ಲಕ್ಷ್ಮೇಶ್ವರ: ತಾಲೂಕಿನ ಅಡರಕಟ್ಟಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಕ್ಕೆ ನಡೆದ ಆಡಳಿತ ಮಂಡಳಿ ಸದಸ್ಯರ ಚುನಾವಣೆಯಲ್ಲಿ ಅಧ್ಯಕ್ಷರಾಗಿ ವೀರಭದ್ರಪ್ಪ ಮ. ಶಿಗ್ಲಿ, ಉಪಾಧ್ಯಕ್ಷರಾಗಿ ಮಹಾಂತೇಶ ಬ. ಹವಳದ ಮತ್ತು ನಿರ್ದೇಶಕರಾಗಿ ಮರಬಸಪ್ಪ ಯ ಚಿಕ್ಕಣ್ಣವರ, ಬಸಪ್ಪ ಪಂ. ಸಗರದ, ಧರ್ಮಣ್ಣ ಮಾ. ಸಿದ್ಧಾಪುರ, ಸೋಮಣ್ಣ ಬ. ಭಂಗಿ, ಷಣ್ಮುಖಪ್ಪ ರು. ಬಡಿಗೇರ, ಕಲ್ಲಪ್ಪ ಹೊ. ಗಂಗಣ್ಣವರ, ಹಸನಸಾಬ ಖಾ. ತಾಡಪತ್ರಿ, ಹೊನ್ನಪ್ಪ ಬ. ಲಮಾಣಿ, ಲಕ್ಷ್ಮವ್ವ ಶೇ ಪಾಟೀಲ, ಮಹಾದೇವಿ ರಾ. ರೊಳ್ಳಿ ಅವಿರೋಧ ಆಯ್ಕೆಯಾಗಿದ್ದಾರೆ.

ಆಯ್ಕೆ ವೇಳೆ ಪಾಲ್ಗೊಂಡ ಅಡರಕಟ್ಟಿ, ಹರದಗಟ್ಟಿ, ಕೊಂಡಿಕೊಪ್ಪ ಗ್ರಾಮಗಳ ಸರ್ವಸದಸ್ಯರಿಗೂ ಹಿರಿಯರಿಗೂ ಸಂಘದ ಮಾಜಿ ಅಧ್ಯಕ್ಷರುಗಳಾದ ಮುದಿಯಪ್ಪ ಹವಳದ, ಚನ್ನಬಸಪ್ಪ ಹಳೆಮನಿ, ಮಹದೇವಪ್ಪ ಹವಳದ, ಬಸವಣ್ಣೆಪ್ಪ ರೊಳ್ಳಿ, ರಾಮಣ್ಣ ಚಿಕ್ಕಣ್ಣವರ, ಪ್ರಕಾಶ್ ಶಿರಹಟ್ಟಿ ಹಾಗು ಹಿರಿಯರಾದ ಶೇಖರಗೌಡ ಪಾಟೀಲ, ಚಂದ್ರಗೌಡ ಪಾಟೀಲ, ಶಂಕ್ರಣ್ಣ ಭಂಗಿ, ಟಾಕ್ರಪ್ಪ ಮಾಳಗಿಮನಿ, ತಾವರೆಪ್ಪ ಲಮಾಣಿ, ಗಣೇಶ ನಾಯಕ, ಸಂಘದ ಮುಖ್ಯಕಾರ್ಯನಿರ್ವಾಹಕ ನಿಂಗನಗೌಡ ಪ್ರಭುಗೌಡ ಪಾಟೀಲ ಮತ್ತು ಇಲಾಖೆಯ ಅಧಿಕಾರಿಗಳು ಬಸವರಾಜ ನಿಡಗುಂದಿ ಸೇರಿದಂತೆ ಇತರರು ಇದ್ದರು.

