ಬೆಂಗಳೂರು: ವಾಟ್ಸಾಪ್ ಬಳಕೆದಾರರಿಗೆ ಹೊಸ ಮಾಹಿತಿಯೊಂದು ಇಲ್ಲಿದೆ. ವಾಟ್ಸಾಪ್ ಬಳಕೆದಾರರು ಸ್ಮಾರ್ಟ ಫೋನ್ ಗಳಲ್ಲಿ ವಾಟ್ಸಾಪ್ ಲಾಗೌಟ್ ಮಾಡಬಹುದಾಗಿದೆ. ಈ ಮೂಲಕ ಫೇಸ್ಬುಕ್ ಒಡೆತನದ ವಾಟ್ಸಾಪ್ ಸಂಸ್ಥೆ ವಾಟ್ಸಾಪ್ ಖಾತೆ ಡಿಲೀಟ್ ಆಯ್ಕೆಯನ್ನು ತೆಗೆದು ಹಾಕಿದ್ದು, ಇನ್ಮುಂದೆ ಫೇಸ್ಬುಕ್, ಇನ್ಸ್ಟಾಗ್ರಾಂನಂತೆಯೇ ವಾಟ್ಸಾಪ್ ನಿಂದಲೂ ಲಾಗೌಟ್ ಮಾಡಬಹುದಾಗಿದೆ.
ಶೀಘ್ರದಲ್ಲಿಯೇ ಡಿಲೀಟ್ ಅಕೌಂಟ್ ಎಂಬ ಆಯ್ಕೆಯನ್ನ ತೆಗೆದು ಲಾಗೌಟ್ ಆಯ್ಕೆಯನ್ನ ನೀಡಲಿದ್ದೇವೆ ಎಂದು ವಾಟ್ಸಾಪ್ ಸಂಸ್ಥೆ ತಿಳಿಸಿದೆ. ಐಓಎಸ್ ಹಾಗೂ ಆಂಡ್ರಾಯ್ಡ್ ಗಳೆರಡಲ್ಲಿ ಈ ಆಯ್ಕೆ ಸಿಗಲಿದೆ ಎಂದು ತಿಳಿದೆ. ಇದರ ಜೊತೆಯಲ್ಲಿ ವಾಟ್ಸಾಪ್ ಮಲ್ಟಿ ಡಿವೈಸ್ ಸಪೋರ್ಟ್ ಎಂಬ ಇನ್ನೊಂದು ಆಯ್ಕೆಯನ್ನ ತರೋಕೆ ಸಿದ್ಧತೆ ನಡೆಸುತ್ತಿದೆ. ಈ ಹೊಸ ಆಯ್ಕೆಯಿಂದಾಗಿ ಬಳಕೆದಾರರು ಒಂದೇ ವಾಟ್ಸಾಪ್ ಖಾತೆಯನ್ನ ಎರಡ್ಮೂರು ಕಡೆ ಬಳಕೆ ಮಾಡಬಹುದಾಗಿದೆ ಎಂದು ತಿಳಿಸಿದೆ.
ವಾಟ್ಸಾಪ್ ಬಗ್ಗೆ ಮುಖ್ಯ ಮಾಹಿತಿ ಇಲ್ಲಿದೆ ನೋಡಿ
