ರಿಯಾಜ್ ಓಲೇಕಾರ್

ಮುಂಡರಗಿ: ತಾನು ಬೆಳೆದ ಬೆಳೆ ತನ್ನ ಬದುಕು ಬಂಗಾರವಾಗಿಸುತ್ತದೆ ಎಂದು ನಂಬಿದ ಅನ್ನದಾನಿಗೆ ಭಾರಿ ನಿರಾಶೆಯಾಗಿದೆ. ಬಿಳಿ ಗೋವಿನ ಜೋಳ ಬದುಕಿನಲ್ಲಿ ಬೆಳಕು ಚೆಲ್ಲುತ್ತೆ ಎಂಬ ವಿಶ್ವಾಸದಲ್ಲಿ ರೈತನಿಗೆ ಬಿಳಿ ಗೋವಿನ ಜೋಳ ಕೂಡ ಉತ್ತಮ ಧಾರಣೆ ನೀಡದ ಹಿನ್ನೆಲೆ ಬದುಕಿಗೆ ಕತ್ತಲೆ ಆವರಿಸಿದಂತಾಗಿದೆ. ಇದರಿಂದ ಉತ್ತಮ ಧಾರಣೆಯ ನಿರೀಕ್ಷೆಯಲ್ಲಿದ್ದ ರೈತರು ಅಸಹಾಯಕರಾಗಿ ಕೈಚೆಲ್ಲಿ ಕುಳಿತಿದ್ದಾರೆ.

          ಯಾಕೋ ಗೊತ್ತಿಲ್ಲ ಬಯಲುಸಿಮೆ ನಾಡಿನ ರೈತರ ಹಣೆ ಬರಹವೆ ಸರಿ ಇಲ್ಲ. ಅತೀವೃಷ್ಟಿಯಿಂದ ಹಾನಿಯಾಗಿ ಅಳಿದುಳಿದ ಬೆಳೆಗೆ ಮಾರುಕಟ್ಟೆಯಲ್ಲಿ ಬೆಲೆಯು ಇಲ್ಲ. ಬೆಳೆದ ಬಿಳಿ ಗೋವಿನ ಜೋಳಕ್ಕೆ ಖರೀದಿಗಾರರು ಇಲ್ಲದೆ ಅನ್ನದಾತರು ಕಂಗಾಲಾಗಿದ್ದಾರೆ. ಕಳೆದ 25 ವರ್ಷಗಳಿಂದ ಪ್ರಮುಖ ಬೆಳೆಯಾಗಿ ಬಿಳಿ ಗೋವಿನ ಜೋಳ ಬೆಳೆಯುತ್ತಿದ್ದ, ರೈತರು ಗೋಳಾಡುತ್ತಿದ್ದಾರೆ. ಕೂಡಲೆ ಸರ್ಕಾರ ಗೋವಿನ ಜೊಳದ ಬೆಳೆಗೆ ಬೆಂಬಲ ಬೆಲೆ ನೀಡುವಂತೆ ಒತ್ತಾಯಿಸಿದ್ದಾರೆ ಈ ಭಾಗದ ರೈತರು.