Leave a Reply

Your email address will not be published. Required fields are marked *

You May Also Like

ಗದಗ ಜಿಲ್ಲೆ: ಜೂನ್ 21- ಜುಲೈ18 :28 ದಿನದ ಕೋರೊನಾ ಕರಾಳತೆ : ದಿನಕ್ಕೆ 17-18 ಹೊಸ ಪಾಸಿಟಿವ್: 28 ದಿನದಲ್ಲಿ ಶೇ.89 ಹೆಚ್ಚಳ

ಕಳೆದ 28 ದಿನಗಳು ಗದಗ ಜಿಲ್ಲೆಯ ಪಾಲಿಗೆ ಕರಾಳ ದಿನಗಳು. ಈ ಅವಧಿಯಲ್ಲಿ ಸರಾಸರಿ ದಿನಕ್ಕೆ 17-18 ಹೊಸ ಪಾಸಿಟಿವ್ ಸೇರ್ಪಡೆಯಾಗಿವೆ. ಸೋಂಕಿತರ ಸಂಖ್ಯೆಯಲ್ಲಿ ಶೇ. 89ರಷ್ಟು ಹೆಚ್ಚಳವಾಗಿದೆ.

ಲಾರಿ ಡಿಕ್ಕಿ ಸ್ಥಳದಲ್ಲಿಯೇ ಯುವತಿ ಸಾವು

ದ್ವಿಚಕ್ರ ವಾಹನದಿಂದ ಗದುಗಿನ ರೈಲ್ವೆ ನಿಲ್ದಾಣಕ್ಕೆ ಬಿಟ್ಟು ಮರಳಿ ತನ್ನ ಊರಿಗೆ  ಬರುವ ಮಾರ್ಗ ಮದ್ಯದಲ್ಲಿ ಅಡವಿಸೋಮಾಪುರದ ಮಲ್ಲಿಕಾರ್ಜುನ ಮಠದ ಹತ್ತಿರ ರಬಸವಾಗಿ ಬಂದ ವಾಹನ ಡಿಕ್ಕಿ  ಹೊಡೆದು ಯುವತಿ  ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ರಾತ್ರಿ 10 ಘಂಟೆಗೆ ನಡೆದಿದೆ.

ಗಜೇಂದ್ರಗಡದಲ್ಲಿ ಮುಷ್ಕರ: ಪೊಲೀಸ್-ಪ್ರತಿಭಟನಾಕಾರರ ಮದ್ಯೆ ಮಾತಿನ ಚಕಮಕಿ

ರೈತ, ಕಾರ್ಮಿಕ, ವಿದ್ಯುತ್, ಎಪಿಎಂಸಿ ಕಾಯ್ದೆ, ಬೆಲೆ ನಿಯಂತ್ರಣ ಕಾಯ್ದೆ, ಭೂ ಸುಧಾರಣೆ ಕಾಯ್ದೆ ಸೇರಿದಂತೆ ಜನ ವಿರೋದಿ ನೀತಿ ಖಂಡಿಸಿ ರಾಷ್ಟ್ರವ್ಯಾಪಿ, ಕಾರ್ಮಿಕ, ರೈತ ಹಾಗೂ ವಿವಿಧ ಸಂಘಟನೆಗಳು ಕರೆ ನೀಡಿರುವ ಮುಷ್ಕರದ ಅಂಗವಾಗಿ ಗದಗ ಜಿಲ್ಲೆ ಗಜೇಂದ್ರಗಡದಲ್ಲಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು.

ರಾಜ್ಯದಲ್ಲಿಂದು 5072 ಕೊರೊನಾ ಪಾಸಿಟಿವ್, ಯಾವ ಜಿಲ್ಲೆಯಲ್ಲಿ ಎಷ್ಟು?

ರಾಜ್ಯದಲ್ಲಿಂದು 5072 ಕೊರೊನಾ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿವೆ. ಈ ಮೂಲಕ ರಾಜ್ಯದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 90942 ಕ್ಕೆ ಏರಿಕೆಯಾದಂತಾಗಿದೆ.