ಕೊರೊನಾದಂತಹ ಗಂಡಾಂತರಗಳು ಇನ್ನೂ ಇವೆಯಂತೆ!

ಬೆಂಗಳೂರು : ಐದು ವರ್ಷಗಳ ಹಿಂದೆಯೇ ಕೊರೊನಾ ವೈರಸ್ ನಂತಹ ಗಂಡಾಂತರದ ಬಗ್ಗೆ ಎಚ್ಚರಿಕೆ ನೀಡಿದ್ದ ಉದ್ಯಮಿ ಬಿಲ್ ಗೇಟ್ಸ್ ಈಗ ಮತ್ತೆ ಎರಡು ಗಂಡಾಂತರಗಳ ಬಗ್ಗೆ ಎಚ್ಚರಿಕೆ ನೀಡಿದ್ದಾರೆ.

ಬಿಲ್ ಗೇಟ್ಸ್ ಅವರು 2015ರಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಕೊರೊನಾ ವೈರಸ್ ನಂತಹ ಸಾಂಕ್ರಾಮಿಕದ ಕುರಿತು ಮಾತನಾಡಿದ್ದರು. ಮುಂದೊಂದು ದಿನ ಹರಡುವ ಸೋಂಕಿನಿಂದ ಮನೆ ಮನೆಗೂ ಸಂಕಷ್ಟ ಎದುರಾಗಲಿದೆ ಎಂಬ ಎಚ್ಚರಿಕೆ ನೀಡಿದ್ದರು. ಅಲ್ಲದೇ, ಇಂತಹ ಸೋಂಕುಗಳನ್ನು ಮೆಟ್ಟಿ ನಿಲ್ಲಲು ಜಗತ್ತು ಸಿದ್ಧವಾಗಬೇಕು ಎಂದು ಹೇಳಿದ್ದರು. 

ಆದರೆ, ಇತ್ತೀಚೆಗೆ ಯೂಟ್ಯೂಬ್ ಚಾನೆಲ್ ವೊಂದರಲ್ಲಿ ಅವರು ಮತ್ತೆ ಇಂತಹ ಗಂಡಾಂತರಗಳ ಬಗ್ಗೆ ಮಾತನಾಡಿದ್ದಾರೆ. ಉಸಿರಾಟದ ಕಾಯಿಲೆ ಸೃಷ್ಟಿಸುವ ಸೋಂಕುಗಳು ಆಗಾಗ ಬರುತ್ತವೆ. ಇವು ತುಂಬಾ ಅಪಾಯಕಾರಿ. ಈ ಸಾಂಕ್ರಾಮಿಕ ಸೋಂಕುಗಳಿಂದ ಜನರು ಪ್ರತಿ ವರ್ಷ ಸಾಯುತ್ತಲೇ ಇದ್ದಾರೆ. ಹೀಗಾಗಿ ಬಿಕ್ಕಟ್ಟು ದೊಡ್ಡದಾಗುವ ಮೊದಲೇ ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬೇಕು ಎಂದು ಹೇಳಿದ್ದಾರೆ. ಅಲ್ಲದೇ, ಜೈವಿಕ ಹಾನಿಯಾಗುವ ಸಾಧ್ಯತೆ ದಟ್ಟವಾಗಿದೆ ಎಂದು ಅವರು ಹೇಳಿದ್ದಾರೆ. 

Exit mobile version