ಹೆಚ್ಚಿನ ಬಸ್ ಓಡಾಟಕ್ಕೆ ಒತ್ತಾಯಿಸಿ ಮನವಿ

ಲಕ್ಷ್ಮೇಶ್ವರ: ಪಟ್ಟಣದಿಂದ ಹುಬ್ಬಳ್ಳಿ ಹಾಗು ಗದಗ ಮತ್ತು ಗ್ರಾಮೀಣ ಪ್ರದೇಶಗಳಿಗೆ ಸಮರ್ಪಕ ಬಸ್ಸು ಓಡಿಸುವಂತೆ ಆಗ್ರಹಿಸಿ ಶನಿವಾರ ಜಯ ಕರ್ನಾಟಕ ಸಂಘಟನೆಯ ಕಾರ್ಯಕರ್ತರು ವಾಯವ್ಯ ಕರ್ನಾಟಕ ಸಾರಿಗೆ ಸಂಸ್ಥೆಯ ಘಟಕ ವ್ಯವಸ್ಥಾಪಕ ಶೇಖರ ನಾಯಕ ಅವರಿಗೆ ಮನವಿ ಸಲ್ಲಿಸಿದರು.

ಸದ್ಯ ಶಾಲೆ-ಕಾಲೇಜುಗಳು ಆರಂಭವಾಗಿದ್ದು ಪ್ರತಿನಿತ್ಯ ಸಾವಿರಾರು ವಿದ್ಯಾರ್ಥಿಗಳು ಗ್ರಾಮೀಣ ಪ್ರದೇಶಗಳಿಂದ ಪಟ್ಟಣಕ್ಕೆ ವಿದ್ಯಾಭ್ಯಾಸಕ್ಕಾಗಿ ಬರುತ್ತಿದ್ದು, ವ್ಯಾಪಾರ ವಹಿವಾಟಿಗಾಗೆ ಸಾವಿರಾರು ಜನರು ನಿತ್ಯವ ಪಟ್ಟಣಕ್ಕೆ ಬರುತ್ತಾರೆ.

ಅದೆ ರೀತಿ ಲಕ್ಷ್ಮೇಶ್ವರದಿಂದ ಹುಬ್ಬಳ್ಳಿ ಮತ್ತು ಗದಗಿಗೆ ಸಾಕಷ್ಟು ಜನರು ಪ್ರಯಾಣಿಸುತ್ತಿದ್ದು, ರೈಲು ಸ್ಥಗಿತಗೊಂಡಿರುವುದರಿಂದ ಬಸ್ಸುಗಳು ಅನಿವಾರ್ಯವಾಗಿವೆ. ವಿಪರಿತವಾದ ಜನದಟ್ಟನೆಯಿಂದ ಪ್ರಯಾಣಿಕರು ನಿತ್ಯ ಪರದಾಡುತ್ತಿದ್ದಾರೆ. ಆದರಿಂದ ಬೆಳಗಿನ ಜಾವ 7 ರಿಂದ ಲಕ್ಷ್ಮೇಶ್ವರ-ಹುಬ್ಬಳ್ಳಿ- ಗದಗ ಪ್ರತಿ 10 ನಿಮೀಷಕ್ಕೆ ಒಂದು ಬಸ್ ಬಿಡುವ ವ್ಯವಸ್ಥೆ ಮಾಡಿ ಸಾರ್ವಜನಿಕರ ಗೋಳನ್ನು ತಪ್ಪಿಸಬೇಕೆಂದು ಮನವಿಯಲ್ಲಿ ಒತ್ತಾಯಿಸಿದ್ದಾರೆ.

ಕೂಡಲೇ ಸಮಸ್ಯೆ ಬಗೆಹರಿಸುವ ಮೂಲಕ ಪ್ರಯಾಣಿಕರಿಗೆ ಅನುಕೂಲ ಮಾಡಿಕೊಡಬೇಕು. ಇಲ್ಲದ್ದಿದ್ದಲ್ಲಿ ಪ್ರತಿಭಟನೆ ಅನಿರ್ವಾಯವಾಗಿದೆ ಎಂದು ಎಚ್ಚರಿಸಿದ್ದಾರೆ.

ಈ ಸಂದರ್ಭದಲ್ಲಿ ವೇದಿಕೆಯ ಅಧ್ಯಕ್ಷ ಇಸ್ಮಾಲ್ ಆಡೂರ್, ಉಪಾಧ್ಯಕ್ಷ ರಮೇಶ ಹಂಗನಕಟ್ಟಿ, ರಮೇಶ ಲಮಾಣಿ, ಇಸಾಕಬಾಷಾ ಹರಪನಹಳ್ಳಿ, ಬಸುವರಾಜ ಮೇಲಮ್ಮುರಿ, ಖಾದರಬಾಷ ರೀತ್ತಿ, ಹಜರತ ಪಟೇಲ್ ನಲವಾಡ, ರುದ್ರಗೌಡ ಪಾಟೀಲ್, ಯಂಕಪ್ಪ ಲಮಾಣಿ, ಸಲೀಂ ನಾಡಗರ್, ಮೋಹಿದ್ದಿನ ಸಿದ್ದಾಪೂರ, ಶರತ ಸೂಣಗಾರ ಸೇರಿದಂತೆ ಅನೇಕರು ಇದ್ದರು.

Exit mobile version