ಕನಕಪುರ:
ಜಮೀನಿನಲ್ಲಿ ಮೇಯುತ್ತಿದ್ದ ಸೀಮೆ ಹಸುವೊಂದು ನಾಡಬಾಂಬ್‌ ಜಿಗಿದ ಪರಿಣಾಮ ಅದರ ಬಾಯಿ ಛಿದ್ರಗೊಂಡಿರುವ ಘಟನೆ ತಾಲ್ಲೂಕಿನ ಕೆಬ್ಬಳ್ಳಿ ಗ್ರಾಮದಲ್ಲಿ ಭಾನುವಾರ ನಡೆದಿದೆ.
ಕೋಡಿಹಳ್ಳಿ ಹೋಬಳಿ ವ್ಯಾಪ್ತಿಯ ಕೆಬ್ಬಳ್ಳಿಯ ಕಾಶೀಗೌಡರಿಗೆ ಸೇರಿದ ಸೀಮೆಹಸು ಗಾಯಗೊಂಡಿದೆ. ಕಾಶೀಗೌಡ ಅವರು ತಮ್ಮ ಜಮೀನಿನಲ್ಲಿ ಹಸುವನ್ನು ಬೆಳಿಗ್ಗೆ ಮೇಯಲು ಬಿಟ್ಟು ಬಂದಿದ್ದಾಗ ಈ ಅವಘಡ ಸಂಭವಿಸಿದೆ.
ಅಕ್ಕಪಕ್ಕದ ಜಮೀನಿನಲ್ಲಿದ್ದ ರೈತರು ನೋಡಿಕೊಂಡು ಕಾಶೀಗೌಡ ಅವರಿಗೆ ಮಾಹಿತಿ ನೀಡಿದ್ದಾರೆ. ಈ ಸಂಬಂಧ ಅವರು ಕೋಡಿಹಳ್ಳಿ ಪೊಲೀಸ್‌ ಠಾಣೆಗೆ ದೂರು ನೀಡಿದ್ದಾರೆ.
ಕೋಡಿಹಳ್ಳಿ ಸಾತನೂರು, ಉಯ್ಯಂಬಳ್ಳಿ ಹೋಬಳಿಗಳು ಅರಣ್ಯ ಪ್ರದೇಶಕ್ಕೆ ಹೊಂದಿಕೊಂಡಿವೆ. ಈ ಭಾಗದಲ್ಲಿ ಕಳ್ಳಬೇಟೆ ಹೆಚ್ಚಾಗಿ ನಡೆಯುತ್ತದೆ. ಬೇಟೆಗಾರರು ಅರಣ್ಯದೊಳಗೆ ಹೋಗುವ ಬದಲು ಕಾಡಂಚಿನ ಜಮೀನುಗಳಲ್ಲಿ ನಾಡಬಾಂಬ್‌ (ಮದ್ದಿನ ಉಂಡೆ) ಇಟ್ಟು ಬೇಟೆಯಾಡುತ್ತಾರೆ. ಕಾಡುಪ್ರಾಣಿಗಳ ಬೇಟೆಗಾಗಿ ಇಟ್ಟಿರುವ ಉಂಡೆಗಳನ್ನು ಹಸುಗಳು ತಿಂದಾಗ ಅವುಗಳ ಬಾಯಿ ಛಿದ್ರಗೊಳ್ಳುತ್ತದೆ. ಇಂತಹ ಘಟನೆಗಳು ನಿರಂತರವಾಗಿ ನಡೆಯುತ್ತಿವೆ.
ಇಂತಹ ಘಟನೆಗಳು ನಡೆಯುತ್ತಿದ್ದರೂ ತಡೆಯುವಲ್ಲಿ ಅರಣ್ಯ ಮತ್ತು ಪೊಲೀಸ್‌ ಇಲಾಖೆ ವಿಫಲವಾಗಿದೆ. ಬಾಂಬ್‌ನಿಂದ ಛಿದ್ರಗೊಂಡಿರುವ ಹಸುವಿನ ಬಾಯಿಯನ್ನು ಸರಿಪಡಿಸಲು ಯಾವುದೇ ಕಾರಣಕ್ಕೂ ಸಾಧ್ಯವಿಲ್ಲ. ಹಸು ಜೀವಂತವಾಗಿ ಉಳಿಯುವುದು ಅಸಾಧ್ಯವಾಗಿದೆ. ಈ ರೀತಿಯಾಗಿ ಮದ್ದಿನ ಉಂಡೆಯಿಟ್ಟು ಮೂಕಪ್ರಾಣಿಗಳ ಜೀವ ತೆಗೆಯುವ ಕಳ್ಳಬೇಟೆಗಾರರನ್ನು ಮಟ್ಟಹಾಕಬೇಕು ಎಂದು ರೈತರು ಒತ್ತಾಯಿಸಿದ್ದಾರೆ.

