28 ವರ್ಷಗಳ ಬಳಿಕ ಗ್ರಾಮಿ ಪ್ರಶಸ್ತಿ ಪುರಸ್ಕೃತ ಸಂಗೀತ ಜೋಡಿ ಡಾಫ್ಟ್ ಪಂಕ್ ಬೇರೆಯಾಗಲು ನಿರ್ಧರಿಸಿದ್ದಾರೆ.
ಎಪಿಲೋಗ್ ಹೆಸರಿನ 8 ನಿಮಿಷಗಳ ವಿಡಿಯೋ ಮೂಲಕ ತಮ್ಮ ಈ ಹೊಸ ನಿರ್ಧಾರವನ್ನು ಇಬ್ಬರೂ ಘೋಷಿಸಿದ್ದಾರೆ.
ಫ್ರೆಂಚ್ ವಾದಕರಾದ ಥಾಮಸ್ ಬಂಗಾಲ್ಟರ್ ಹಾಗೂ ಗಯ್-ಮ್ಯಾನುಯೆಲ್ ಇಬ್ಬರೂ ಸೇರಿಕೊಂಡು ಡಾಫ್ಟ್ ಪಂಕ್ಗೆ ಚಾಲನೆ ಕೊಟ್ಟಿದ್ದರು. ಪ್ಯಾರಿಸ್ನ ಶಾಲೆಯೊಂದರಲ್ಲಿ ವ್ಯಾಸಂಗ ಮಾಡುತ್ತಿದ್ದ ವೇಳೆ, ಡಾರ್ಲಿಂಗ್ ಹೆಸರಿನ ಇಂಡಿ ರಾಕ್ ಬ್ಯಾಂಡ್ ಒಂದನ್ನು ಆರಂಭಿಸಿದ್ದರು.