ಲಕ್ಷ್ಮೇಶ್ವರ: ತಾಲೂಕಿನಲ್ಲಿ ನಿಗದಿಯಾಗಿದ್ದ 13 ಗ್ರಾಪಂ ಗಳ ಅಧ್ಯಕ್ಷ-ಉಪಾಧ್ಯಕ್ಷರ ಚುನಾವಣೆಯಲ್ಲಿ ಬಾಲೇಹೊಸೂರು ಗ್ರಾಪಂ ಹೊರತು ಪಡಿಸಿ ಉಳಿದ 12 ಗ್ರಾ.ಪಂ ಗಳ ಅಧ್ಯಕ್ಷ-ಉಪಾಧ್ಯಕ್ಷರ ಆಯ್ಕೆ ಜರುಗಿತು.

ಸೂರಣಗಿ ಗ್ರಾಪಂಗೆ ಅಧ್ಯಕ್ಷರಾಗಿ ಶೇಖವ್ವ ಎನ್.ದೊಡ್ಡಗೊಣ್ಣನವರ, ಉಪಾಧ್ಯಕ್ಷರಾಗಿ ಶಂಕ್ರಪ್ಪ ಶಿರನಹಳ್ಳಿ ಆಯ್ಕೆಯಾಗಿದ್ದಾರೆ. ಅಡರಕಟ್ಟಿ ಗ್ರಾ.ಪಂಗೆ ಅಧ್ಯಕ್ಷರಾಗಿ ನಿಂಗಪ್ಪ ಪ್ಯಾಟಿ, ಉಪಾಧ್ಯಕ್ಷರಾಗಿ ಪವಿತ್ರ ಗಡ್ಡೆಪ್ಪಣ್ಣವರ. ಗೊಜನೂರ ಗ್ರಾ.ಪಂಗೆ ಅಧ್ಯಕ್ಷರಾಗಿ ನೀಲವ್ವ ಈರಣ್ಣಗೌಡ ಪಾಟೀಲ್, ಉಪಾಧ್ಯಕ್ಷರಾಗಿ ಸುಶೀಲವ್ವ ತಳವಾರ, ಯಳವತ್ತಿ ಗ್ರಾ.ಪಂ.ಅಧ್ಯಕ್ಷರಾಗಿ ತುಳಜವ್ವ ಭಜಂತ್ರಿ, ಉಪಾಧ್ಯಕ್ಷರಾಗಿ ಶಿವಯೋಗಿ ಹೊಸಕೇರಿ ಆಯ್ಕೆಯಾಗಿದ್ದಾರೆ.

ದೊಡ್ಡೂರ ಗ್ರಾಪಂಗೆ ಅಧ್ಯಕ್ಷರಾಗಿ ನೀಲವ್ವ ಕಟಗಿ, ಚಂದ್ರು ಇಳಗೆರ ಉಪಾಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಮಾಡಳ್ಳಿ ಗ್ರಾಪಂ‌ಗೆ ಅಧ್ಯಕ್ಷರಾಗಿ ಬೀಬಿಜಾನ ನಧಾಪ, ಕತ್ತೂರವ್ವ ಮ್ಯಾಗೇರಿ ಉಪಾಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಗೋನಾಳ ಗ್ರಾ.ಪಂ ಅಧ್ಯಕ್ಷರಾಗಿ ಸುಶೀಲವ್ವ ಮರಿಲಿಂಗನಗೌಡರ, ಉಪಾಧ್ಯಕ್ಷರಾಗಿ ಸುಧಾ ಜಿ.ಮಾದರ ಆಯ್ಕೆಯಾಗಿದ್ದಾರೆ.

 ಪು.ಬಡ್ನಿ ಗ್ರಾ.ಪಂಗೆ ಅಧ್ಯಕ್ಷರಾಗಿ ಅಶೋಕ ಮರಿಹೊಳಣ್ಣವರ, ಉಪಾಧ್ಯಕ್ಷರಾಗಿ ಶಾಂತವ್ವ ಬಟಕುರ್ಗಿ. ಆದರಹಳ್ಳಿ ಗ್ರಾ.ಪಂ ಅಧ್ಯಕ್ಷರಾಗಿ ಹೊನ್ನಪ್ಪ ವಡ್ಡರ, ಉಪಾಧ್ಯಕ್ಷರಾಗಿ ತಿಪ್ಪವ್ವ ಲಮಾಣಿ. ಹುಲ್ಲೂರ ಗ್ರಾ.ಪಂ‌ಗೆ ಅಧ್ಯಕ್ಷರಾಗಿ ಶಿವಣ್ಣ ಬಸಾಪೂರ, ಉಪಾಧ್ಯಕ್ಷರಾಗಿ ಮರಿಯವ್ವ ಹರಿಜನ ಆಯ್ಕೆಯಾಗಿದ್ದಾರೆ. ಶಿಗ್ಲಿ ಗ್ರಾಪಂ ಅಶೋಕಯ್ಯ ಮುಳಗುಂದಮಠ ಅಧ್ಯಕ್ಷರಾಗಿ , ಉಪಾಧ್ಯಕ್ಷರಾಗಿ ಯಲಪ್ಪ ತಳವಾರ. ರಾಮಗೇರಿ ಗ್ರಾ.ಪಂಗೆ ಅಧ್ಯಕ್ಷರಾಗಿ ಅಶೋಕ ಎಂ.ಕಾಳೆ, ಉಪಾಧ್ಯಕ್ಷರಾಗಿ ಅಡವಿಯಕ್ಕ ಬೇಟಗೇರಿ ಆಯ್ಕೆಯಾಗಿದ್ದಾರೆ.