          ಗದಗ ಜಿಲ್ಲೆಯ ಮುಂಡರಗಿ ತಾಲೂಕಿನ ಅತ್ತಿಕಟ್ಟಿ ಗ್ರಾಮದಲ್ಲಿ ಈಗಾಗಲೇ ಉತ್ತಮ ಧಾರಣೆ ಸಿಗಬಹುದೆಂದು ನಂಬಿ ಕುಳಿತ ರೈತರು ಆತಂಕಕ್ಕೀಡಾಗಿದ್ದಾರೆ. ಈ ಗ್ರಾಮದಲ್ಲಿ ಅತೀ ಹೆಚ್ಚಾಗಿ ಬಿಳಿಗೋವಿನ ಜೋಳ ಬೆಳೆಯುತ್ತಾರೆ. ಕಳೆದ ವರ್ಷ ಉತ್ತಮ ಮಳೆಯಾಗಿ ಸಮೃದ್ದಿ ಬೆಳೆಯು ಬಂದಿತ್ತು. ಜೊತೆಗೆ ಬೆಲೆಯು ಬಂದಿತ್ತು. ಆದರೆ ಈ ವರ್ಷ ಅತೀವೃಷ್ಟಿ ಯಿಂದಾಗಿ ಬೆಳೆಯು ಹಾನಿಯಾಗಿದೆ. ಜೊತೆಗೆ ಇಳುವರಿಯು ಕಡಿಮೆ ಬಂದಿದೆ. ಸಾಲಾಸುಲಾ ಮಾಡಿ ಬಿಳಿ ಗೋವಿನ ಜೋಳ ಬೆಳೆದ ರೈತರು, ಖರೀದಿದಾರರು ಇಲ್ಲದಿರುವ ಕಾರಣಕ್ಕೆ ಗೋಳಾಡುತ್ತಿದ್ದಾರೆ. ಕೇಂದ್ರ ಹಾಗೂ ರಾಜ್ಯ ಸರ್ಕಾರ ಗೋವಿನ ಜೋಳದ ಬೆಳೆಗೆ ಬೆಂಬಲ ಬೆಲೆ ನೀಡಿ ಖರೀದಿ ಕೇಂದ್ರ ತೆರೆಯುವಂತೆ ಸಾಕಷ್ಟು ಬಾರಿ ಜಿಲ್ಲಾಧಿಕಾರಿಗಳಿಗೆ  ಮನವಿ ಮಾಡಿಕೊಂಡಿದ್ದಾರೆ. ಆದರೆ ಯಾವುದೇ ಪ್ರಯೋನವಾಗಿಲ್ಲ ಎನ್ನುವುದು ಅನ್ನದಾತ ಅಳಲು. ಸರ್ಕಾರ ನಮಗೆ ಬೆಂಬಲ ಬೆಲೆಯಲ್ಲಿ ಖರೀದಿ ಕೇಂದ್ರ ತೆರೆಯಬೇಕು ಎನ್ನುವುದು ರೈತರ ಆಗ್ರಹವಾಗಿದೆ.

ಈಗಾಗಲೇ ಬಿಳಿ ಗೋವಿನಜೋಳ ಕೈಹಿಡಿಯಬಹುದೆಂಬ ನಂಬಿಕೆಯಿಂದ ಬೆಳೆದು ರಾಶಿ ಮಾಡಿ ನಮ್ಮ ಹೊಲಗಳಲ್ಲಿಯೇ ಹಾಕಿಕೊಂಡು ಕುಳಿತಿದ್ದೇವೆ. ಖರೀದಿದಾರರಿಲ್ಲದೇ ಹಾಗು ಉತ್ತಮ ಬೆಲೆ ಇಲ್ಲದ ಕಾರಣ ಬಿಳಿ ಗೋವಿನ ಜೋಳ ಬೆಳೆದು ಕಂಗಾಲಾಗಿದ್ದೇವೆ. ಸರ್ಕಾರವೇ ಖರೀದಿ ಕೇಂದ್ರ ತೆರೆದು ಬೆಂಬಲ ಬೆಲೆಗೆ ಗೋವಿನ ಜೋಳ ಖರೀದಿಸಬೇಕು.

–        ರಾಮಣ್ಣ, ಅತ್ತಿಕಟ್ಟಿ ಗ್ರಾಮದ ರೈತ

          ಜಿಲ್ಲೆಯಲ್ಲಿ 84 ಸಾವಿರ ಹೆಕ್ಟರ್ ನಷ್ಟು ಗೋವಿನ ಜೋಳದ ಬೆಳೆ ಬೆಳೆದಿದ್ದಾರೆ. ಅದರಲ್ಲಿ 20 ಸಾವಿರ ಹೆಕ್ಟರ್ ನಷ್ಟು ಬಿಳಿ ಗೋವಿನ ಜೋಳ ಬೆಳೆಯಲಾಗಿದೆ. ಗದಗ, ಶಿರಹಟ್ಟಿ, ಮುಂಡರಗಿ, ನರಗುಂದ ಸೇರಿದಂತೆ ಜಿಲ್ಲೆಯಲ್ಲಿ ವಿವಿದೆಡೆ ರೈತರು ಗೋವಿನ ಜೋಳ ಬೆಳೆದಿದ್ದಾರೆ. ಈ ವರ್ಷ ಸೂಕ್ತ ಬೆಳೆ ಸಿಗದೆ ಅನ್ನದಾತರ ಸಮೂಹ ಗೋಳಾಡುತ್ತಿದೆ. ಎಕರೆ ಗೋವಿನ ಜೋಳ ಬೆಳೆಯಲು ಸುಮಾರು 20 ಸಾವಿರ ಖರ್ಚು ಮಾಡಿದ್ದಾರೆ. ಖರ್ಚು ಮಾಡಿದ ಹಣ ಸಹ ಕೈಸೇರುವ ಲಕ್ಷಣ ಕಾಣುತ್ತಿಲ್ಲ ಎಂದು ರೈತರು ಪರದಾಡುತ್ತಿದ್ದಾರೆ. ಗೋವಿನ ಜೋಳವನ್ನು ರಾಶಿ ಮಾಡಿದ ಜಾಗೆಯಿಂದ ಸಹ ತೆಗೆದಿಲ್ಲ. ಇದರಿಂದ ಜಮೀನಿನಲ್ಲಿಯೇ ಬೆಳೆ ಹಾನಿಯಾಗುತ್ತಿವೆ.

