ರೋಣ: ವಿಸ್ಟೇನ್ ಟೆಕ್ನಿಕಲ್ ಆಂಡ್ ಸರ್ವಿಸಸ್ ಸೆಂಟರ್ ಪ್ರೈವೇಟ್ ಲಿಮಿಟೆಡ್ ಇಂಡಿಯಾ ವತಿಯಿಂದ ಶನಿವಾರ ತಾಲೂಕು ಮಾಡಲಗೇರಿ ಗ್ರಾಮದಲ್ಲಿ ಜಿಲ್ಲೆಯ 25 ಜನರಿಗ ಕೃತಕ ಕಾಲು, ಕೃತಕ ಕೈ, ವೀಲ್ ಚೇರ್, ವಾಕಿಂಗ್ ಸ್ಟಾಂಡ್, ವಾಕಿಂಗ್ ಸ್ಟಿಕ್, ಕಾಲಿಪರ್, ಶೂಸ್, ನೀ ಕ್ಯಾಪ್ ಇತ್ಯಾದಿ ಸಾಮಗ್ರಿಗಳನ್ನು ಉಚಿತವಾಗಿ ವಿತರಣೆ ಮಾಡಲಾಯಿತು.

ಈ ವೇಳೆ ವಿಸ್ಟೇನ್ ಕಂಪನಿಯ ಪ್ರತಿನಿಧಿ ಸಿದ್ದಾರ್ಥ ಬಂಗಾರ, ರಾಜ್ಯ ಹಾಗೂ ದೇಶದ ಮೂಲೆ ಮೂಲೆಗಳಲ್ಲಿ ವಿಸ್ಟೇನ್ ಕಂಪನಿ ಮಾಡುತ್ತಿರುವ ಸಮಾಜಿಕ ಕೆಲಸಗಳ ಬಗ್ಗೆ ಮಾಹಿತಿ ನೀಡಿದರು.

ಮಾಡಲಗೇರಿ ಗ್ರಾಮದ ಸಮಾಜಿ ಕಾರ್ಯಕರ್ತ ಜಗದೀಶ ಶಂಕರಗೌಡ ಅಮಾತಿಗೌಡ್ರ, ತಮ್ಮ ಸತತ ಪ್ರಯತ್ನ ಮತ್ತು ಶ್ರಮದಿಂದ ಕಾರ್ಯಕ್ರಮ ಯಶಸ್ವಿಗೊಳಿಸುವ ಮೂಲಕ ಜನರ ಪ್ರಶಂಸೆಗೆ ಪಾತ್ರರಾದರು.

ವೃತ್ತಿಯಿಂದ ಇಂಜನೀಯರ್ ಆಗಿರುವ ಜಗದೀಶ ಜೊತೆಗೆ ತಾಲೂಕಿನ ಹಲವಾರು ಗ್ರಾಮಗಳ ಯುವಕರ, ಶೈಕ್ಷಣಿಕ ಅಭಿರುದ್ಧಿಗಾಗಿ ಹಗಲಿರುಳು ಶ್ರಮ ಪಡುತ್ತಿರುವುದು ಶ್ಲಾಘನೀಯ.

ಈ ವೇಳೆ ಮಾಡಲಗೇರಿ, ಹಿರೇಹಾಳ, ಕೊತಬಾಳ, ಹುನಗುಂಡಿ ಶಾಲೆಯಲ್ಲಿ ಡಿಜಿಟಲ್ ಗ್ರಂಥಾಲಯ ಮತ್ತು ಶಾಲೆ ದತ್ತು ತಗೆದು ಕೊಳ್ಳಲು ಶಿಕ್ಷಕ ಹೂಗಾರ ಕಂಪನಿ ಪ್ರತಿನಿಧಿ ಸಿದ್ದಾರ್ಥ್ ಅವರಿಗೆ ಮನವಿ ಸಲ್ಲಿಸಿದರು.

ವಿಸ್ಟಿಯನ್ ಕಂಪನಿ ಮಾಡುತ್ತಿರುವ ಸಾಮಾಜಿಕ ಕೆಲಸಗಳನ್ನು ಮೆಚ್ಚಿ ಮತ್ತು ಕರೋನ ಸಂದರ್ಭದಲ್ಲಿ 250 ಆಹಾರ ಕಿಟ್ ವಿತರಿಸುವ ಮೂಲಕ ಮಾನವೀಯತೆ ಮೆರೆದ ಕಂಪನಿಯ ಅಧ್ಯಕ್ಷ ಆಶೀಶ್ ಭಾಟಿಯಾ ಮತ್ತು ಕಂಪನಿಯ ಉದ್ಯೋಗಿಗಳಿಗೆ ಸನ್ಮಾನಿಸಲಾಯಿತು.

