ಶಿರಹಟ್ಟಿ: ರೈತರು ಕೃಷಿ ಜೊತೆಗೆ ಹೈನುಗಾರಿಕೆಗೆ ಹೆಚ್ಚು ಒತ್ತು ನೀಡುತ್ತಿದ್ದು, ಹಾಲು ಉತ್ಪಾದನೆಯಲ್ಲಿ ಭಾರತ ವಿಶ್ವದಲ್ಲಿಯೇ ಪ್ರಥಮ ಸ್ಥಾನದಲ್ಲಿದೆ ಎಂದು ಪಶು ಪಾಲನಾ ಮತ್ತು ಪಶುವೈದ್ಯ ಸೇವಾ ಇಲಾಖೆಯ ಉಪ ನಿರ್ದೇಶಕ ಅರವಿಂದ ಸರಾಫ್ ಹೇಳಿದರು.
ಸ್ಥಳೀಯ ಪಶು ಆಸ್ಪತ್ರೆಯಲ್ಲಿ ಗುರುವಾರ ನಡೆದ ಹೈನುಗಾರಿಕೆ ತರಬೇತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ರೈತರು ಹೈನುಗಾರಿಕೆಯಲ್ಲಿ ಇನ್ನು ಹೆಚ್ಚಿನ ತಾಂತ್ರಿಕತೆಯನ್ನು ಅಳವಡಿಸಿಕೊಳ್ಳುವುದರ ಮೂಲಕ ಹಾಲು ಉತ್ಪಾದನೆಯಲ್ಲಿ ದ್ವಿಗುಣ ಸಾಧಿಸಬೇಕು. ಈ ಭಾಗದ ರೈತರು ಕೃಷಿಯೊಂದಿಗೆ ಹೈನುಗಾರಿಕೆ ಮಾಡುವುದರಿಂದ ಮೇವಿನ ಕೊರತೆ ಇರುವುದಿಲ್ಲ. ಹೆಚ್ಚಾಗಿ ಜೋಳ, ಶೇಂಗಾ ಬೆಳೆಯುವುದರಿಂದ ಹಸುಗಳಿಗೆ ಪೌಷ್ಟಿಕ ಆಹಾರ ದೊರೆಯುತ್ತಿದ್ದು, ಹೆಚ್ಚು ಹಾಲು ನೀಡುತ್ತವೆ ಎಂದು ಹೇಳಿದರು.
ರೈತರು ದೇಶಿಯ ತಳಿಗಳ ಬಗ್ಗೆ ಹೆಚ್ಚಿನ ಒತ್ತು ನೀಡಬೇಕು. ದೇಶಿಯ ತಳಿಯ ಹಸುವಿನ ಹಾಲಿನಲ್ಲಿ ಂ-2 ಪ್ರೋಟೀನ್ ಇದ್ದು, ಇದರ ಸೇವನೆಯಿಂದ ಮನುಷ್ಯರ ಆರೋಗ್ಯ ವೃದ್ಧಿಸುತ್ತದೆ. ಅಲ್ಲದೆ ಹೃದಯಾಘಾತ, ಮಧುಮೇಹದಂತಹ ದೊಡ್ಡಕಾಯಿಲೆಗಳು ದೂರವಾಗುತ್ತವೆ. ಹೈನುಗಾರಿಕೆಯಲ್ಲಿ ತಾಂತ್ರಿಕತೆ ವೃದ್ಧಿಯಾಗಿದ್ದು, ಕೆಲವೇ ದಿನಗಳಲ್ಲಿ ಹಸುವಿನ ಗರ್ಭಧಾರಣೆಯಲ್ಲಿ ಹೆಣ್ಣುಕರು ಬೇಕೋ ಅಥವಾ ಗಂಡು ಕರು ಬೇಕೋ ಅದನ್ನೇ ಪಡೆದುಕೊಳ್ಳುವ ಅವಕಾಶವಿದೆ ಎಂದು ತಿಳೀಸಿದರು
ಜಿ.ಪಂ ಸದಸ್ಯ ಈಶಣ್ಣ ಹುಲ್ಲಲ್ಲಿ, ಪಶುವೈದ್ಯ ಎನ್.ಎ. ಹವಳದ, ಎಸ್.ಎಸ್. ಹೊಸಮಠ, ತಿಪ್ಪಣ್ಣ ತಳಕಲ್, ದಯಾನಂದ ಹಕ್ಕಾಪಕ್ಕಿ, ಸಿ.ಎಸ್. ಹೊಸಮನಿ, ಮಂಜುನಾಥ ಅಮರಾಪುರ ಮುಂತಾದವರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