ರೈತರಿಗೆ ಸರ್ಕಾರ ಬೆಂಬಲ ಬೆಲೆ ನೀಡಿ ಖರೀದಿ ಕೇಂದ್ರ ತೆರೆಯ ಬೇಕು ಎನ್ನುವುದು ಬಿಳಿ ಗೋವಿನಜೋಳ ಬೆಳೆಗಾರರ ಆಗ್ರಹವಾಗಿದೆ. ಅನ್ನದಾತರು ಎಷ್ಟೇ ಕಷ್ಟ ಪಟ್ಟು ಬೆಳೆ ಬೆಳೆದರೂ ಅವರಿಗೆ ಮಾತ್ರ ಮಾರುಕಟ್ಟೆಯಲ್ಲಿ ಬೆಳೆದ ಬೆಳೆಯ ತಕ್ಕ ಶ್ರಮಕ್ಕೆ ಬೆಲೆ ಸಿಗದೆ ಕಂಗಾಲಾಗಿದ್ದಾರೆ ರೈತರು.

Leave a Reply

Your email address will not be published. Required fields are marked *

You May Also Like

ಶಿಘ್ರ ಆರಂಭವಾಗಲಿವೆ ದೇವಸ್ಥಾನಗಳು?

ಮುಂದಿನ ವಾರದಿಂದ ಭಕ್ತರಿಗೆ ದೇವರು ದರ್ಶನ ಕರುಣಿಸುವ ಸಾಧ್ಯತೆ ಇದೆ. ಸಾಮಾಜಿಕ ಅಂತರ, ಮಾಸ್ಕ್ ಬಳಕೆ ಕಡ್ಡಾಯ ಮಾಡಲಾಗುತ್ತಿದ್ದು ತೀರ್ಥ, ಪ್ರಸಾದಗಳಿಗೆ ಬ್ರೇಕ್ ಬೀಳುವ ಸಾದ್ಯತೆ ಇದೆ.

ಬೈಕ್ ಗೆ ಲಾರಿ ಡಿಕ್ಕಿ: ಎಸ್.ಎಸ್.ಎಲ್.ಸಿ 3 ವಿದ್ಯಾರ್ಥಿಗಳ ಸ್ಥಿತಿ ಗಂಭೀರ

ಮುಂಡರಗಿ: ಎಸ್ಎಸ್ಎಲ್ ಸಿ ಪರೀಕ್ಷೆ ಮುಗಿಸಿ‌ ಹೊರಟಿದ್ದ ವಿದ್ಯಾರ್ಥಿಗಳಿಗೆ ಲಾರಿ ಡಿಕ್ಕಿ ಹೊಡೆದ ಪರಿಣಾಮ ಮೂವರು…

ವಿಧಾನ ಪರಿಷತ್ ಚುನಾವಣೆ: ಕಾಂಗ್ರೆಸ್ ಅಭ್ಯರ್ಥಿಗಳ ಆಯ್ಕೆ

ಬೆಂಗಳೂರು: ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರ ಒಪ್ಪಿಗೆಯ ಮೇರೆಗೆ ವಿಧಾನ ಪರಿತ್ತಿಗೆ ಕಾಂಗ್ರೆಸ್ ಪಕ್ಷ…