Leave a Reply

Your email address will not be published. Required fields are marked *

You May Also Like

ವಾರದಲ್ಲಿ ಸಮಸ್ಯೆ ಬಗೆಹರಿಸಲು ಕರವೆ ಆಗ್ರಹ

ಮೂಲಭೂತ ಸೌಕರ್ಯಗಳನ್ನು ಒದಗಿಸುವಂತೆ ಒತ್ತಾಯಿಸಿ ಕರ್ನಾಟಕ ರಕ್ಷಣಾ ವೇದಿಕೆಯ ತಾಲೂಕಾ ಘಟಕದ ವತಿಯಿಂದ ಶನಿವಾರ ಹೆಬ್ಬಾಳ ಗ್ರಾಪಂ ಎದುರು ಪ್ರತಿಭಟನೆ ನಡೆಸಲಾಯಿತು.

ಇನ್ಮುಂದೆ ಪೊಲೀ‍‍ಸರಿಗೆ ವಾರದ ರಜೆ ಕಡ್ಡಾಯ

ಪೊಲೀಸರಿಗೆ ವಾರದ ರಜೆ ಕಡ್ಡಾಯಗೊಳಿಸುವಂತೆ ಡಿಜಿ ಮತ್ತು ಐಜಿಪಿ ಪ್ರವೀಣ್ ಸೂದ್​ ಸುತ್ತೋಲೆ ಹೊರಡಿಸಿದ್ದಾರೆ. ತುರ್ತು ಪರಿಸ್ಥಿತಿ ಬಿಟ್ಟು ಎಲ್ಲ ಸಂದರ್ಭದಲ್ಲಿ ವಾರದ ರಜೆ‌ ಕಡ್ಡಾಯವಾಗಿ ನೀಡಬೇಕು ಎಂದು ವಲಯ ಐಜಿಪಿ ಮತ್ತು ಎಸ್ ಪಿ ಗಳಿಗೆ ಆದೇಶ ಹೊರಡಿಸಿದ್ದಾರೆ.

ಲಾಕ್ ಡೌನ್ ವಿಸ್ತರಣೆಯ ನಿರ್ಧಾರದ ಕುರಿತು ಸಿಎಂ ಹೇಳಿದ್ದೇನು?

ಬೆಂಗಳೂರು: ಜೂನ್ 7ರ ವರೆಗೆ ಎಂದಿನಂತೆ ಲಾಕ್ಡೌನ್ ಇರುತ್ತದೆ. ಜೂನ್ 7ರ ನಂತರ ಲಾಕ್ಡೌನ್ ಪ್ರಶ್ನೆ ಉದ್ಭವಿಸಲ್ಲ ಎಂದೆನಿಸುತ್ತದೆ. ಆದರೆ ರಾಜ್ಯದ ಸ್ಥಿತಿಗತಿ ನೋಡಿಕೊಂಡು ಜೂನ್ 5 ರಂದು ಲಾಕ್ ಡೌನ್ ವಿಸ್ತರಣೆಯ ಕುರಿತು ನಿರ್ಧರಿಸಲಾಗುತ್ತದೆ ಎಂದು ಸಿಎಂ ಬಿ.ಎಸ್.ಯಡಿಯೂರಪ್ಪ ಹೇಳಿದರು.

ಮೋದಿ ಮಾತು ನಿರಾಶದಾಯಕವಾಗಿವೆ

ದೇಶವನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ ಅವರ ಭಾಷಣ ಅತ್ಯಂತ ನಿರಾಶದಾಯಕ ಮಾತಾಗಿವೆ ಎಂದು ಸಿದ್ದರಾಮಯ್ಯ ತಮ್ಮ ಅಧಿಕೃತ ಟ್ವೀಟರ್ ಖಾತೆಯಲ್ಲಿ ಟ್ವೀಟ್ ಮಾಡುವ ಮೂಲಕ ತಮ್ಮ ಅಸಮಾಧಾನ ವ್ಯಕ್ತಪಡಿಸಿದ್ದಾರೆ.