಮತದ ಅಂತರವಷ್ಟೇ ನಿರ್ಧಾರವಾಗಬೇಕಿದೆ.

ಬಿಜೆಪಿ ಮತ್ತು ಕಾಂಗ್ರೆಸ್‌ನ ಅಬ್ಬರದ ಪ್ರಚಾರ, ಆರೋಪ– ಪ್ರತ್ಯಾರೋಪ, ಜಾತಿ– ಕಣ್ಣೀರ ರಾಜಕಾರಣದ ಕಾರಣದಿಂದ ರಾಜರಾಜೇಶ್ವರಿ ನಗರದ ಉಪ ಚುನಾವಣೆ ಕುತೂಹಲ ಕೆರಳಿಸಿತ್ತು.

Leave a Reply

Your email address will not be published. Required fields are marked *

You May Also Like

ರಾಜ್ಯ ಸರ್ಕಾರ ವಿರುದ್ಧ ಕನಕಶ್ರೀ ಆಕ್ರೋಶ

ಸಾರಾಯಿ ಮಾರಾಟ ಮತ್ತೆ ಪ್ರಾರಂಭಿಸಿರುವ ಕಾರನ ರಾಜ್ಯ ಸರ್ಕಾರದ ವಿರುದ್ಧ ಕನಕ ಶ್ರೀಗಳು ಕಿಡಿಕಾರಿದ್ದಾರೆ.

ಲಕ್ಷ್ಮೇಶ್ವರ ತಾಲೂಕಿನಾದ್ಯಂತ ಜವಳು ಮಣ್ಣಿಗೆ ಮರಳು ರೂಪ ಕೊಟ್ಟು ಅಕ್ರಮ!

ಅಕ್ರಮ ಮರಳು ಗಣಿಗಾರಿಕೆ ನಡೆಯುತ್ತಿರುವುದು ಅಧಿಕಾರಿಗಳಿಗೆ ಗೊತ್ತಿದೆಯಂತೆ, ಆದರೆ ಸ್ಥಳಕ್ಕೆ ಭೇಟಿ ನೀಡಿ ಕ್ರಮ ಕೈಗೊಳ್ಳುತ್ತಾರಂತೆ. ಇದು ಕೇವಲ ಒಂದು ವಿಚಾರದ್ದಲ್ಲ.

ಶುದ್ಧ ನೀರು ಪೂರೈಕೆಗೆ ಕರವೇ (ಪ್ರವೀಣಕುಮಾರ ಶೆಟ್ಟಿ ಬಣ) ಒತ್ತಾಯ

ರೋಗ ರುಜಿನಗಳಿಗೆ ಕಲುಷಿತ ನೀರು ಕಾರಣವಾಗುತ್ತಿದ್ದು, ಅದರಲ್ಲೂ ಇದೀಗ ಬೇಸಿಗೆ ಪ್ರಾರಂಭವಾಗಿದ್ದು ನೀರಿನಿಂದ ಅನೇಕ ಸಮಸ್ಯೆಗಳು ಉದ್ಬವಾಗುತ್ತಿದ್ದು ಪಟ್ಟಣದಲ್ಲಿ ಅನೇಕ ಹೋಟೆಲ್‌ಗಳು ಡಾಬಾ ಬೇಕರಿ ಹಾಗೂ ಬೀದಿ ಬದಿ ಆಹಾರ ಮಾರಾಟ ಮಾಡುವವರು ಜನರಿಗೆ ಕಲುಷಿತ ನೀರು ಪೂರೈಸುವುದರಿಂದ ರೋಗಗಳು ಹೆಚ್ಚುವಂತಾಗಿದೆ.