ಸಂದರ್ಭದಲ್ಲಿ ಶಂಕರಗೌಡ ಅಮಾತಿಗೌಡ್ರ, ರುದ್ರಗೌಡ ಅಮಾತಿಗೌಡ್ರ, ಮುರಗೇಶ ಹುನಗುಂಡಿ, ನಾಗನಗೌಡ ಅಮಾತಿಗೌಡ್ರ, ವೆಂಕನಗೌಡ ಗೋವಿಂದಗೌಡ್ರ, ತಿಮಪ್ಪನಗೌಡ ತಿಪ್ಪನಗೌಡ್ರ, ಸಂಕನಗೌಡರ ರಾಯನಗೌಡ್ರ, ವೀರನಗೌಡ ಅಮಾತಿಗೌಡ್ರ, ಹಿರೇಹಾಳ ಪಿಡಿಒ ಅವರಾದ ದಳವಾಯಿ,
ಬಸವರಾಜ ಹೆಬ್ಬಳ್ಳಿ, ಹನುಮಗೌಡ ರಾಯನಗೌಡ್ರ, ಮಲ್ಲಪ್ಪ ನೈನಾಪುರ, ಶರಣಪ್ಪಗೌಡ ಗೋವಿಂದಗೌಡ್ರ, ಹೂವಪ್ಪ ಬಾವಿ, ಭೀಮನಗೌಡ ತಾ ಭೀಮನಗೌಡ್ರ, ಶರಣಪ್ಪ ಶಿರಗುಂಪಿ, ರಮೇಶ ವಕ್ಕರ, ಪ್ರಬು ವಿರಕ್ತಮಠ, ಜೋಗಿ ಭೀಮಸಿ, ಪ್ರಹ್ಲಾದಪ್ಪ ಪೂಜಾರ್, ಮೈಲಾರಪ್ಪ ಮಾದರ, ಮಾಡಲಗೇರಿ ಗ್ರಾಮದ ಗಂಡು ಮತ್ತು ಹೆಣ್ಣು ಮಕ್ಕಳ ಶಾಲೆ ಸಿಬ್ಬಂದಿಗಳು, ರೋಣ ತಾಲೂಕ ಸರಕಾರಿ ಶಾಲೆ ಸಿಬ್ಬಂದಿಗಳು ಗ್ರಾಮದ ಗುರು ಹಿರಿಯರು ಮತ್ತು ಯುವಕರು ಇದ್ದರು.

Leave a Reply

Your email address will not be published. Required fields are marked *

You May Also Like

ಮುಂಬೈ ಎಕ್ಸಪ್ರೆಸ್ ನಲ್ಲಿ ಬಂದಿಳಿದರು 124 ಜನ..!

ಮುಂಬೈನಲ್ಲಿದ್ದ ಜನರು ಇಂದು ಮುಂಬೈ-ಗದಗ ಎಕ್ಸಪ್ರೆಸ್ ರೈಲಿನ ಮೂಲಕ ಗದಗ ನಗರಕ್ಕೆ ಆಗಮಿಸಿದರು. ಇದರಲ್ಲಿ 124 ಜನರು ರೈಲಿನ ಮೂಲಕ ನಗರಕ್ಕೆ ಆಗಮಿಸಿದರು.

ಜಿಲ್ಲೆಯಲ್ಲಿ ಧಾರ್ಮಿಕ ಹಬ್ಬಗಳನ್ನು ನಿರ್ಭಂದಿಸಿ ಜಿಲ್ಲಾಡಳಿತ ಆದೇಶ

ಕಳೆದ 15 ದಿನಗಳಿಂದ ರಾಜ್ಯದಲ್ಲಿ ಕೋವಿಡ್-19 ಪ್ರಕರಣಗಳು ತೀವ್ರಗತಿಯಲ್ಲಿ ಏರಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ ಮುಂಬರುವ ಹೋಳಿ, ಯುಗಾದಿ, ಷಬ್-ಎ-ಬರಾತ್, ಗುಡ್‌ಫ್ರೆöÊಡೆ ಹಬ್ಬಗಳ ಸಂದರ್ಭಗಳ ನಡೆಯಬಹುದಾದ ಸಮಾರಂಭಗಳು, ಆಚರಣೆಗಳು

ಜುಲೈನಲ್ಲಿ ಪಿಯುಸಿ ಹಾಗೂ ಆಗಸ್ಟ್‌ ಮೊದಲ ವಾರದಲ್ಲಿ ಎಸ್ಸೆಸ್ಸೆಲ್ಸಿ ಫಲಿತಾಂಶ : ಶಿಕ್ಷಣ ಸಚಿವ ಸುರೇಶ್ ಕುಮಾರ್

ಚಿಕ್ಕಬಳ್ಳಾಪುರ : ರಾಜ್ಯದಲ್ಲಿ ಸದ್ಯ ಎಸ್ಸೆಸ್ಸೆಲ್ಸಿ ಪರೀಕ್ಷೆ ನಡೆಯುತ್ತಿದೆ. ಜುಲೈನಲ್ಲಿ ಪಿಯುಸಿ ಪರೀಕ್ಷೆ ಫಲಿತಾಂಶ ಹಾಗೂ…

ಚರ್ಚ್, ಮಸೀದಿಗಳಲ್ಲಿ ದೀಪ ಬೆಳಗಿಸಿ; ದಿಪಾವಳಿ ಆಚರಿಸಿ- ರಾಜು ಖಾನಪ್ಪನವರ

ಶಾಂತಿ, ಕೋಮು ಸೌಹಾರ್ಧತೆಗೆ ಜಿಲ್ಲೆ ಹೆಸರುವಾಸಿಯಾಗಿದೆ. ಇಂತಹ ಸೌಹಾರ್ಧ ತಾಣದಲ್ಲಿ ದೀಪಾವಳಿ ಹಬ್ಬವನ್ನು ಭಾವೈಕ್ಯತೆಯಿಂದ ಆಚರಿಸೋಣ. ಹೀಗಾಗಿ ಚರ್ಚ್, ದರ್ಗಾ ಮಸೀದಿಗಳಲ್ಲಿ ದೀಪ ಬೆಳಗಿಸುವ ಮೂಲಕ ನಾಡಿನಲ್ಲಿ ಕೋಮು ಸೌಹಾರ್ದತೆ ಬಲಪಡಿಸಲು ಮುಂದಾಗೋಣ ಎಂದು ಶ್ರೀರಾಮ ಸೇನೆ ಧಾರವಾಡ ವಿಭಾಗ ಸಂಚಾಲಕ ರಾಜು ಖಾನಪ್ಪನವರ ಹೇಳಿದರು.