ಗದಗ: ಐದು ವರ್ಷಕ್ಕೊಮ್ಮೆ ಮಹತ್ವದ ಚುನಾವಣೆ ಬರುತ್ತೆ. ಆ ಚುನಾವಣೆಲಿ ನಾವೇ ದಾರಿ ತಪ್ಪುತ್ತೇವೆ. ಅದರಿಂದ ಮುಂದಿನ ಐದು ವರ್ಷವೂ ರಾಜಕೀಯ ದಾರಿ ತಪ್ಪುತ್ತೆ. ಜನಪ್ರತಿನಿಧಿಗಳದ್ದಷ್ಟೇ ದೋಷ ಇರಲ್ಲ. ಅವರನ್ನು ಆಯ್ಕೆ ಮಾಡುವ ಜನರ ದೋಷವೂ ಇದೆ ಎಂದು ತೋಂಟದ ಡಾ.ಸಿದ್ಧರಾಮ ಸ್ವಾಮೀಜಿ ಹೇಳಿದರು.

ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರಜಾಪ್ರಭುತ್ವದಲ್ಲಿ ನಾವು ಯೋಗ್ಯ ವ್ಯಕ್ತಿಗಳನ್ನು ಆರಿಸಿ ತರಬೇಕು. ಹಣ-ಹೆಂಡಕ್ಕೆ ಆಸೆ ಪಟ್ಟು ಅಯೋಗ್ಯರನ್ನ ಚುನಾವಣೆಯಲ್ಲಿ ಆರಿಸಿ ತಂದರೆ ಪ್ರಜಾಪ್ರಭುತ್ವ ವ್ಯವಸ್ಥೆ ಹಾಳಾಗುತ್ತದೆ. ಬೇವಿನ ಬೀಜವ ಬಿತ್ತಿ ಮಾವಿನ ಫಲ ಬೇಕೆಂದರೆ ಹೇಗೆ? ಸ್ವಾರ್ಥ, ಆಮೀಷಕ್ಕೋಳಗಾಗಿ ಕೆಟ್ಟ ರಾಜಕಾರಣಿಗಳನ್ನು ಆಯ್ಕೆ ಮಾಡಿದರೆ ಇದೇ ರೀತಿ ಸಮಾಜದ ಸ್ವಾಥ್ಯ ಹಾಳಾಗುತ್ತದೆ ಎಂದು ತಿಳಿಸಿದರು.

ಮೀಸಲಾತಿಯಿಂಯಾರಿಗೆ ಲಾಭವಾಗುತ್ತೆ

ಮೀಸಲಾತಿಯನ್ನು ಉಳ್ಳವರೆ ಪಡೆದುಕೊಳ್ಳುವಂತೆ ಆಗಬಾರದು. ಸಮಾಜದಲ್ಲಿ ಆರ್ಥಿಕವಾಗಿ ಹಿಂದುಳಿದವರಿಗೆ ಮೀಸಲಾತಿ ಸೌಲಭ್ಯ ದೊರಕಬೇಕಿದೆ. ಸಾಮಾನ್ಯ ಜನರಿಗಾಗಿ ಸರ್ಕಾರ ಮೀಸಲಾತಿಯ ಹೊಸ ಯೋಜನೆಗಳನ್ನು ಜಾರಿಗೆ ತರಬೇಕಿದೆ. ಸಮಾಜದಲ್ಲಿ ಹಿಂದುಳಿದ ಜನರಿಗೆ ಅವಕಾಶ ಒದಗಿಸುವ ಕೆಲಸವೇ ಸರ್ಕಾರದ ಉದ್ದೇಶ ಎಂದರು. ಪಂಚಮಸಾಲಿ ಸಮಾಜ ನಾಲ್ಕು ತಿಂಗಳಿದ ಹೋರಾಟ ಮಾಡುತ್ತಾ ಬಂದಿದೆ. ನಾಲ್ಕು ತಿಂಗಳ ಹಿಂದೆಯೆ ಸರ್ಕಾರ ಸಮಿತಿ ರಚಿಸಬೇಕಿತ್ತು. ಆ ವಿಚಾರದಲ್ಲಿ ಸರ್ಕಾರ ಸ್ವಲ್ಪ ತಡ ಮಾಡಿದೆ. ಸರ್ಕಾರ ಈಗ ಸಮಿತಿ ರಚಿಸಿದ್ದು ಸಮಾಜದಲ್ಲಿ ಸಂತಸವಿದೆ. ಮೀಸಲಾತಿ ಮಾಡುವುದರಿಂದ ಯಾರಿಗೆ ತೊಂದರೆಯುಂಟಾಗುತ್ತೆ. ಯಾರಿಗೆ ಲಾಭವಾಗುತ್ತೆ ಎನ್ನುವುದು ತಿಳಿದುಕೊಳ್ಳಬೇಕು. ಸಚಿವರು, ಶಾಸಕರು, ರಾಜಕಾರಣಿಗಳು ಪಕ್ಷ ಬೇಧ ಮರೆತು ಹೋರಾಟ ಮಾಡಬೇಕಿದೆ ಎಂದು ಸ್ಪಷ್ಟಪಡಿಸಿದರು.

