ಲಕ್ಷ್ಮೇಶ್ವರ: ಬ್ಲಾಕ್ ಯೂತ್ ಕಾಂಗ್ರೆಸ್ ಅಧ್ಯಕ್ಷರಾಗಿ ಆಯ್ಕೆಯಾದ ಸರ್ಫರಾಜ್ ಸೂರಣಗಿಯವರನ್ನು ಜಿಲ್ಲಾ ಕಾಂಗ್ರೆಸ್ ಸಮಿತಿಯ ಮಾಜಿ ಅಧ್ಯಕ್ಷ ಹಾಗೂ ಮಾಜಿ ಶಾಸಕ ಜಿ.ಎಸ್.ಗಡ್ಡದೇವರಮಠ ಅಭಿನಂದಿಸಿದರು.
ಈ ಸಂದರ್ಭದಲ್ಲಿ ಪುರಸಭೆ ಮಾಜಿ ಅಧ್ಯಕ್ಷ ರಾಜೀವ್ ಜಿ ಕುಂಬಿ, ಪುರಸಭೆ ಸದಸ್ಯರುಗಳಾದ ಫಿರ್ದೋಸ್ ಆಡೂರ್, ವಿಜಯ ಕರಡಿ, ಬುಡ್ಡಾಸಾಬ್ ಹವಾಲ್ದಾರ್, ಕಾಂಗ್ರೆಸ್ ಪಕ್ಷದ ಮುಖಂಡರಾದ ಈರಣ್ಣ ಅಂಕಲಕೋಟಿ, ಮುಕ್ತಿಯಾರ್ ಗದಗ, ನೀಲಪ್ಪ ಪಡಿಗೇರಿ, ಅಂಬರೀಶ್ ತೆಂಬಿನಮನಿ, ರಾಜು ಬೆಂಚಳ್ಳಿ, ಹಸನ್ ಜಂಗ್ಲಿ ಹಾಗೂ ಇನ್ನೂ ಅನೇಕರು ಕಾಂಗ್ರೆಸ್ ಕಾರ್ಯಕರ್ತರು ಭಾಗವಹಿಸಿದ್ದರು.