You May Also Like

ಎರಡನೇ ಹಂತದ ಕೋವಿಡ್ ಪರಿಹಾರ ಪ್ಯಾಕೇಜ್ ಘೋಷಣೆ ಯಾವಾಗ?: ಸಿಎಂ ಹೇಳಿದ್ದೇನು?

ಬೆಂಗಳೂರು: ಈಗಾಗಲೇ ಕೋವಿಡ್ ಪರಿಹಾರ ಪ್ಯಾಕೇಜ್ ಘೋಷಣೆ ಮಾಡಿರುವ ಸಿಎಂ ಬಿ.ಎಸ್.ಯಡಿಯೂರಪ್ಪ, ಎರಡನೇ ಹಂತದ ಪರಿಹಾರ ಪ್ಯಾಕೇಜ್ ಘೋಷಣೆ ಮಾಡುವ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ. ಮೊದಲ ಹಂತದ ಪ್ಯಾಕೇಜ್ ಕುರಿತು ಸಾಕಷ್ಟು ಮನವಿಗಳು ಹಾಗೂ ಬೇಡಿಕೆಗಳು ವ್ಯಕ್ತವಾದ ಹಿನ್ನೆಲೆ ಎಲ್ಲರಿಗೂ ನ್ಯಾಯ ಒದಗಿಸುವ ನಿಟ್ಟಿನಲ್ಲಿ ಎರಡನೇ ಹಂತದ ಪ್ಯಾಕೇಜನ್ನು ಸಿಎಂ ಘೋಷಣೆ ಮಾಡಲಿದ್ದಾರೆ.

ಪಿಯುಸಿ: ಅನುತ್ತೀರ್ಣ ವಿದ್ಯಾರ್ಥಿಗಳಿಗೆ ಅವಕಾಶ

ಪಿಯುಸಿ ಅನುತ್ತೀರ್ಣ ವಿದ್ಯಾರ್ಥಿಗಳು ಓ.ಎಂ.ಆರ್ ಅರ್ಜಿಗಾಗಿ ಕಾಯದೆ ಫಲಿತಾಂಶ ಪಟ್ಟಿ ಆಧಾರದ ಮೇಲೆ ಅನುತ್ತೀರ್ಣ ವಿಷಯಗಳಿಗೆ ಪರೀಕ್ಷೆ ಬರೆಯಲು ಅವಕಾಶ ನೀಡಲಾಗಿದ್ದು, ಈ ಕೆಳಗಿನಂತೆ ಶುಲ್ಕ ಭರಣಾ ಮಾಡಲು ತಿಳಿಸಲಾಗಿದೆ.

ಗೊಲ್ಲರ ಅಭಿವೃದ್ಧಿ ನಿಗಮ ಸ್ಥಾಪನೆಗೆ ಒತ್ತಾಯ

ಅಖಂಡ ಕರ್ನಾಟಕ ಗೊಲ್ಲರ ಅಭಿವೃದ್ಧಿ ನಿಗಮ ಸ್ಥಾಪನೆಗೆ ಒತ್ತಾಯಿಸಿ ಗಜೇಂದ್ರಗಡ ಹಾಗೂ ರೋಣ ತಾಲೂಕಾ ಗೊಲ್ಲ ಸಮಾಜ ಬಾಂಧವರು ಪಟ್ಟಣದ ತಹಶೀಲ್ದಾರ ಮೂಲಕ ಸೋಮವಾರ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಿದರು.