ನೆಲಮಂಗಲ : ಕುರುಬ ಸಮುದಾಯಕ್ಕೆ ಎಸ್ಟಿ ಮೀಸಲಾತಿ ಸಿಗುವವರೆಗೂ ನಮ್ಮ ಹೋರಾಟ ನಿಲ್ಲುವುದಿಲ್ಲ ಎಂದು ಸಚಿವ ಕೆ.ಎಸ್. ಈಶ್ವರಪ್ಪ ಹೇಳಿದ್ದಾರೆ.

ಕುರುಬರ ಸಮಾವೇಶದ ಹಿನ್ನೆಲೆಯಲ್ಲಿ ಸಿದ್ಧತೆ ಕುರಿತು ಅವಲೋಕಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯಾವ ಸಮಾಜಕ್ಕೂ ಥಟ್ ಎಂದು ಘೋಷಿಸಲು ಸಿಎ ಅವರಿಗೆ ಬರುವುದಿಲ್ಲ. ಕುಲಶಾಸ್ತ್ರ ಹಾಗೂ ಜನಜಾಗೃತಿಯ ಜೊತೆ ಹಲವು ದಾಖಲೆಗಳನ್ನು ನೀಡುವ ಮೂಲಕ ನಾವು ಎಸ್ಟಿ ಅವಕಾಶ ಪಡೆಯಬಹುದು ಎಂದು ಹೇಳಿದ್ದಾರೆ. 

ಹಿಂದು ಸಮಾಜದಲ್ಲಿ ಕುರುಬರಿಗೆ ಎಸ್ಟಿ ಸಿಕ್ಕರೆ ನ್ಯಾಯ ಸಿಕ್ಕಂತೆಯೇ. ಈ ಹೋರಾಟದಲ್ಲಿ ರಾಜ್ಯದ 60 ಲಕ್ಷ ಕುರುಬರು ಒಗ್ಗಟ್ಟಾಗಿ ಭಾಗವಹಿಸಿದ್ದಾರೆ. ನಮ್ಮ ಸಮುದಾಯಕ್ಕೆ ಎಸ್ಟಿ ಮೀಸಲಾತಿ ಸಿಗುವ ಸಾಧ್ಯತೆ ಇದೆ. ನಮಗೆ ನ್ಯಾಯ ಸಿಗದಿದ್ದರೆ ಮುಂದಿನ ದಿನಗಳಲ್ಲಿ ಇದಕ್ಕಿಂತ ಮೂರು ಪಟ್ಟು ಶಕ್ತಿ ಪ್ರದರ್ಶನವಾಗಲಿದೆ ಎಂದು ಹೇಳಿದ್ದಾರೆ. 

ಕುರುಬರ ಸಮಾವೇಶವು ಫೆ. 7ರಂದು ನಡೆಯಲಿದ್ದು, ಸಿದ್ಧತೆ ಕಾರ್ಯ ನಡೆಯುತ್ತಿದೆ. ಸಚಿವ ಈಶ್ವರಪ್ಪ ಅವರು ಸ್ಥಳ ವೀಕ್ಷಣೆ ಮಾಡಿದ್ದಾರೆ. ಸುಮಾರು 6 ಲಕ್ಷಕ್ಕೂ ಅಧಿಕ ಜನ ಸೇರುವ ಸಾಧ್ಯತೆ ದಟ್ಟವಾಗಿದೆ. 

Leave a Reply

Your email address will not be published. Required fields are marked *

You May Also Like

ಗದಗ ಜಿಲ್ಲೆ ಸೇರಿ ರಾಜ್ಯದ ಇಂದಿನ ಕೊರೊನಾ ಅಪ್ ಡೇಟ್

ಜಿಲ್ಲೆಯಲ್ಲಿಂದು 42 ಕೊರೊನಾ ಪಾಸಿಟಿವ್ ಪ್ರಕರಣ ಪತ್ತೆಯಾಗಿದ್ದು, ಈ ಮೂಲಕ ಒಟ್ಟು ಸೋಂಕಿತರ ಸಂಖ್ಯೆ 9742ಕ್ಕೆ ಏರಿಕೆಯಾಗಿದೆ. ಒಟ್ಟು ಸಕ್ರೀಯ 607 ಪ್ರಕರಣಗಳಿವೆ. ಇಂದು 111 ಜನರು ಗುಣಮುಖ ಹೊಂದಿ ಬಿಡುಗಡೆಯಾಗಿದ್ದು, ಈವರೆಗೆ ಒಟ್ಟು ಬಿಡುಗಡೆಯಾಗಿರುವ ಪ್ರಕರಣಗಳ ಸಂಖ್ಯೆ 9000. ಒಟ್ಟು ಕೊರೊನಾ ಸೋಂಕಿನಿಂದ ಮೃತಪಟ್ಟವರ ಸಂಖ್ಯೆ 135 ಆಗಿದೆ ಎಂದು ಆರೋಗ್ಯ ಇಲಾಖೆ ಹೆಲ್ಥ್ ಬುಲೆಟಿನ್ ತಿಳಿಸಿದೆ.

ಸಿದ್ಧರಾಮಯ್ಯ ಗೆ ಅಹಿಂದ ಮತದಾರರ ಬೆಂಬಲ

ಉತ್ತರಪ್ರಭ ಸುದ್ದಿ ಬಸವನಬಾಗೇವಾಡಿ: ಶಿವಾನಂದ ಪಾಟೀಲ ಎರಡೂ ಬಾರಿ ಬಸವನಬಾಗೇವಾಡಿ ಕ್ಷೇತ್ರದಲ್ಲಿ ಸ್ಪರ್ಧಿಸಿದಾಗ ಎರಡೂ ಬಾರಿ…

ನರಗುಂದದಲ್ಲಿ ಭೂ ಕುಸಿತ: ಜನರಲ್ಲಿ ಆತಂಕ.!

ನರಗುಂದ: ಇಲ್ಲಿನ ಶಂಕರಲಿಂಗ ಕಾಲೋನಿಯ ಅಂಬೋಜಿ ಪೇಟೆ ಅವರ ಮನೆ ಮುಂದೆ ಭೂ ಕುಸಿತವಾಗಿದೆ. ಬೆಳಿಗ್ಗೆ…