Leave a Reply

Your email address will not be published. Required fields are marked *

You May Also Like

ಅಮಿತ್ ಶಾ ವಿಡಿಯೋ ಸೋಶಿಯಲ್ ಮಿಡಿಯಾದಲ್ಲಿ ಹಂಚಿಕೊಂಡ ಪ್ರಕಾಶ್ ರೈ

ವಿಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿರುವ ಬಹುಭಾಷಾ ನಟ ಪ್ರಕಾಶ್ ರೈ, ಎಂತಹ ಅವಮಾನ ಸುಳ್ಳಿಗೇ ಸುಳ್ಳು ಹೇಳಲಾಗುತ್ತಿಲ್ಲ ಎಂದು ಟ್ವೀಟ್ ಮಾಡಿದ್ದಾರೆ.

ಬಿಜೆಪಿ ಸರ್ಕಾರದಲ್ಲಿ ಯೋಧರಿಗಿಲ್ಲ ಪ್ರಾಮುಖ್ಯತೆ : ಕಾಂಗ್ರೆಸ್ ಟೀಕೆ

ಬಿಜೆಪಿಯ ಹಮ್ ದೋ ಹಮಾರೆ ದೋ ಸರ್ಕಾರದಲ್ಲಿ ಅಂಬಾನಿಗಿರುವ ಪ್ರಾಮುಖ್ಯತೆ ಯೋಧರಿಗಿಲ್ಲ ಎಂದು ಕಾಂಗ್ರೆಸ್ ಪಕ್ಷ ತನ್ನ ಅಧಿಕೃತ ಟ್ವೀಟರ್ ಖಾತೆಯಲ್ಲಿ ಟ್ವೀಟ್ ಮಾಡುವ ಮೂಲಕ ಕೇಂದ್ರ ಸರ್ಕಾರಕ್ಕೆ ಟೀಕಿಸಿದೆ.

ಉಪಚುನಾವಣೆ ಬಳಿಕ ಸಚಿವ ಸಂಪುಟ ವಿಸ್ತರಣೆ: ಸಿಎಂ

ಬೈ ಎಲೆಕ್ಷನ್ ಬಳಿಕ ಸಂಪುಟ ಸರ್ಜರಿ ಬಗ್ಗೆ ಸ್ಪಷ್ಟತೆ ಸಿಗಲಿದೆ. ಈ ವಿಚಾರದ ಬಗ್ಗೆ ಚರ್ಚೆ ಮಾಡಲು ನಾನು ದೆಹಲಿಗೆ ಹೋಗುತ್ತಿದ್ದೇನೆ. ಇದಾದ ಬಳಿಕ ಸಂಪುಟ ಪುನಾರಚನೆಯೋ, ವಿಸ್ತರಣೆಯೋ ಎಂಬುದು ತಿಳಿಯುತ್ತದೆ ಎಂದು ತಿಳಿಸಿದರು.

ಯುವಜನ ಸಂಕಲ್ಪ ಯಾತ್ರೆಗೆ ಅದ್ದೂರಿ ಚಾಲನೆ ಯುವಜನತೆಯಲ್ಲಿ ಉಕ್ಕಿದ ದೇಶ ಭಕ್ತಿ

ಆಲಮಟ್ಟಿ : ರಾಷ್ಟ್ರಧರ್ಮ ದೃಷ್ಟಾರ,ನೈಷ್ಟಿಕ ಬ್ರಮ್ಮಚಾರಿ,ಸಮಾಜಮುಖಿಯ ಅದಮ್ಯ ಚೇತನ, ಕನಾ೯ಟಕ ಗಾಂಧಿ ಹಡೇ೯ಕರ ಮಂಜಪ್ಪನವರ ಕರ್ಮಭೂಮಿಯಲ್ಲಿಂದು…