ಬೆಂಗಳೂರು : ಕೊರೊನಾ ಹೆಸರಿನಲ್ಲಿ ರೂ. 10 ಸಾವಿರ ಕೋಟಿಗಳಷ್ಟು ಬೃಹತ್ ಹಗರಣದಲ್ಲಿ ಬಿಜೆಪಿ ಸರ್ಕಾರ ಭಾಗಿಯಾಗಿದೆ ಎಂದು ಆಮ್ ಆದ್ಮಿ ಪಕ್ಷ ಆರೋಪಿಸಿದೆ.

ಹೋಮ್ ಐಸೋಲೇಷನ್ ಇರುವವರಿಗೆ ಕಿಟ್ ನೀಡಲಾಗುವುದು ಎಂದು ಸುಳ್ಳು ಹೇಳಿದೆ. ಈ ವಿಷಯದಲ್ಲಿ ರೂ. 150 ಕೋಟಿ ಹಣ ದೋಚಲಾಗಿದೆ ಎಂದು ಆಮ್ ಆದ್ಮಿ ಪಕ್ಷದ ರಾಜ್ಯ ಸಂಚಾಲಕ ಪೃಥ್ವಿ ರೆಡ್ಡಿ ಆರೋಪಿಸಿದ್ದಾರೆ.
ಕಾಲ್ ಸೆಂಟರ್‌ಗಳ ಮೂಲಕ ಸೋಂಕಿತರಿಗೆ ಕರೆ ಮಾಡುವ ವಿಷಯದಲ್ಲಿ ರೂ. 50 ಕೋಟಿ ಹಣ ದೋಚಲಾಗಿದೆ.

ಕೊರೊನಾ ತೊಲಗಿಸಲು ಇಷ್ಟು ಖರ್ಚು ಮಾಡಿದರೂ ರಾಜ್ಯದಲ್ಲಿ ಮಾತ್ರ ಸೋಂಕಿತರ ಸಂಖ್ಯೆ ಗಣನೀಯವಾಗಿ ಏರಿಕೆ ಕಾಣುತ್ತಿದೆ. 3ನೇ ಸ್ಥಾನದಲ್ಲಿದ್ದ ರಾಜ್ಯವು 2ನೇ ಸ್ಥಾನಕ್ಕೆ ಏರುತ್ತಲಿದೆ ಎಂದು ಆಮ್ ಆದ್ಮಿ ಪಕ್ಷ ವ್ಯಂಗ್ಯವಾಡುತ್ತಿದೆ.

ಕೊರೊನಾ ವಿಷಯದಲ್ಲಿ ದೆಹಲಿ ಮಾದರಿ ಅನುಸರಿಸಿ ಎಂದು ಸ್ವತಃ ಪ್ರಧಾನಿಗಳೇ ಎಲ್ಲ ರಾಜ್ಯಗಳಿಗೆ ಹೇಳಿದರೂ ನಮ್ಮ ರಾಜ್ಯ ಸರ್ಕಾರ ನಿರ್ಲಕ್ಷ್ಯ ಮಾಡುತ್ತಿದೆ. ವೈಯಕ್ತಿಕವಾಗಿ ನಾನೇ ನಮ್ಮ ರಾಜ್ಯದ ಆರೋಗ್ಯ ಮಂತ್ರಿಗಳಿಗೆ ಕರೆ ಮಾಡಿದರೂ ಸ್ಪಂದಿಸುತ್ತಿಲ್ಲ ಎಂದು ಆರೋಪಿಸಿದ್ದಾರೆ.

Leave a Reply

Your email address will not be published. Required fields are marked *

You May Also Like

ವಿಶಾಖಪಟ್ಟಣ ಘಟನೆ: ಮೃತ ಕುಟುಂಬಕ್ಕೆ ಕೋಟಿ ರೂ, ಪರಿಹಾರ ಘೋಷಣೆ

ವಿಷಾನಿಲ ದುರ್ಘಟನೆಗೆ ಸಂಬಂಧಿಸಿದಂತೆ ಮೃತರ ಕುಟುಂಬಕ್ಕೆ 1 ಕೋಟಿ ರೂಪಾಯಿ ಪರಿಹಾರ ಘೋಷಿಸಲಾಗಿದೆ.

ಕೊರೊನಾ ಸಂದಿಗ್ಧತೆ: ಸಿಎಂಗಳ ಜೊತೆ ಪ್ರಧಾನಿ ವಿಡಿಯೋ ಸಂವಾದ

ದೆಹಲಿ: ಪ್ರಧಾನಿ ನರೇಂದ್ರ ಮೋದಿಯವರು ಇಂದು ಮತ್ತು ನಾಳೆ ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳ ಸಿಎಂಗಳೊಂದಿಗೆ…

ಕೊರೋನಾ ಸೋಂಕಿನಿಂದ ಗುಣ ಹೊಂದಿದ 12 ದಿನದ ಮಗುವಿನ ಹೆಸರೇನು ಗೊತ್ತಾ?

ಒಂಭತ್ತು ದಿನದ ಮಗುವಿನಲ್ಲಿ ಕೊರೋನಾ ಪಾಸಿಟಿವ್ ಕಂಡು ಬಂದಿತ್ತು. ಇದೀಗ 12 ದಿನದ ಈ ಮಗು ಕೊರೋನಾ ಸೋಂಕಿನಿಂದ ಗುಣ ಹೊಂದಿದ್ದು ಮಗುವಿಗೆ ಇಂದು ಹೆಸರಿಡಲಾಗಿದೆ.