ನವದೆಹಲಿ:
ಸೀತೆಯ ನೇಪಾಳ ಹಾಗೂ ರಾವಣನ ಲಂಕಾದಲ್ಲಿ ಪೆಟ್ರೋಲ್ ದರ ಏಕೆ ಅಗ್ಗವಾಗಿದೆ ಎಂದು ಸಮಾಜವಾದಿ ಪಕ್ಷದ ಸಂಸದ ವಿಶ್ವಂಭರ ಪ್ರಸಾದ್ ನಿಶಾದ್ ಬುಧವಾರ ರಾಜ್ಯಸಭೆಯಲ್ಲಿ ಪ್ರಶ್ನೆ ಮಾಡಿದರು.
ಕೇಂದ್ರ ಪೆಟ್ರೋಲಿಯಂ ಸಚಿವ ಧರ್ಮೇಂದ್ರ ಪ್ರಧಾನ್ ಅವರನ್ನು ಪ್ರಶ್ನಿಸಿದ ವಿಶ್ವಂಭರ ಪ್ರಸಾದ್, ಪೆಟ್ರೋಲ್ ದರವು ಸೀತಾ ಮಾತೆಯ ನೇಪಾಳ ಹಾಗೂ ರಾವಣರ ಲಂಕಾದಲ್ಲಿ ಅಗ್ಗವಾಗಿದೆ. ಹಾಗಿದ್ದರೆ ರಾಮ ಜನ್ಮಭೂಮಿ ಭಾರತದಲ್ಲಿ ಯಾವಾಗ ಕಡಿಮೆ ಮಾಡುತ್ತೀರಿ? ಎಂದು ಕೇಳಿದರು.
ಪೆಟ್ರೋಲ್ ಹಾಗೂ ಡೀಸೆಲ್ ದರ ಬುಧವಾರದಂದು ಮಗದೊಮ್ಮೆ ಸಾರ್ವಾಕಾಲಿಕ ದಾಖಲೆಯನ್ನು ತಲುಪಿತ್ತು. ಪೆಟ್ರೋಲ್‌ಗೆ ಪ್ರತಿ ಲೀಟರ್‌ಗೆ 30 ಪೈಸೆ ಹಾಗೂ ಡೀಸೆಲ್‌ಗೆ ಪ್ರತಿ ಲೀಟರ್‌ಗೆ 25 ಪೈಸೆ ಏರಿಕೆಗೊಂಡಿದ್ದವು.
ಬೆAಗಳೂರಿನಲ್ಲಿ ಪೆಟ್ರೋಲ್ ದರ ಪ್ರತಿ ಲೀಟರ್‌ಗೆ 90.53 ರೂ. ಹಾಗೂ ಡೀಸೆಲ್ ದರ ಪ್ರತಿ ಲೀಟರ್‌ಗೆ 82.40 ರೂ. ತಲುಪಿದೆ.
ಏತನ್ಮಧ್ಯೆ ಪ್ರತಿಕ್ರಿಯೆ ನೀಡಿರುವ ಪೆಟ್ರೋಲಿಯಂ ಸಚಿವ ಧರ್ಮೇಂದ್ರ ಪ್ರಧಾನ್, ಇಂಧನ ಬೆಲೆಗಳು ಅಂತರ ರಾಷ್ಟೀಯ ದರ ಆಧರಿಸಿ ನಿರ್ಧಾರವಾಗುತ್ತದೆ. ಹಾಗಿರುವಾಗ ಇಂಧನ ಬೆಲೆ ಸಾರ್ವಕಾಲಿಕ ಗರಿಷ್ಠ ಮಟ್ಟ ತಲುಪಿದೆ ಎಂದು ಅಪಪ್ರಚಾರ ಮಾಡುತ್ತಿರುವುದು ತಪ್ಪು ಎಂದು ಸಮರ್ಥಿಸಿಕೊಂಡರು.

Leave a Reply

Your email address will not be published. Required fields are marked *

You May Also Like

ಯುದ್ಧಕ್ಕೆ ಸಿದ್ಧ ಎಂಬ ಸಂದೇಶವನ್ನು ಚೀನಾಕ್ಕೆ ನೀಡುತ್ತಿದೆ ಭಾರತ?

ಲಡಾಖ್‌: ಲಡಾಖ್‌ನಲ್ಲಿ ಚೀನಾ ಸೇನೆಯಿಂದ ಗಡಿ ಕ್ಯಾತೆ ಮುಂದುವರೆದ ನಡುವೆಯೇ ಭಾರತ ಯುದ್ಧಕ್ಕೆ ಸಿದ್ಧ ಎಂಬ…

ಕೊರೊನಾ ಹೆಸರಿನಲ್ಲಿ ರಾಜ್ಯ ಸರ್ಕಾರದಿಂದ ಲೂಟಿ – ಆಮ್ ಆದ್ಮಿ!

ಬೆಂಗಳೂರು : ಕೊರೊನಾ ಹೆಸರಿನಲ್ಲಿ ರೂ. 10 ಸಾವಿರ ಕೋಟಿಗಳಷ್ಟು ಬೃಹತ್ ಹಗರಣದಲ್ಲಿ ಬಿಜೆಪಿ ಸರ್ಕಾರ ಭಾಗಿಯಾಗಿದೆ ಎಂದು ಆಮ್ ಆದ್ಮಿ ಪಕ್ಷ ಆರೋಪಿಸಿದೆ.

ದೇಶದ ಜನತೆಗೆ ಶುಭಾಶಯ ಕೋರಿದ ಮೋದಿ!

ನವದೆಹಲಿ : ಇಂದಿನಿಂದ ನವರಾತ್ರಿ ಆರಂಭವಾಗಿದ್ದು, ಪ್ರಧಾನಿ ನರೇಂದ್ರ ಮೋದಿ ಅವರು ದೇಶದ ಜನತೆಗೆ ಶುಭಾಶಯ ಕೋರಿದ್ದಾರೆ.

ನಾಡಪ್ರಭು ವಿಮಾನ ನಿಲ್ದಾಣದ ಟರ್ಮಿನಲ್‌–2 ಉದ್ಘಾಟಿಸಿದ ಮೋದಿ

ಉತ್ತರಪ್ರಭ ಸುದ್ದಿ ಬೆಂಗಳೂರ: ದೇವನಹಳ್ಳಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಹೊಸದಾಗಿ ನಿರ್ಮಾಣವಾಗಿರುವ ಟರ್ಮಿನಲ್ 2 ಅನ್ನು…