ಗೋಕಾಕ್: ರಮೇಶ್ ಜಾರಕಿಹೊಳಿಯವರು ಯಾರ ಮಾತುಗಳನ್ನೂ ಕೇಳುವ ಸ್ಥಿತಿಯಲ್ಲಿ ಇರಲಿಲ್ಲ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಹೇಳಿದರು.

ಸಿಡಿ ಪ್ರಕರಣದ ನಂತರ ಮಾಧ್ಯಮದವರಿಗೆ ಪ್ರತಿಕ್ರಿಯಿಸಿದ ಸತೀಶ್ ಜಾರಕಿಹೊಳಿ, ಗೋಕಾಕಿನಲ್ಲಿ ಯಾವ ಪರಿಸ್ಥಿತಿ ಇದೆ, ಜಾರಕಿಹೊಳಿ ಕುಟುಂಬ ಯಾರು ನಡೆಸುತ್ತಾರೆ ಎಂಬುದು ಗೊತ್ತಿದೆ. ರಮೇಶ್ ವೈಯಕ್ತಿಕವಾಗಿ ಇದ್ದಾರೆ. ಅಳಿಯ ಅಂಭಿರಾವ್ ಪಾಟೀಲ ಅವರ ಮಾತು ಬಿಟ್ರೆ ಯಾರ ಮಾತನ್ನೂ ಕೇಳುವ ಪರಿಸ್ಥಿತಿಯಲ್ಲಿ ರಮೇಶ್ ಇಲ್ಲ ಎಂದರು.

ರಮೇಶ್ ಸಿಡಿ ಪ್ರಕರಣದಲ್ಲಿ ಯುವತಿ ಹೇಳಿಕೆ ಅತೀ ಮುಖ್ಯ. ಪೊಲೀಸರು ತನಿಖೆ ನಡೆಸಿ, ಯುವತಿಗೆ ನೊಟೀಸ್ ನೀಡಿ, ಕರೆಸಿ ವಿಚಾರಣೆ ನಡೆಸಬೇಕು. ಬೇರೆ ಯಾರೇ ದೂರು ನೀಡಿದರೂ ಅದರಿಂದ ಪ್ರಯೋಜನವಾಗದು. ಯುವತಿಯ ಹೇಳಿಕೆಯೇ ಮುಖ್ಯ ಎಂದು ಅಭಿಪ್ರಾಯಪಟ್ಟರು.

ಪಕ್ಷ ಯಾವುದೇ ಇದ್ದರೂ ಇಂತಹ ಘಟನೆಗಳು ನಡೆಯಬಾರದು. ಹಾಗೇನಾದರೂ ಇದ್ದಲ್ಲಿ ನೇರವಾಗಿ ಪೊಲೀಸ್ ಠಾಣೆಗೆ ದೂರು ನೀಡಿ, ತನಿಖೆ ನಡೆಸುವಂತೆ ಆಗ್ರಹಿಸಬೇಕು. ಇದು ಉತ್ತಮ ವೇದಿಕೆ. ಅದರ ಬದಲಿಗೆ ಇಂತಹ ಪ್ರಕರಣಗಳನ್ನು ಬೀದಿಗೆ ತರಬಾರದು ಎಂದರು.

ಸಿಡಿ ಪ್ರಕರಣ ಮುಗಿದ ವಿಚಾರ. ಈಗಾಗಲೇ ರಮೇಶ್ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಸಂಬಂಧಿಸಿದವರಿಗೆ ಪೊಲೀಸರು ನೊಟೀಸ್ ನೀಡಿ, ತನಿಖೆ ನಡೆಸಬೇಕು. ಆಗ ಸತ್ಯಾಂಶ ಹೊರಬಲಿದೆ ಎಂದರು.

Leave a Reply

Your email address will not be published. Required fields are marked *

You May Also Like

ಶಾಸಕ ಬಂಡಿ ಅವ್ರಿಗೆ ಯಾವುದೇ ಅಸಮಾಧಾನ ಇಲ್ಲಂತ, ಸಚಿವ ಸ್ಥಾನ ಕೊಟ್ರ ಬ್ಯಾಡನಲ್ಲಂತ!

ಗದಗ: ಸಚಿವ ಸ್ಥಾನದ ಬಗ್ಗೆ ನನಗೆ ಯಾವುದೇ ಅಸಮಾಧಾನವಿಲ್ಲ. ಆದರೆ ಸಚಿವ ಸ್ಥಾನ ನೀಡಿದರೆ ಬೇಡ…

ವಿಕೆಂಡ್ ಮೀಟಿಂಗ್ ನಲ್ಲಿ ಮೂರನೇ ಅಭ್ಯರ್ಥಿ ಕಣಕ್ಕಿಳಿಸಲು ತೀರ್ಮಾನಿಸುತ್ತಾ ಬಿಜೆಪಿ?

ಬಿಜೆಪಿ ಕೋರ್ ಕಮೀಟಿಯ ಮೀಟಿಂಗ್ ಗೆ ಇದೀಗ ಹೆಚ್ಚು ಮಹತ್ವ ಬಂದಿದ್ದು ವಿಕೇಂಡ್ ಮೀಟಿಂಗ್ ಯಾವ ನಿರ್ಧಾರಕ್ಕೆ ಸಾಕ್ಷಿಯಾಗಲಿದೆ ಎನ್ನುವುದು ಆಕಾಂಕ್ಷಿಗಳಲ್ಲಿ ಆಸಕ್ತಿ ಮೂಡಿಸಿದೆ.

ಉಪ ಚುನಾವಣೆ – ಹಲವೆಡೆ ಮುನ್ನಡೆ ಸಾಧಿಸುತ್ತಿರುವ ಬಿಜೆಪಿ!

ನವದೆಹಲಿ : ರಾಜರಾಜೇಶ್ವರಿ ನಗರ, ಶಿರಾ ಉಪಚುನಾವಣೆಯಲ್ಲಿ ಬಿಜೆಪಿ ಮುನ್ನಡೆ ಸಾಧಿಸಿದೆ.

ಬಿಜೆಪಿ ಸರ್ಕಾರದಲ್ಲಿ ಯೋಧರಿಗಿಲ್ಲ ಪ್ರಾಮುಖ್ಯತೆ : ಕಾಂಗ್ರೆಸ್ ಟೀಕೆ

ಬಿಜೆಪಿಯ ಹಮ್ ದೋ ಹಮಾರೆ ದೋ ಸರ್ಕಾರದಲ್ಲಿ ಅಂಬಾನಿಗಿರುವ ಪ್ರಾಮುಖ್ಯತೆ ಯೋಧರಿಗಿಲ್ಲ ಎಂದು ಕಾಂಗ್ರೆಸ್ ಪಕ್ಷ ತನ್ನ ಅಧಿಕೃತ ಟ್ವೀಟರ್ ಖಾತೆಯಲ್ಲಿ ಟ್ವೀಟ್ ಮಾಡುವ ಮೂಲಕ ಕೇಂದ್ರ ಸರ್ಕಾರಕ್ಕೆ ಟೀಕಿಸಿದೆ.