Leave a Reply

Your email address will not be published. Required fields are marked *

You May Also Like

ರಾಮನ ಗುಡಿ ಗುದ್ದಲಿ ಪೂಜೆಗೆ ಸಿದ್ಧವಾಗ್ತಿದೆ ವೇದಿಕೆ: 40 ಕೆಜಿ ಬೆಳ್ಳಿ ಇಟ್ಟಿಗೆಯೇ ಅಡಿಗಲ್ಲು!

ರಾಮ ಮಂದಿರ ನಿರ್ಮಾಣಕ್ಕೆ ಗುದ್ದಲಿ ಪೂಜೆಗೆ ಅಗಸ್ಟ್ 5 ರ ಮುಹೂರ್ತ ಪಕ್ಕಾ ಆಗಿದ್ದು, ವೇದಿಕೆ ಸಿದ್ಧಗೊಳ್ಳುತ್ತಿದೆ. ಗುದ್ದಲಿ ಬಿದ್ದ ನಂತರ 40 ಕೆಜಿಯ ಬೆಳ್ಳಿ ಇಟ್ಟಿಗೆಯನ್ನು ಅಡಿಗಲ್ಲನ್ನಾಗಿ ನೆಡಲಾಗುವುದು ಎಂದು ಶ್ರೀ ರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್ ತಿಳಿಸಿದೆ.

ಸಂವಿಧಾನಕ್ಕೆ ತೆಲೆ ಬಾಗಿ ನಡೆದರೆ ಬದುಕು ಪಾವನ ಮಕ್ಕಳು ಶೈಕ್ಷಣಿಕ ಪ್ರಭಲತೆ ಸಾಧಿಸಬೇಕು – ಜಿ.ಎಂ.ಕೋಟ್ಯಾಳ

ಆಲಮಟ್ಟಿ : ಸರಕಾರ ಶಿಕ್ಷಣದ ಗುಣಮಟ್ಟ ಹೆಚ್ಚಿಸಲು ಹಾಗು ಮಕ್ಕಳ ಕಲಿಕೆಯ ಪ್ರಗತಿಗಾಗಿ ನಾನಾ ಬಗೆಯ…

ಮನುಕುಲದ ಸೂರ್ಯ ಲಿಂ.ತೋಂಟದ ಸಿದ್ದಲಿಂಗ ಶ್ರೀ

ಆಲಮಟ್ಟಿ : ಲಿಂ, ತೋಂಟದ ಡಾ.ಸಿದ್ದಲಿಂಗ ಶ್ರೀ ಕರುನಾಡು,ದೇಶ ಕಂಡ ಅಪರೂಪದ ಜೀವ ದೈವ. ನಿಭೀ೯ಡೆ…

ದಿಂಗಾಲೇಶ್ವರ ಶ್ರೀಗಳ ಹೇಳಿಕೆ: ಅಭಿನವ ಡಾ.ಅನ್ನದಾನ ಮಹಾಸ್ವಾಮಿಗಳ ಮೇಲಿನ ಭಕ್ತರ ಪ್ರೀತಿಗೆ ಬೆಲೆ ಕಟ್ಟಲಾಗದು

ಉಪಕಾರ ಸ್ಮರಣಯೇ ಜನ್ಮದಿನವಾಗಿರುತ್ತದೆ. ಅಭಿನವ ಡಾ.ಅನ್ನದಾನ ಮಹಾಸ್ವಾಮಿಗಳ ಮೇಲಿನ ಭಕ್ತರ ಪ್ರೀತಿಗೆ ಬೆಲೆಯನ್ನು ಕಟ್ಟುವುದು ಅಸಾಧ್ಯವಾದ ಮಾತಾಗಿದೆ ಎಂದು ಬಾಲೇಹೊಸೂರಿನ ದಿಂಗಾಲೇಶ್ವರ ಸ್ವಾಮಿಗಳು ಹೇಳಿದರು.